Kapil Sharma: ಕಪಿಲ್ ಶರ್ಮಾ ನಟನೆಯ ‘ಜ್ವಿಗಾಟೋ’ ಚಿತ್ರಕ್ಕೆ ಬೆಂಬಲ ಕೊಟ್ಟ ಅಮೂಲ್
ಅಮೂಲ್ ಅವರು ಯುನಿಕ್ ಗ್ರಾಫಿಕ್ಸ್ಗಳ ಮೂಲಕ ಗಮನ ಸೆಳೆಯುತ್ತಾರೆ. ದೊಡ್ಡ ಚಿತ್ರಗಳು ರಿಲೀಸ್ ಆಗುವ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಮೂಲಕ ವಿಶ್ ಮಾಡಿದ್ದರು.
ಕಪಿಲ್ ಶರ್ಮಾ (Kapil Sharma) ಅವರು ಕಾಮಿಡಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಹೀರೋ ಆಗಿಯೂ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ ‘ಜ್ವಿಗಾಟೋ’ ಸಿನಿಮಾ ಕಳೆದವಾರ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಪಾಸಿಟಿವ್ ವಿಮರ್ಶೆ ಬಂದಿದೆ. ಈಗ ಈ ಚಿತ್ರಕ್ಕೆ ಹಾಲಿನ ಉತ್ಪನ್ನ ಸಂಸ್ಥೆ ಅಮೂಲ್ (Amul) ಅವರು ‘ಜ್ವಿಗಾಟೋ’ ಚಿತ್ರಕ್ಕೆ ವಿಶೇಷ ಡೂಡಲ್ ಮಾಡಿದ್ದಾರೆ. ಸದ್ಯ ಈ ಪೋಸ್ಟರ್ ಸಾಕಷ್ಟು ವೈರಲ್ ಆಗುತ್ತಿದೆ. ಕಪಿಲ್ ಶರ್ಮಾ ಅವರು ಕೂಡ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಅಮೂಲ್ ಅವರು ಯುನಿಕ್ ಗ್ರಾಫಿಕ್ಸ್ಗಳ ಮೂಲಕ ಗಮನ ಸೆಳೆಯುತ್ತಾರೆ. ದೊಡ್ಡ ಚಿತ್ರಗಳು ರಿಲೀಸ್ ಆಗುವ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಮೂಲಕ ವಿಶ್ ಮಾಡಿದ್ದರು. ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆದ ಬಳಿಕವೂ ವಿಶೇಷ ಪೋಸ್ಟರ್ ಮೂಲಕ ತಂಡಕ್ಕೆ ಅಮೂಲ್ ಶುಭಕೋರಿತ್ತು. ಈಗ ‘ಜ್ವಿಗಾಟೋ’ ತಂಡಕ್ಕೆ ಅಮೂಲ್ ಕಡೆಯಿಂದ ವಿಶ್ ಸಿಕ್ಕಿದೆ.
‘ಜ್ವಿಗಾಟೋ’ ಚಿತ್ರದಲ್ಲಿ ಕಪಿಲ್ ಶರ್ಮಾ ಅವರು ಹೀರೋ ಪಾತ್ರ ಮಾಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳುವ ವ್ಯಕ್ತಿ ಫುಡ್ ಡೆಲಿವರಿ ಬಾಯ್ ಆಗುತ್ತಾನೆ. ಆತ ಏನೆಲ್ಲ ಸಮಸ್ಯೆ ಎದುರಿಸುತ್ತಾನೆ ಅನ್ನೋದು ಸಿನಿಮಾದ ಕಥೆ. ಇದೇ ಥೀಮ್ನಲ್ಲಿ ಪೋಸ್ಟರ್ ರಚಿಸಲಾಗಿದೆ. ಬೈಕ್ ಮೇಲೆ ಕಪಿಲ್ ಶರ್ಮಾ ಕೂತಿದ್ದಾರೆ. ಅವರು ಅಮೂಲ್ ಬಟರ್ ಹಿಡಿದು ನಿಂತಿದ್ದಾರೆ.
ಇದನ್ನೂ ಓದಿ: Kapil Sharma: ನ್ಯಾಯಾಲಯದ ಗೌರವಕ್ಕೆ ಅಪಮಾನದ ಆರೋಪ; ಕಪಿಲ್ ಶರ್ಮಾ ಶೋ ವಿರುದ್ಧ ಬಿತ್ತು FIR!
#Amul Topical: Quirky Bollywood film about the life of a delivery service man! pic.twitter.com/IKXwquTWDv
— Amul.coop (@Amul_Coop) March 20, 2023
‘ಡೆಲಿವರಿ ಸರ್ವಿಸ್ ಮ್ಯಾನ್‌ನ ಜೀವನದ ಬಗ್ಗೆ ಸಿದ್ಧವಾದ ಬಾಲಿವುಡ್ ಸಿನಿಮಾ’ ಎಂದು ಅಮೂಲ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘ಬಟರ್ನ ಜ್ವಿಗಾಟೋ ಮಾಡಿ’ ಎಂದು ಪೋಸ್ಟ್ ಮಾಡಲಾಗಿದೆ. ಇದನ್ನು ರೀಟ್ವೀಟ್ ಮಾಡಿಕೊಂಡಿರುವ ಕಪಿಲ್ ಶರ್ಮಾ ಅವರು ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಈ ಪೋಸ್ಟ್ ನಾಲ್ಕು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ. 178ಕ್ಕೂ ಅಧಿಕ ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ: Akshay Kumar: ‘ನಾನು ಕೆಲಸ ಮಾಡುತ್ತಿರೋದು ಹಣಕ್ಕಾಗಿ ಅಲ್ಲ’; ಅಚ್ಚರಿಯ ವಿಚಾರ ಹೇಳಿಕೊಂಡ ಅಕ್ಷಯ್ ಕುಮಾರ್!
ನಂದಿತಾ ದಾಸ್ ಅವರು ‘ಜ್ವಿಗಾಟೋ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ ಎಂದು ಅನೇಕರು ಬರೆದುಕೊಂಡಿದ್ದಾರೆ. ಶಹಾನಾ ಗೋಸ್ವಾಮಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Tue, 21 March 23