AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karan Johar: ಐಡಿ ಕಾರ್ಡ್​ ತೋರಿಸದೇ ಏರ್​ಪೋರ್ಟ್​ ಒಳಗೆ ನುಗ್ಗಲು ಯತ್ನಿಸಿದ ಕರಣ್​ ಜೋಹರ್​; ವಿಡಿಯೋ ವೈರಲ್​

Karan Johar Viral Video: ಕರಣ್​ ಜೋಹರ್ ಅವರು ಐಡೆಂಟಿಟಿ ಕಾರ್ಡ್​ ತೋರಿಸದೇ ಮುಂಬೈ ವಿಮಾನ ನಿಲ್ದಾಣದ ಒಳಗೆ ಹೋಗಲು ಮುಂದಾದರು. ಆಗ ಅವರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದರು.

Karan Johar: ಐಡಿ ಕಾರ್ಡ್​ ತೋರಿಸದೇ ಏರ್​ಪೋರ್ಟ್​ ಒಳಗೆ ನುಗ್ಗಲು ಯತ್ನಿಸಿದ ಕರಣ್​ ಜೋಹರ್​; ವಿಡಿಯೋ ವೈರಲ್​
ಕರಣ್ ಜೋಹರ್
ಮದನ್​ ಕುಮಾರ್​
|

Updated on:Mar 21, 2023 | 10:30 PM

Share

ನಿರ್ಮಾಪಕ ಕರಣ್​ ಜೋಹರ್​ (Karan Johar) ಅವರು ಸಖತ್​ ಜನಪ್ರಿಯತೆ ಹೊಂದಿದ್ದಾರೆ. ಹಾಗಂತ ಸರ್ಕಾರದ ನಿಯಮಗಳನ್ನು ಮುರಿಯಲು ಸಾಧ್ಯವೇ? ಖಂಡಿತಾ ಇಲ್ಲ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣ (Mumbai Airport) ಪ್ರವೇಶಿಸುವಾಗ ಮೈ ಮರೆತಿದ್ದಾರೆ. ಸೆಲೆಬ್ರಿಟಿ ಎಂಬ ಕಾರಣಕ್ಕೋ ಏನೋ ತಮ್ಮ ಗುರುತಿನ ಚೀಟಿಯನ್ನು ತೋರಿಸದೇ ಏರ್​ಪೋರ್ಟ್​ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿ ಡ್ಯೂಟಿ ಮಾಡುತ್ತಾ ಇದ್ದಿದ್ದು ಓರ್ವ ಖಡಕ್​ ಆಫೀಸರ್​! ಹಾಗಾಗಿ ಕರಣ್​ ಜೋಹರ್​ ಅವರು ನಿಯಮ ಉಲ್ಲಂಘಿಸಲು ಸಾಧ್ಯವಾಗಿಲ್ಲ. ಪಾಪರಾಜಿಗಳ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ವಿಡಿಯೋ (Karan Johar Viral Video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಸೆಲೆಬ್ರಿಟಿಗಳು ವಿಮಾನ ನಿಲ್ದಾಣಕ್ಕೆ ಬಂದಾಗ ಅವರ ಫೋಟೋಗಳನ್ನು ಕ್ಲಿಕ್ಕಿಸಲು ಪಾಪರಾಜಿಗಳು ಕಾದು ಕುಳಿತಿರುತ್ತಾರೆ. ಹಾಗಾಗಿ ಅಲ್ಲಿ ನಟ-ನಟಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಬಹುಬೇಗನೆ ಜಗಜ್ಜಾಹೀರಾಗುತ್ತದೆ. ಕರಣ್​ ಜೋಹರ್​ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರು ಐಡಿ ಕಾರ್ಡ್ ತೋರಿಸದೇ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಲು ಯತ್ನಿಸಿರುವುದು ಬಹಿರಂಗ ಆಗಿದೆ.

ಇದನ್ನೂ ಓದಿ
Image
Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಇದನ್ನೂ ಓದಿ: ‘ಆಲಿಯಾ ಮಗು ನೇರವಾಗಿ ಕರಣ್​ ಜೋಹರ್​ ಕಚೇರಿಗೆ​ ಹೋಗುತ್ತೆ ಅಂದ್ಕೊಂಡಿದ್ವಿ’:​ ಟ್ರೋಲ್​ ಮಾಡಿದ ನೆಟ್ಟಿಗರು

ಮಂಗಳವಾರ (ಮಾರ್ಚ್​ 21) ಬೆಳಗ್ಗೆ ಕರಣ್​ ಜೋಹರ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿದ್ದ ಪಾಪರಾಜಿಗಳಿಗೆ ಅವರು ಪೋಸ್​ ನೀಡಿದರು. ಬಳಿಕ ಐಡಿ ಕಾರ್ಡ್​ ತೋರಿಸದೇ ಒಳಗೆ ಹೋಗಲು ಮುಂದಾದರು. ಆಗ ಅವರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದರು. ತಾವು ಗುರುತಿನ ಚೀಟಿ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಇತರೆ ದಾಖಲೆಗಳನ್ನು ತೋರಿಸಲಿಲ್ಲ ಎಂಬುದು ಕರಣ್​ ಜೋಹರ್​ಗೆ ಮನವರಿಕೆ ಆಯಿತು. ಕೂಡಲೇ ಅವರು ತಮ್ಮ ಬ್ಯಾಗ್​ ಪೂರ್ತಿ ಹುಡುಕಾಡಿ, ಅದರಲ್ಲಿ ಇದ್ದ ದಾಖಲೆಗಳನ್ನು ಅಧಿಕಾರಿಗಳಿಗೆ ತೋರಿಸಿದರು. ಆ ಬಳಿಕವೇ ಅವರಿಗೆ ವಿಮಾನ ನಿಲ್ದಾಣ ಪ್ರವೇಶಿಸಲು ಅನುಮತಿ ಸಿಕ್ಕಿತು.

ಸೆಲೆಬ್ರಿಟಿಗಳು ಕೆಲವೊಮ್ಮೆ ನಿಯಮ ಉಲ್ಲಂಘಿಸಲು ಪ್ರಯತ್ನಿಸುತ್ತಾರೆ. ತಾವು ತುಂಬ ಫೇಮಸ್​ ಆಗಿರುವುದರಿಂದ ಐಡಿ ಕಾರ್ಡ್​ ತೋರಿಸುವ ಅಗತ್ಯ ಇಲ್ಲ ಎಂದು ಕೆಲವರು ಭಾವಿಸುವುದುಂಟು. ಆದರೆ ರೂಲ್ಸ್​ ಎಲ್ಲರಿಗೂ ಒಂದೇ ಎಂಬುದಕ್ಕೆ ಕರಣ್​ ಜೋಹರ್​ ಅವರ ಈ ಹೊಸ ವೈರಲ್​ ವಿಡಿಯೋನೇ ಸಾಕ್ಷಿ.

ಇದನ್ನೂ ಓದಿ: Karan Johar: ಕರಣ್​ ಜೋಹರ್​ ಮಕ್ಕಳ ವಿಡಿಯೋ ವೈರಲ್​; ವಿಮಾನ ನಿಲ್ದಾಣದಲ್ಲಿ ನಮಸ್ತೆ ಮಾಡೋದು ಕಲಿಸಿದ ನಿರ್ಮಾಪಕ

ಬಾಲಿವುಡ್​ನಲ್ಲಿ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಕರಣ್​ ಜೋಹರ್​ ಅವರು ಸಕ್ರಿಯರಾಗಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:30 pm, Tue, 21 March 23

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು