ಸಲ್ಮಾನ್ ಖಾನ್ ಒಟ್ಟೂ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಪ್ರಾಪರ್ಟಿ ಬಗ್ಗೆ ಇಲ್ಲಿದೆ ಮಾಹಿತಿ

Salman Khan Net Worth: ಅನೇಕ ಬ್ರ್ಯಾಂಡ್​ಗಳಿಗೆ ಅವರು ಅಂಬಾಸಿಡರ್ ಆಗಿದ್ದಾರೆ. ಇದರಿಂದಲೂ ಸಲ್ಲುಗೆ ಹಣ ಬರುತ್ತದೆ. ಹಾಗಾದರೆ, ಸಲ್ಮಾನ್ ಖಾನ್ ಹೊಂದಿರುವ ಒಟ್ಟೂ ಆಸ್ತಿ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ಸಲ್ಮಾನ್ ಖಾನ್ ಒಟ್ಟೂ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಪ್ರಾಪರ್ಟಿ ಬಗ್ಗೆ ಇಲ್ಲಿದೆ ಮಾಹಿತಿ
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Feb 16, 2023 | 3:13 PM

ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಫೇಮಸ್. ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಅವರು ಇನ್ನೂ ಮದುವೆ ಆಗಿಲ್ಲ. ಭಾರತ ಕಂಡ ಸೂಪರ್ ಸ್ಟಾರ್​ಗಳ ಪೈಕಿ ಸಲ್ಮಾನ್ ಖಾನ್​​ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಹಿರಿತೆರೆ ಜೊತೆಗೆ ಕಿರುತೆರೆಯಲ್ಲೂ ಸಲ್ಲು ಆ್ಯಕ್ಟೀವ್ ಆಗಿದ್ದಾರೆ. ಪ್ರತಿಷ್ಠಿತ ‘ಬಿಗ್ ಬಾಸ್​’ (Bigg Boss) ಶೋನ ಅವರು ಹಿಂದಿಯಲ್ಲಿ ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಖಾನ್ ಇದಕ್ಕೆಲ್ಲ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅನೇಕ ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅನೇಕ ಬ್ರ್ಯಾಂಡ್​ಗಳಿಗೆ ಅವರು ಅಂಬಾಸಿಡರ್ ಆಗಿದ್ದಾರೆ. ಇದರಿಂದಲೂ ಸಲ್ಲುಗೆ ಹಣ ಬರುತ್ತದೆ. ಹಾಗಾದರೆ, ಸಲ್ಮಾನ್ ಖಾನ್ ಹೊಂದಿರುವ ಒಟ್ಟೂ ಆಸ್ತಿ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

100 ಕೋಟಿ ರೂ. ಸಂಭಾವನೆ ಪಡೆಯುವ ನಟ

ಸಲ್ಮಾನ್ ಖಾನ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಫ್ಲಾಪ್ ಸಿನಿಮಾಗಳು ಕೂಡ 150 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದ ಉದಾಹರಣೆ ಇದೆ. ಇದು ಸಲ್ಲು ತಾಕತ್ತು. ಸಲ್ಮಾನ್ ನಟನೆಯ ಸಿನಿಮಾಗಳ ಒಟಿಟಿ ಹಾಗೂ ಟಿವಿ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗುತ್ತದೆ. ಈ ಎಲ್ಲಾ ಕಾರಣಕ್ಕೆ ಸಲ್ಲುಗೆ ಹೆಚ್ಚು ಸಂಭಾವನೆ ನೀಡೋಕೆ ನಿರ್ಮಾಪಕರು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಪ್ರತಿ ಸಿನಿಮಾಗೆ ಅವರು 100+ ಕೋಟಿ ರೂಪಾಯಿ ಹಣ ಪಡೆಯುತ್ತಾರೆ ಎನ್ನಲಾಗಿದೆ. ಇದರ ಜೊತೆಗೆ ಬಿಗ್ ಬಾಸ್ ನಡೆಸಿಕೊಡೋದಕ್ಕೂ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತದೆ.

ಬಾಂದ್ರಾ ಅಪಾರ್ಟ್​ಮೆಂಟ್​

ಸಲ್ಮಾನ್ ಖಾನ್ ಅವರ ಕುಟುಂಬ ಬಾಂದ್ರಾದ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದೆ. ಈ ಅಪಾರ್ಟ್​ಮೆಂಟ್ ಎದುರು ಸದಾ ಫ್ಯಾನ್ಸ್​ ನೆರೆದಿರುತ್ತಾರೆ. ಈ ಅಪಾರ್ಟ್​​ಮೆಂಟ್​ನ ಮೌಲ್ಯ 100 ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ
Image
‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’; ಡ್ಯಾನ್ಸ್ ಮಾಡಲು ಹೋಗಿ ನಗೆಪಾಟಲಿಗೀಡಾದ ಸಲ್ಮಾನ್ ಖಾನ್
Image
ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು
Image
134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್​’; ಸ್ಟಾರ್​ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್

ಪನ್ವೇಲ್ ಫಾರ್ಮ್​ಹೌಸ್

ಸಲ್ಮಾನ್ ಖಾನ್ ಅವರು ಮುಂಬೈ ಹೊರವಲಯ ಪನ್ವೇಲ್​ನಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಕುಟುಂಬ ಹಾಗೂ ಗೆಳೆಯರ ಜೊತೆ ಇಲ್ಲಿ ಅವರು ಆಗಾಗ ಸಮಯ ಕಳೆದು ಬರುತ್ತಾರೆ. 150 ಎಕರೆ ಜಾಗದಲ್ಲಿ ಫಾರ್ಮ್​ಹೌಸ್ ಇದೆ. ಜಿಮ್, ಸ್ವಿಮ್ಮಿಂಗ್​ಪೂಲ್​ ಸೇರಿದಂತೆ ಎಲ್ಲಾ ವ್ಯವಸ್ಥೆ ಇದೆ. ಇದರ ಮೌಲ್ಯ 80 ಕೋಟಿ ರೂಪಾಯಿಗೂ ಹೆಚ್ಚಿದೆ.

ದುಬೈನಲ್ಲಿ ಮನೆ

ಸೆಲೆಬ್ರಿಟಿಗಳಿಗೆ ದುಬೈ ಅನ್ನೋದು ಖಾಯಂ ಭೇಟಿ ನೀಡುವ ಸ್ಥಳ ಇದ್ದಂತೆ. ಹೀಗಾಗಿ, ಅನೇಕ ಸೆಲೆಬ್ರಿಟಿಗಳು ಅಲ್ಲಿ ಮನೆ ಹೊಂದೋಕೆ ಆದ್ಯತೆ ನೀಡುತ್ತಾರೆ. ಭುರ್ಜ್​ ಖಲಿಫಾ ಬಳಿ ಸಲ್ಲು ಮನೆ ಹೊಂದಿದ್ದಾರೆ. ಅವರು ದುಬೈಗೆ ತೆರಳಿದಾಗ ಅಲ್ಲಿಯೇ ಉಳಿದುಕೊಳ್ಳುತ್ತಾರೆ.

ಇತರ ಪ್ರಾಪರ್ಟಿ

ಪನ್ವೇಲ್ ಮಾತ್ರ ಅಲ್ಲದೆ ಸಲ್ಮಾನ್ ಖಾನ್ ಅವರು ಮಹಾರಾಷ್ಟ್ರದ ಗೊರಾಯಿ ಅಲ್ಲಿ 5 ಬಿಎಚ್​​ಕೆ ಬಂಗಲೆ ಹೊಂದಿದ್ದಾರೆ. ಸಮುದ್ರದ ಸಮೀಪ ಈ ಮನೆ ಇದೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಅವರು ಇಲ್ಲಿಗೆ ತೆರಳುತ್ತಾರೆ.

ಸ್ವಂತ ನೌಕೆ

ಸಲ್ಲು ಅವರು ತಮ್ಮದೇ ನೌಕೆ ಹೊಂದಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿ. 2016ರಲ್ಲಿ ಸಲ್ಲು ಇದನ್ನು ಖರೀದಿ ಮಾಡಿದ್ದರು. ಸಮುದ್ರದ ಮಧ್ಯೆ ಗೆಳೆಯರ ಜತೆ ಪಾರ್ಟಿ ಮಾಡೋಕೆ ಇದನ್ನು ಸಲ್ಮಾನ್ ಖಾನ್ ಬಳಕೆ ಮಾಡುತ್ತಾರೆ.

ಬೀಯಿಂಗ್ ಹ್ಯೂಮನ್

ಸಲ್ಮಾನ್ ಖಾನ್ ಬೀಯಿಗ್ ಹ್ಯೂಮನ್ ಹೆಸರಿನ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ವಿವಿಧ ರೀತಿಯ ಬಟ್ಟೆಗಳನ್ನು ಇದರ ಅಡಿಯಲ್ಲಿ ತಯಾರಿಸಲಾಗುತ್ತದೆ. ಈ ಕಂಪನಿ ವ್ಯಾಲುವೇಷನ್ 235 ಕೋಟಿ ರೂಪಾಯಿ ಮೀರಿದೆ

ಇದನ್ನೂ ಓದಿ: ‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’; ಡ್ಯಾನ್ಸ್ ಮಾಡಲು ಹೋಗಿ ನಗೆಪಾಟಲಿಗೀಡಾದ ಸಲ್ಮಾನ್ ಖಾನ್

ಒಟ್ಟೂ ಆಸ್ತಿ

ಸಲ್ಮಾನ್ ಖಾನ್ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರಿಂದಲೂ ಅವರಿಗೆ ಹಣ ಬರುತ್ತದೆ. ಹಲವು ಐಷಾರಾಮಿ ಕಾರುಗಳು ಸಲ್ಲು ಬಳಿ ಇವೆ. ರೇಂಜ್ ರೋವರ್​, ಟೊಯಾಟೋ ಲ್ಯಾಂಡ್ ಕ್ರ್ಯೂಸ್ ಮೊದಲಾದ ಕಾರುಗಳಿವೆ. ಅವರ ಒಟ್ಟೂ ಆಸ್ತಿ 3000 ಕೋಟಿ ರೂಪಾಯಿ ಸಮೀಪ ಇದೆ ಎಂದು ಅಂದಾಜಿಸಲಾಗಿದೆ.

ಶ್ರೀಲಕ್ಷ್ಮಿ ಎಚ್​.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:13 pm, Thu, 16 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ