ಜಾಹೀರಾತಿನ ಪೋಸ್ಟ್ನೊಂದಿಗೆ ಮಗುವಿನ ಫೋಟೋ ಹಂಚಿಕೊಂಡ ಆಲಿಯಾ ಭಟ್
ಮಕ್ಕಳ ಮುಖ ರಿವೀಲ್ ಮಾಡುವುದರಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮದೇ ಆದ ನಿಲುವು ಹೊಂದಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಈ ವಿಚಾರದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಹೇಳಿಲ್ಲ.
ನಟಿ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ ದಂಪತಿಯ ಕುಟುಂಬಕ್ಕೆ ಕಳೆದ ವರ್ಷ ಹೆಣ್ಣು ಮಗುವಿನ ಆಗಮನ ಆಗಿದೆ. ಆಲಿಯಾ ಮಗಳಿಗೆ ರಹಾ ಎಂದು ಹೆಸರು ಇಟ್ಟಿದ್ದಾರೆ. ಈವರೆಗೆ ಮಗುವಿನ ಫೋಟೋವನ್ನು ಆಲಿಯಾ ರಿವೀಲ್ ಮಾಡಿಲ್ಲ. ಆದರೆ, ಈಗ ಅವರು ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಇದು ಆಲಿಯಾ ಭಟ್ ಮಗು ಎಂದು ಅನೇಕರು ಭಾವಿಸಿದ್ದರು. ಆದರೆ ಈ ಊಹೆ ತಪ್ಪು. ಇದು ಜಾಹೀರಾತಿನ ಫೋಟೋ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಕ್ಕಳ ಮುಖ ರಿವೀಲ್ ಮಾಡುವುದರಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮದೇ ಆದ ನಿಲುವು ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಫೋಟೋವನ್ನು ರಿವೀಲ್ ಮಾಡೋಕೆ ಇಷ್ಟಪಡುವುದಿಲ್ಲ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಗಳ ಮುಖವನ್ನು ಸದ್ಯಕ್ಕಂತೂ ರಿವೀಲ್ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಈ ವಿಚಾರದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಹೇಳಿಲ್ಲ. ಹೀಗಿರುವಾಗಲೇ ಆಲಿಯಾ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿರುವುದು ಆಲಿಯಾ ಮಗು ಎಂದು ಅನೇಕರಿಗೆ ತಪ್ಪು ಗೃಹಿಕೆ ಆಗಿದೆ.
ಚಿತ್ತಾರಗಳ ಮಧ್ಯೆ ಮಗುವೊಂದು ಕುಳಿತಿದೆ. ಈ ಮಗು ಸಖತ್ ಕ್ಯೂಟ್ ಆಗಿದೆ. ಪೇಸ್ಟಲ್ ಪಿಂಕ್ ಬಣ್ಣದ ಬಟ್ಟೆಯನ್ನು ಮಗು ತೊಟ್ಟಿದೆ. ಅಂದಹಾಗೆ ಇದು ಬಟ್ಟೆ ಬ್ರ್ಯಾಂಡ್ ಒಂದರ ಪ್ರಮೋಷನ್ಗೆ ಹಾಕಿರುವ ಫೋಟೋ. ಅನೇಕರು ಇದು ಆಲಿಯಾ ಭಟ್ ಮಗು ಎಂದೇ ಭಾವಿಸಿದ್ದರು. ‘ನಾನು ಮೊದಲಿಗೆ ನೋಡಿದಾಗ ಇದು ನಿಮ್ಮದೇ ಮಗು ಎಂದುಕೊಂಡೆ’ ಎಂಬುದಾಗಿ ಕೆಲವರು ಕಮೆಂಟ್ ಮಾಡಿದ್ದಾರೆ. ‘ರಹಾ ಇಷ್ಟೊಂದು ಬೆಳೆದುಬಿಟ್ಟಳಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ರಹಾಗೆ ಈಗತಾನೇ ಮೂರು ತಿಂಗಳು. ಅವಳು ಹೀಗೆ ನೇರವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Alia Bhatt: ಆಲಿಯಾ ಭಟ್ಗೆ ಅನುಪಮ್ ಖೇರ್ ಮೆಚ್ಚುಗೆ; ಕಂಗನಾ ಪ್ರತಿಕ್ರಿಯೆ ತಿಳಿಯಲು ಕಾದಿರುವ ನೆಟ್ಟಿಗರು
ಕಳೆದ ವರ್ಷ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ಅವರು ತೆರೆಹಂಚಿಕೊಂಡಿದ್ದರು. ‘ರಾಣಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಜತೆ ಅವರು ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಜುಲೈ 28ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ