134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್’; ಸ್ಟಾರ್ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್
ಎಂಸಿ ಸ್ಟಾನ್ ಅವರು ದೊಡ್ಮನೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ಆರಂಭದಲ್ಲಿ ಮನೆಯವರನ್ನು ಬಿಟ್ಟು ಇರೋದು ಕಷ್ಟ ಆಗುತ್ತಿತ್ತು. ಈ ಕಾರಣಕ್ಕೆ ತಾವು ದೊಡ್ಮನೆ ತೊರೆಯುವುದಾಗಿ ಹೇಳುತ್ತಿದ್ದರು.
‘ಹಿಂದಿ ಬಿಗ್ ಬಾಸ್ ಸೀಸನ್ 16’ (Bigg Boss 16 Finale) ಭಾನುವಾರ (ಫೆಬ್ರವರಿ 13) ಪೂರ್ಣಗೊಂಡಿದೆ. ಅದ್ದೂರಿ ವೇದಿಕೆಯಲ್ಲಿ ಫಿನಾಲೆ ಕಾರ್ಯಕ್ರಮ ನಡೆದಿದೆ. ಸಲ್ಮಾನ್ ಖಾನ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದರು. 134 ದಿನಗಳ ಪ್ರಯಾಣವನ್ನು ಮುಗಿಸಿ ಎಂಸಿ ಸ್ಟಾನ್ (MC Stan) ಅವರು ಟ್ರೋಫಿ ಗೆದ್ದಿದ್ದಾರೆ. ವೃತ್ತಿಯಲ್ಲಿ ರ‍್ಯಾಪರ್ ಆಗಿರುವ ಅವರು ಅನೇಕ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಅವಾರ್ಡ್ ಗೆದ್ದಿದ್ದಾರೆ. ಅವರಿಗೆ ಟ್ರೋಫಿ, 31.8 ಲಕ್ಷ ರೂಪಾಯಿ ಹಾಗೂ ಹ್ಯುಂಡೈ ಐ 10 ನಿಯೋಸ್ ಕಾರು ಸಿಕ್ಕಿದೆ.
ಎಂಸಿ ಸ್ಟಾನ್ ಅವರು ದೊಡ್ಮನೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ಆರಂಭದಲ್ಲಿ ಮನೆಯವರನ್ನು ಬಿಟ್ಟು ಇರೋದು ಕಷ್ಟ ಆಗುತ್ತಿತ್ತು. ಈ ಕಾರಣಕ್ಕೆ ತಾವು ದೊಡ್ಮನೆ ತೊರೆಯುವುದಾಗಿ ಹೇಳುತ್ತಿದ್ದರು. ಆದರೆ, ವೀಕೆಂಡ್ನಲ್ಲಿ ಸ್ಟಾನ್ಗೆ ಸಲ್ಮಾನ್ ಖಾನ್ ಅವರಿಂದ ಮೋಟಿವೇಷನ್ ಸಿಕ್ಕಿತ್ತು. ಇದರಿಂದ ಅವರು ಮನೆಯಲ್ಲೇ ಮುಂದುವರಿಯಲು ನಿರ್ಧರಿಸಿದರು.
ಎಂಸಿ ಸ್ಟಾನ್ ಅವರು ಕೊನೆಯವರೆಗೂ ಭರ್ಜರಿ ಪೈಪೋಟಿ ನೀಡಿದರು. ಅಂತಿಮವಾಗಿ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಟಾನ್ ಅವರು ತಾವಾಗೇ ಇರೋಕೆ ಹೆಚ್ಚು ಪ್ರಯತ್ನ ಮಾಡಿದ್ದರು. ಇದು ಅನೇಕರಿಗೆ ಇಷ್ಟವಾಗಿದೆ. ಪ್ರಿಯಾಂಕಾ ಚೌಧರಿ ಅವರು ಎರಡನೇ ರನ್ನರ್ ಅಪ್ ಆದರೆ, ಶಿವ ಠಾಕ್ರೆ ಮೊದಲ ರನ್ನರ್ ಅಪ್ ಆಗಿದ್ದಾರೆ. ಎಂಸಿ ಸ್ಟಾನ್ ಗರ್ಲ್ಫ್ರೆಂಡ್ ಅನಮ್ ಶೇಖ್ ಅವರು ಫಿನಾಲೆಗೆ ಹಾಜರಿ ಹಾಕಿದ್ದರು.
ಇದನ್ನೂ ಓದಿ: ಹೊಸ ಚಿತ್ರಕ್ಕಾಗಿ ಒಂದಾದ ಸಲ್ಮಾನ್ ಖಾನ್-ಆಮಿರ್ ಖಾನ್; ಬಿಗ್ ಬಜೆಟ್ ಚಿತ್ರಕ್ಕೆ ಶೀಘ್ರವೇ ಮುಹೂರ್ತ?
ಬಾಲಿವುಡ್ನ ಸನ್ನಿ ಡಿಯೋಲ್, ಅಮೀಷಾ ಪಟೇಲ್ ಫಿನಾಲೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಕೂಡ ವಿವಿಧ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಗ್ ಬಾಸ್ ಸಾಮಾನ್ಯವಾಗಿ 100 ದಿನಕ್ಕೆ ಪೂರ್ಣಗೊಳ್ಳುತ್ತದೆ. ಆದರೆ, ಹಿಂದಿ ಬಿಗ್ ಬಾಸ್ ಒಂದು ತಿಂಗಳು ಹೆಚ್ಚುವರಿಯಾಗಿ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ