AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಚಿತ್ರಕ್ಕಾಗಿ ಒಂದಾದ ಸಲ್ಮಾನ್ ಖಾನ್-ಆಮಿರ್​ ಖಾನ್; ಬಿಗ್ ಬಜೆಟ್ ಚಿತ್ರಕ್ಕೆ ಶೀಘ್ರವೇ ಮುಹೂರ್ತ?

ಇತ್ತೀಚೆಗೆ ಆಮಿರ್ ಖಾನ್ ಕುಟುಂಬದ ಜತೆ ಸಲ್ಮಾನ್ ಖಾನ್ ಸಮಯ ಕಳೆದು ಬಂದಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಭೇಟಿ ಹಿಂದಿರುವ ಉದ್ದೇಶ ಏನು ಎಂಬುದು ಅನೇಕರ ಪ್ರಶ್ನೆ ಆಗಿತ್ತು.

ಹೊಸ ಚಿತ್ರಕ್ಕಾಗಿ ಒಂದಾದ ಸಲ್ಮಾನ್ ಖಾನ್-ಆಮಿರ್​ ಖಾನ್; ಬಿಗ್ ಬಜೆಟ್ ಚಿತ್ರಕ್ಕೆ ಶೀಘ್ರವೇ ಮುಹೂರ್ತ?
ಆಮಿರ್ ಖಾನ್ ಕುಟುಂಬದ ಜತೆ ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Feb 02, 2023 | 7:55 AM

Share

ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಸ್ಟಾರ್ ಹೀರೋಗಳಿಗೆ ಇರುವ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಈಗ ಇಬ್ಬರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಇಬ್ಬರೂ ಹೀರೋ ಅಲ್ಲ. ಸಲ್ಮಾನ್ ಚಿತ್ರಕ್ಕೆ ಆಮಿರ್ (Aamir Khan) ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಸದ್ಯ ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇತ್ತೀಚೆಗೆ ಆಮಿರ್ ಖಾನ್ ಕುಟುಂಬದ ಜತೆ ಸಲ್ಮಾನ್ ಖಾನ್ ಸಮಯ ಕಳೆದು ಬಂದಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಭೇಟಿ ಹಿಂದಿರುವ ಉದ್ದೇಶ ಏನು ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಒಟ್ಟಾಗಿ ಸಿನಿಮಾ ಮಾಡೋದು ಬಹುತೇಕ ಖಚಿತವಾಗಿದೆ ಎಂದು ಪಿಂಕ್​ವಿಲ್ಲಾ ವೆಬ್​ಸೈಟ್ ವರದಿ ಮಾಡಿದೆ.

ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಅವರು ಸಿನಿಮಾ ರಂಗದಿಂದ ದೂರ ಇಲ್ಲ. ಅವರು ಕಳೆದ ಆರು ತಿಂಗಳಿಂದ ಸ್ಕ್ರಿಪ್ಟ್ ಒಂದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ಆರ್​.ಎಸ್​. ಪ್ರಸನ್ನ ಅವರು ಆಮಿರ್ ಖಾನ್​ ಜತೆ ಇದ್ದಾರೆ. ಈಗ ಬಹುತೇಕ ಸ್ಕ್ರಿಪ್ಟ್ ರೆಡಿ ಆಗಿದ್ದು ನಾಯಕನ ಪಾತ್ರಕ್ಕೆ ಸಲ್ಮಾನ್ ಖಾನ್ ಸೂಕ್ತ ಎಂದು ಅವರಿಗೆ ಅನಿಸಿದೆ. ಹೀಗಾಗಿ, ಸಲ್ಮಾನ್ ಖಾನ್​ಗೆ ಅವರು ಈ ಆಫರ್ ನೀಡಿದ್ದಾರೆ. ಸಲ್ಮಾನ್ ಖಾನ್ ಕಥೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
Image
ಐದು ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ ‘ಪಠಾಣ್​’; ಭಾರತದಲ್ಲಿ ಎಷ್ಟು ಕಲೆಕ್ಷನ್​?
Image
ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

ಪ್ರಸನ್ನ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಆಮಿರ್ ಖಾನ್ ಸಿನಿಮಾ ನಿರ್ಮಾಣದ ಜತೆಗೆ ಕಥೆಯ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ಸಲ್ಮಾನ್ ಹಾಗೂ ಆಮಿರ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಲ್ಲುಗೆ ಆಮಿರ್​ ಈ ರೀತಿ ಸಿನಿಮಾ ಆಫರ್ ನೀಡಿರೋದು ಇದೇ ಮೊದಲು.

ಇದನ್ನೂ ಓದಿ: ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ

ಇದೇ ವೇಳೆ ಆಮಿರ್​ಗೆ ದೊಡ್ಡ ಪರದೆಗೆ ಮರಳುವಂತೆ ಸಲ್ಮಾನ್ ಖಾನ್ ಕೋರಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸೋಲಿನ ಬಳಿಕ ಆಮಿರ್ ಖಾನ್ ಅವರು ನಟನೆಯಿಂದ ದೂರ ಇರುವ ಘೋಷಣೆ ಮಾಡಿದರು. ಕುಟುಂಬದ ಜತೆ ಸಮಯ ಕಳೆಯೋದು ಅವರ ಉದ್ದೇಶವಾಗಿದೆ. ಇದರ ಜತೆಗೆ ಮನೆಯಲ್ಲೇ ಕುಳಿತು ಸ್ಕ್ರಿಪ್ಟ್ ಕೆಲಸದಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ