ಐದು ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ ‘ಪಠಾಣ್’; ಭಾರತದಲ್ಲಿ ಎಷ್ಟು ಕಲೆಕ್ಷನ್?
Pathaan Collection Day 5: ಜನವರಿ 26ರಂದು ರಿಲೀಸ್ ಆದ ಈ ಚಿತ್ರ ಭಾರತದಲ್ಲಿ ಪ್ರತಿ ದಿನ 50+ ಕೋಟಿ ಗಳಿಕೆ ಮಾಡಿದೆ. ವಿಶ್ವ ಮಟ್ಟದಲ್ಲಿ ಈ ಚಿತ್ರದ ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ ಅನ್ನೋದು ವಿಶೇಷ.
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಅಂದುಕೊಂಡಿದ್ದಕಿಂತಲೂ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದೆ. ಈ ಚಿತ್ರವನ್ನು ಫ್ಯಾನ್ಸ್ ಮಾತ್ರ ಅಲ್ಲ ಸಿನಿಪ್ರಿಯರೂ ಇಷ್ಟಪಟ್ಟಿದ್ದಾರೆ. ಪರಿಣಾಮ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಜನವರಿ 26ರಂದು ರಿಲೀಸ್ ಆದ ಈ ಚಿತ್ರ ಭಾರತದಲ್ಲಿ ಪ್ರತಿ ದಿನ 50+ ಕೋಟಿ ಗಳಿಕೆ ಮಾಡಿದೆ. ವಿಶ್ವ ಮಟ್ಟದಲ್ಲಿ ‘ಪಠಾಣ್’ (Pathan Movie) ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ ಅನ್ನೋದು ವಿಶೇಷ.
ಭಾರತದ ಬಾಕ್ಸ್ ಆಫೀಸ್ ಉಡೀಸ್
ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಅಬ್ಬರಿಸಿದ್ದಾನೆ. ಈ ಚಿತ್ರ ನಾಲ್ಕು ದಿನಕ್ಕೆ 212.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬುಧವಾರ (ಜನವರಿ 25) 55 ಕೋಟಿ ರೂ., ಗುರುವಾರ (ಜನವರಿ 26) 68 ಕೋಟಿ ರೂ., ಶುಕ್ರವಾರ 38 ಕೋಟಿ ರೂ.(ಜನವರಿ 27) ಹಾಗೂ ಶನಿವಾರ 51.50 (ಜನವರಿ 28) ಕೋಟಿ ರೂಪಾಯಿ ಅನ್ನು ಸಿನಿಮಾ ಬಾಚಿಕೊಂಡಿದೆ. ಈ ಮೂಲಕ ದೇಶೀಯ ಕಲೆಕ್ಷನ್ 212 ಕೋಟಿ ರೂಪಾಯಿ ಆಗಿದೆ.
ಭಾನುವಾರದ ಲೆಕ್ಕಾಚಾರ
ಭಾನುವಾರ ವಾರಾಂತ್ಯದ ದಿನ. ಈ ಸಮಯದಲ್ಲಿ ಜನರು ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಭಾನುವಾರವೂ (ಜನವರಿ 29) ಚಿತ್ರ ಅಬ್ಬರಿಸಿದೆ. ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ ಈ ಚಿತ್ರ ಭಾನುವಾರ 60-62 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಂದರೆ ಚಿತ್ರದ ಕಲೆಕ್ಷನ್ ಐದು ದಿನಕ್ಕೆ 270 ಕೋಟಿ ರೂ. ದಾಟಿದೆ. ಹಿಂದಿ ಚಿತ್ರರಂಗದಲ್ಲಿ ಈ ರೀತಿಯ ಅಪರೂಪದ ದಾಖಲೆಯನ್ನು ಯಾರೂ ಮಾಡಿಲ್ಲ.
‘PATHAAN’ NEW MILESTONE: FASTEST TO HIT ₹ 250 CR… AGAIN OVERTAKES ‘KGF2’, ‘BAAHUBALI 2’, ‘DANGAL’… ⭐️ #Pathaan: Will cross ₹ 250 cr today [Day 5] ⭐️ #KGF2 #Hindi: Day 7 ⭐️ #Baahubali2 #Hindi: Day 8 ⭐️ #Dangal: Day 10 ⭐️ #Sanju: Day 10 ⭐️ #TigerZindaHai: Day 10#India biz. pic.twitter.com/DFsXcptErD
— taran adarsh (@taran_adarsh) January 29, 2023
ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರ
ಭಾರತ ಮಾತ್ರವಲ್ಲದೆ ವಿದೇಶದಲ್ಲೂ ‘ಪಠಾಣ್’ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಒಳ್ಳೆಯ ಕಮಾಯಿ ಮಾಡುತ್ತಿದೆ. ನಾಲ್ಕು ದಿನಕ್ಕೆ 419 ಕೋಟಿ ರೂಪಾಯಿ ಗಳಿಕೆ ಮಾಡಿದೆ ‘ಪಠಾಣ್’. ಭಾನುವಾರದ ಲೆಕ್ಕಾಚಾರವೂ ಸೇರಿದರೆ ಈ ಸಿನಿಮಾದ ವಿಶ್ವ ಮಟ್ಟದ ಗಳಿಕೆ 500 ಕೋಟಿ ರೂಪಾಯಿ ದಾಟಲಿದೆ. ಈ ಮೂಲಕ ಪ್ರತಿ ನಿತ್ಯ ಈ ಚಿತ್ರ ಸರಾಸರಿ 100 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ