Pathaan Movie Collection: ‘ಪಠಾಣ್​’ ಗಳಿಕೆಯಲ್ಲಿ ಭಾರೀ ಇಳಿಕೆ; ಕಾರಣ ಬಿಚ್ಚಿಟ್ಟ ಬಾಕ್ಸ್ ಆಫೀಸ್ ಪಂಡಿತರು

ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 55 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಎರಡನೇ ದಿನವಾದ ಗುರುವಾರ (ಜನವರಿ 26) 68 ಕೋಟಿ ರೂಪಾಯಿ ಕಮಾಯಿ ಮಾಡಿತು.

Pathaan Movie Collection: ‘ಪಠಾಣ್​’ ಗಳಿಕೆಯಲ್ಲಿ ಭಾರೀ ಇಳಿಕೆ; ಕಾರಣ ಬಿಚ್ಚಿಟ್ಟ ಬಾಕ್ಸ್ ಆಫೀಸ್ ಪಂಡಿತರು
Follow us
ರಾಜೇಶ್ ದುಗ್ಗುಮನೆ
|

Updated on: Jan 28, 2023 | 1:36 PM

ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ (Pathaan Movie) ಮೊದಲ ಎರಡು ದಿನ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ಸಿನಿಪ್ರಿಯರು ‘ಪಠಾಣ್​’ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಈಗಾಗಲೇ ಅಬ್ಬರದ ಕಲೆಕ್ಷನ್ ಮಾಡುತ್ತಿರುವ ಪಠಾಣ್ (Pathaan Movie Collection) ಚಿತ್ರ ಕೆಲವೇ ದಿನಗಳಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ. ಹೀಗಿರುವಾಗಲೇ ಈ ಚಿತ್ರದ ಶುಕ್ರವಾರದ (ಜನವರಿ 27) ಗಳಿಕೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇದು ಸರ್ವೇ ಸಾಮಾನ್ಯ ಅನ್ನೋದು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ.

ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಜನವರಿ 25ರಂದು ತೆರೆಗೆ ಬಂತು. ದೇಶಪ್ರೇಮದ ಕಥಾ ಹಂದರ ಇರುವ ಈ ಸಿನಿಮಾ ಗಣರಾಜ್ಯೋತ್ಸವದ ಸಂದರ್ಭದಲ್ಲೇ ತೆರೆಗೆ ಬಂತು. ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 55 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಎರಡನೇ ದಿನವಾದ ಗುರುವಾರ (ಜನವರಿ 26) 68 ಕೋಟಿ ರೂಪಾಯಿ ಕಮಾಯಿ ಮಾಡಿತು. ಸರ್ಕಾರಿ ರಜೆಯ ಕಾರಣ ಹೆಚ್ಚಿನ ಕಲೆಕ್ಷನ್ ಆಯಿತು.

ಶುಕ್ರವಾರ ಈ ಚಿತ್ರ 30-35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಗುರುವಾರದ ಕಲೆಕ್ಷನ್​ಗೆ ಹೋಲಿಕೆ ಮಾಡಿದರೆ ಶುಕ್ರವಾರದ ಕಲೆಕ್ಷನ್ ಅರ್ಧದಷ್ಟು ಇಳಿಕೆ ಆಗಿದೆ. ವಾರದ ದಿನ ಎಂಬುದೇ ಇದಕ್ಕೆ ಕಾರಣ. ಶುಕ್ರವಾರ ಯಾವುದೇ ರಜೆ ಇರಲಿಲ್ಲ. ಹೀಗಾಗಿ, ಅನೇಕರಿಗೆ ಚಿತ್ರಮಂದಿರಕ್ಕೆ ತೆರಳೋಕೆ ಸಾಧ್ಯವಾಗಿಲ್ಲ. ಇದು ಸಿನಿಮಾ ಗಳಿಕೆ ಇಳಿಕೆ ಆಗಲು ಕಾರಣ ಅನ್ನೋದು ಬಾಕ್ಸ್ ಆಫೀಸ್​ ಪಂಡಿತರ ಅಭಿಪ್ರಾಯ.

ಇದನ್ನೂ ಓದಿ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: ಮೊದಲ ವೀಕೆಂಡ್​​ ಕಲೆಕ್ಷನ್​ನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕಲಿದೆ ‘ಪಠಾಣ್​’

ಶನಿವಾರ (ಜನವರಿ 28) ಹಾಗೂ ಭಾನುವಾರ (ಜನವರಿ 29) ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಎರಡು ದಿನಕ್ಕೆ ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಶುಕ್ರವಾರ ಚಿತ್ರದ ಗಳಿಕೆ ಕಡಿಮೆ ಆದರೂ ಶನಿವಾರ ಹಾಗೂ ಭಾನುವಾರ ಸಿನಿಮಾ ಅಬ್ಬರಿಸುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಶೋಗಳು ಹೌಸ್​​ಫುಲ್ ಪ್ರದರ್ಶನ ಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ