‘ಬೈಕಾಟ್​’ ಎನ್ನುವವರಿಗೆ ಶಾರುಖ್ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ಒಂದೊಳ್ಳೆಯ ಪಾಠ

ಸಿನಿಮಾ ರಿಲೀಸ್​ಗೂ ಮುನ್ನ ಚಿತ್ರದ ಪೋಸ್ಟರ್​, ಟೀಸರ್, ಟ್ರೇಲರ್ ರಿಲೀಸ್ ಮಾಡಲಾಗುತ್ತದೆ. ಇದರಲ್ಲಿ ಯಾವುದಾದರೂ ಅಂಶ ಇಷ್ಟವಾಗದೇ ಇದ್ದರೆ ಅದನ್ನು ಇಟ್ಟುಕೊಂಡು ಬೈಕಾಟ್ ಮಾಡಬೇಕು ಎನ್ನುವ ಅಭಿಯಾನ ಪ್ರಾರಂಭಿಸಲಾಗುತ್ತದೆ.

‘ಬೈಕಾಟ್​’ ಎನ್ನುವವರಿಗೆ ಶಾರುಖ್ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ಒಂದೊಳ್ಳೆಯ ಪಾಠ
ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Jan 30, 2023 | 3:03 PM

ಇತ್ತೀಚೆಗೆ ಬಾಲಿವುಡ್​ನಲ್ಲಿ ಬೈಕಾಟ್ ಟ್ರೆಂಡ್ (Boycott ) ಜೋರಾಗಿದೆ. ದೊಡ್ಡ ಸಿನಿಮಾಗಳು ತೆರೆಗೆ ಬರುತ್ತವೆ ಎಂದರೆ ಒಂದು ವರ್ಗದ ಜನರು ರೊಚ್ಚಿಗೇಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬೈಕಾಟ್​ ಎಂದು ಹ್ಯಾಶ್​ಟ್ಯಾಗ್ ಹಾಕಿ ಟ್ವೀಟ್ ಮಾಡುತ್ತಾರೆ. ಕೆಲವೇ ಕೆಲವು ಮಂದಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಾರೆ. ಸುಖಾಸುಮ್ಮನೆ ಬೈಕಾಟ್ ಎಂದು ಕೂಗುವವರಿಗೆ ‘ಪಠಾಣ್​’ (Pathaan Movie Collection) ಸಿನಿಮಾದ ಕಲೆಕ್ಷನ್ ಒಂದೊಳ್ಳೆಯ ಪಾಠ.

ಸಿನಿಮಾ ರಿಲೀಸ್​ಗೂ ಮುನ್ನ ಚಿತ್ರದ ಪೋಸ್ಟರ್​, ಟೀಸರ್, ಟ್ರೇಲರ್ ರಿಲೀಸ್ ಮಾಡಲಾಗುತ್ತದೆ. ಇದರಲ್ಲಿ ಯಾವುದಾದರೂ ಅಂಶ ಇಷ್ಟವಾಗದೇ ಇದ್ದರೆ ಅದನ್ನು ಇಟ್ಟುಕೊಂಡು ಸಿನಿಮಾನ ಬೈಕಾಟ್ ಮಾಡಬೇಕು ಎನ್ನುವ ಅಭಿಯಾನ ಪ್ರಾರಂಭಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಧರ್ಮದ ವಿಚಾರವೇ ಮುಖ್ಯ ಆಗುತ್ತದೆ. ‘ಪಠಾಣ್​’ ಚಿತ್ರಕ್ಕೂ ಹಾಗೆಯೇ ಆಗಿತ್ತು. ಆದರೆ, ಈ ಟ್ರೆಂಡ್​ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.

ಕಳೆದ ವರ್ಷ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ತೆರೆಗೆ ಬಂತು. ಹಲವು ವರ್ಷಗಳ ಹಿಂದೆ ಆಮಿರ್ ಖಾನ್ ನೀಡಿದ್ದ ಅಸಹಿಷ್ಣುತೆ ಹೇಳಿಕೆಯನ್ನು ಇಟ್ಟುಕೊಂಡು ‘ಲಾಲ್​ ಸಿಂಗ್ ಚಡ್ಡಾ’ಗೆ ಬಹಿಷ್ಕಾರ ಹಾಕುವ ನಿರ್ಧಾರವನ್ನು ಒಂದಷ್ಟು ಮಂದಿ ತೆಗೆದುಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದರು. ಕಾಕತಾಳೀಯ ಎಂಬಂತೆ ಸಿನಿಮಾ ಸೋತಿತು. ಜನರಿಗೆ ಚಿತ್ರ ಇಷ್ಟವಾಗಿಲ್ಲ. ಹೀಗಾಗಿ, ಬೈಕಾಟ್ ಟ್ರೆಂಡ್ ಕೆಲಸ ಮಾಡಿದೆ ಎಂದು ಒಂದಷ್ಟು ಮಂದಿ ಬೀಗಿದರು. ಆದರೆ, ಅಸಲಿಯತ್ತು ಆ ರೀತಿ ಇಲ್ಲ.

ಇದನ್ನೂ ಓದಿ
Image
ಐದು ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ ‘ಪಠಾಣ್​’; ಭಾರತದಲ್ಲಿ ಎಷ್ಟು ಕಲೆಕ್ಷನ್​?
Image
ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

ಕಳೆದ ವರ್ಷ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಚಿತ್ರಕ್ಕೂ ಬಹಿಷ್ಕಾರ ಕರೆ ನೀಡಲಾಗಿತ್ತು. ಚಿಕ್ಕ ವಿಚಾರ ಇಟ್ಟುಕೊಂಡು ಇದನ್ನು ಬಹಿಷ್ಕಾರ ಮಾಡಬೇಕು ಎಂದು ಒಂದಷ್ಟು ಮಂದಿ ಕರೆ ನೀಡಿದರು. ಆದರೆ, ಸಿನಿಮಾ ಒಳ್ಳೆಯ ಗಳಿಕೆ ಮಾಡಿತು. ಈಗ ‘ಪಠಾಣ್​’ ಚಿತ್ರ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ.

ಇದನ್ನೂ ಓದಿ: ‘ಪಠಾಣ್​’ ನಿರ್ದೇಶಕನಿಂದ ಮತ್ತೊಂದು ಮಲ್ಟಿ ಸ್ಟಾರರ್​ ಪ್ಲ್ಯಾನ್​; ಪ್ರಭಾಸ್ ಜತೆ ಹಿಂದಿ ಹೀರೋ

‘ಪಠಾಣ್​’ ಸಿನಿಮಾದ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಕೇಸರಿ ಬಣ್ಣದ ಬಿಕಿನಿಯನ್ನು ಇಟ್ಟುಕೊಂಡು ವಿವಾದ ಮಾಡಲಾಯಿತು. ಸಿನಿಮಾ ಬಹಿಷ್ಕಾರಕ್ಕೆ ಕರೆ ನೀಡಲಾಯಿತು. ಆದರೆ, ಚಿತ್ರ ಬೈಕಾಟ್​ನ ಮೆಟ್ಟಿ ನಿಂತಿದೆ. ಐದು ದಿನಕ್ಕೆ ವಿಶ್ವಾದ್ಯಂತ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಚಿತ್ರ 271 ಕೋಟಿ ರೂಪಾಯಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಅನಾವಶ್ಯಕವಾಗಿ ಬೈಕಾಟ್ ಎಂದು ಕೂಗುವವರಿಗೆ ‘ಪಠಾಣ್​’ ಚಿತ್ರ ಒಂದೊಳ್ಳೆಯ ಪಾಠ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ