ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ

‘ಥಗ್ಸ್ ಆಫ್ ಹಿಂದೂಸ್ತಾನ್​’ ಸಿನಿಮಾ ಸೋತಿತ್ತು. 2018ರಲ್ಲಿ ಬಂದ ಈ ಚಿತ್ರದಿಂದ ಆಮಿರ್ ಖಾನ್​ ವೃತ್ತಿಜೀವನಕ್ಕೆ ಹಿನ್ನಡೆ ಆಯಿತು. ಆದರೂ ಅವರು ಸುಮ್ಮನೆ ಕೂತಿರಲಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಒಪ್ಪಿಕೊಂಡರು.

ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ
ಆಮಿರ್ ಖಾನ್-ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Jan 28, 2023 | 5:00 PM

ಚಿತ್ರರಂಗದಲ್ಲಿ ಯಶಸ್ಸು ಯಾವಾಗಲೂ ಜೊತೆಯಲ್ಲೇ ಇರುವುದಿಲ್ಲ. ಕೆಲವೊಮ್ಮೆ ಸೋಲು ಬೆನ್ನು ಹತ್ತಿದರೆ ಯಶಸ್ಸು ಸಿಗುವುದು ಅಷ್ಟು ಸುಲಭವಲ್ಲ. ಶಾರುಖ್ ಖಾನ್ (Shah Rukh Khan) ಅವರಿಗೂ ಹೀಗೆಯೇ ಆಗಿತ್ತು. ಅವರ ನಟನೆಯ ಸಾಲು ಸಾಲು ಸಿನಿಮಾಗಳು ಸೋತವು. 2018ರಲ್ಲಿ ಬಂದ ‘ಜೀರೋ’ ಸಿನಿಮಾ (Zero Movie) ಹೀನಾಯವಾಗಿ ಸೋಲು ಕಂಡಿತು. ಇದು ಅವರಿಗೆ ಬೇಸರ ಮೂಡಿಸಿತ್ತು. ಈ ಕಾರಣಕ್ಕೆ ಅವರು ನಾಲ್ಕು ವರ್ಷ ಬ್ರೇಕ್ ತೆಗೆದುಕೊಂಡರು. ಈಗ ಆಮಿರ್ ಖಾನ್ ಕೂಡ ಇದೇ ತಂತ್ರ ಉಪಯೋಗಿಸಲಿದ್ದಾರೆ ಎನ್ನಲಾಗುತ್ತಿದೆ.

‘ಥಗ್ಸ್ ಆಫ್ ಹಿಂದೂಸ್ತಾನ್​’ ಸಿನಿಮಾ ಸೋತಿತ್ತು. 2018ರಲ್ಲಿ ಬಂದ ಈ ಚಿತ್ರದಿಂದ ಆಮಿರ್ ಖಾನ್​ ವೃತ್ತಿಜೀವನಕ್ಕೆ ಹಿನ್ನಡೆ ಆಯಿತು. ಆದರೂ ಅವರು ಸುಮ್ಮನೆ ಕೂತಿರಲಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಒಪ್ಪಿಕೊಂಡರು. ಈ ಚಿತ್ರ ಕೂಡ ನೆಲಕಚ್ಚಿತು. ​ಇದರಿಂದ ಆಮಿರ್ ಖಾನ್ ಬೇಸರಗೊಂಡಿದ್ದಾರೆ. ಹೀಗಾಗಿ, ಅವರು ಲಾಂಗ್ ಬ್ರೇಕ್​ ತೆಗೆದುಕೊಂಡಿದ್ದಾರೆ.

ಶಾರುಖ್ ಖಾನ್ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡ ನಂತರದಲ್ಲಿ ಸಾಕಷ್ಟು ಆಲೋಚಿಸಿ ‘ಪಠಾಣ್​’ ಚಿತ್ರವನ್ನು ಒಪ್ಪಿಕೊಂಡಿದ್ದರು. ಅದೇ ರೀತಿ ಆಮಿರ್ ಖಾನ್ ಕೂಡ ಈ ಲಾಂಗ್​ ಬ್ರೇಕ್​​ನಲ್ಲಿ ಹೆಚ್ಚು ಆಲೋಚಿಸಿ ಹೊಸ ಸಿನಿಮಾ ಒಪ್ಪಿಕೊಳ್ಳಲಿದ್ದಾರಂತೆ. ಅಲ್ಲಿಯವರೆಗೆ ಕುಟುಂಬದ ಜತೆ ಅವರು ಸಮಯ ಕಳೆಯಲಿದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

ಆಮಿರ್ ಏನ್ ಹೇಳಿದ್ರು?

‘ನಟನಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ನಾನು ಅದರಲ್ಲೇ ಕಳೆದು ಹೋಗುತ್ತೇನೆ. ಆಗ ನನ್ನ ಜೀವನದಲ್ಲಿ ಬೇರೆ ಏನೂ ಇರುವುದಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ನಂತರ ‘ಚಾಂಪಿಯನ್ಸ್​’ ಹೆಸರಿನ ಸಿನಿಮಾ ಮಾಡಬೇಕಿತ್ತು. ಅದು ಅದ್ಭುತ ಸ್ಕ್ರಿಪ್ಟ್ ಆಗಿತ್ತು. ಆದರೆ, ನನಗೆ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಅನಿಸುತ್ತಿದೆ. ನನ್ನ ಕುಟುಂಬದ ಜತೆ ಸಮಯ ಕಳೆಯಬೇಕಿದೆ’ ಎಂದು ಆಮಿರ್ ಖಾನ್ ಹೇಳಿದ್ದರು.

‘ಕಳೆದ 35 ವರ್ಷಗಳಿಂದ ದುಡಿಯುತ್ತಿದ್ದೇನೆ. ಅಷ್ಟೂ ವರ್ಷ ನಾನು ನನ್ನ ಕೆಲಸದಮೇಲೆ ಗಮನ ಹರಿಸಿದೆ. ನನ್ನ ಜತೆ ಕ್ಲೋಸ್ ಆಗಿರುವವರಿಗೆ ನಾನು ಅನ್ಯಾಯ ಮಾಡುತ್ತಿದ್ದೇನೆ ಅನಿಸಿತು. ಅವರ ಜತೆ ಸಮಯ ಕಳೆಯಬೇಕಿದೆ. ಒಂದೂವರೆ ವರ್ಷ ನಾನು ಸಿನಿಮಾ ಮಾಡುವುದಿಲ್ಲ’ ಎಂದಿದ್ದರು ಆಮಿರ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ