ದಿನ ಕಳೆದಂತೆ ತಗ್ಗುತ್ತಿದೆ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಕಲೆಕ್ಷನ್; ಇಲ್ಲಿದೆ ಕಾರಣ
Pathaan Movie Collection: ‘ಪಠಾಣ್’ ಸಿನಿಮಾ ಜನವರಿ 25ರಂದು ರಿಲೀಸ್ ಆಯಿತು. ಮಸ್ತ್ ಆ್ಯಕ್ಷನ್ ಇರುವ ಕಾರಣ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಏಳು ದಿನಗಳಲ್ಲಿ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ. ಬಾಚಿಕೊಂಡು ಸಾಧನೆ ಮಾಡಿದೆ.
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ತನ್ನ ಅಬ್ಬರವನ್ನು ಮುಂದುವರಿಸಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ 300 ಕೋಟಿ ರೂ. ಕ್ಲಬ್ ಸೇರಿದೆ. ಈ ಮೂಲಕ ಅತಿ ವೇಗದಲ್ಲಿ ಈ ಸಾಧನೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ಖ್ಯಾತಿಗೆ ‘ಪಠಾಣ್’ (Pathaan Movie) ಸಾಕ್ಷಿ ಆಗಿದೆ. ವಾರದ ದಿನ ಆಗಿದ್ದರಿಂದ ದಿನ ಕಳೆದಂತೆ ಚಿತ್ರದ ಕಲೆಕ್ಷನ್ ತಗ್ಗುತ್ತಿದೆ. ವೀಕೆಂಡ್ನಲ್ಲಿ ಸಿನಿಮಾ ಮತ್ತೆ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
‘ಪಠಾಣ್’ ಸಿನಿಮಾ ಜನವರಿ 25ರಂದು ರಿಲೀಸ್ ಆಯಿತು. ಮಸ್ತ್ ಆ್ಯಕ್ಷನ್ ಇರುವ ಕಾರಣ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಏಳು ದಿನಗಳಲ್ಲಿ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ. ಬಾಚಿಕೊಂಡು ಸಾಧನೆ ಮಾಡಿದೆ. ವಿದೇಶದಲ್ಲೂ ಸಿನಿಮಾ ಅಬ್ಬರಿಸುತ್ತಿದ್ದು ವಿಶ್ವ ಬಾಕ್ಸ್ ಆಫೀಸ್ನ ಒಟ್ಟಾರೆ ಕಲೆಕ್ಷನ್ 600 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ಶಾರುಖ್ ಖಾನ್ ಅವರು ಒಳ್ಳೆಯ ಕಂಬ್ಯಾಕ್ ಮಾಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಹಿಂದಿ ವರ್ಷನ್ನಲ್ಲಿ 430+ ಕೋಟಿ ರೂಪಾಯಿ ಬಾಚಿಕೊಂಡಿತ್ತು. ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಹಿಂದಿ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕಿತ್ತು. ಈ ದಾಖಲೆಯ ಮೇಲೆ ‘ಪಠಾಣ್’ ಕಣ್ಣಿಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Pathaan Sequel: ಬರಲಿದೆ ‘ಪಠಾಣ್ 2’; ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಶಾರುಖ್ ಖಾನ್
‘ಪಠಾಣ್’ ಚಿತ್ರದ ಗಳಿಕೆ ತಗ್ಗುತ್ತಿದೆ. ಇದಕ್ಕೆ ಕಾರಣ ವಾರದ ದಿನಗಳು. ಭಾನುವಾರ (ಜನವರಿ 29) ಈ ಚಿತ್ರ 58 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸೋಮವಾರ (ಜನವರಿ 30) 25 ಕೋಟಿ ರೂಪಾಯಿ ಹಾಗೂ ಮಂಗಳವಾರ (ಜನವರಿ 31) ಸಿನಿಮಾ 21 ಕೋಟಿ ರೂಪಾಯಿ ಬಾಚಿಕೊಂಡಿದೆ. ಇಂದು (ಫೆಬ್ರವರಿ 1) ಈ ಚಿತ್ರದ ಗಳಿಕೆ ಮತ್ತಷ್ಟು ಇಳಿಕೆ ಆಗಬಹುದು. ಆದರೆ, ವಾರಾಂತ್ಯಕ್ಕೆ ಸಿನಿಮಾ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ