ಕಾರ್ತಿಕ್ ಆರ್ಯನ್ಗೆ ಶಾಕ್; ‘ಶಹಜಾದ’ ಚಿತ್ರಕ್ಕೆ ಮುಳುವಾದ ‘ಅಲ ವೈಕುಂಠಪುರಮುಲೋ’
ತೆಲುಗಿನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಹಿಂದಿಯಲ್ಲಿ ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಈಗ ‘ಶಹಜಾದಾ’ ಚಿತ್ರಕ್ಕೆ ಹಿನ್ನಡೆ ಆಗಿದೆ.
ಇತ್ತೀಚೆಗೆ ಬಾಲಿವುಡ್ ಮಂದಿ ದಕ್ಷಿಣ ಭಾರತದ ಚಿತ್ರಗಳನ್ನು ರಿಮೇಕ್ ಮಾಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ‘ದೃಶ್ಯಂ’ ಸೇರಿ ಹಲವು ಚಿತ್ರಗಳು ಹಿಂದಿಗೆ ರಿಮೇಕ್ ಆಗಿವೆ. ಈಗ ಅಲ್ಲು ಅರ್ಜುನ್ (Allu Arjun) ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ ‘ಶಹಜಾದ’ (Shehzada Movie) ಆಗಿ ಹಿಂದಿಗೆ ರಿಮೇಕ್ ಆಗಿದೆ. ಈ ಚಿತ್ರ ಫೆಬ್ರವರಿ 17ಕ್ಕೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಕಾರ್ತಿಕ್ ಆರ್ಯನ್ ನಟನೆಯ ಈ ಚಿತ್ರಕ್ಕೆ ಶಾಕ್ ಸಿಕ್ಕಿದೆ. ಅದೂ ‘ಅಲ ವೈಕುಂಠಪುರಮುಲೋ’ ಸಿನಿಮಾದಿಂದಲೇ ಅನ್ನೋದು ವಿಚಿತ್ರ.
ಅಲ್ಲು ಅರ್ಜುನ್ ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ 100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡಿತು. ಈ ಚಿತ್ರ 280 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಇದನ್ನು ನೋಡಿ ಮೆಚ್ಚಿಕೊಂಡಿರುವ ಹಿಂದಿ ಮಂದಿ ರಿಮೇಕ್ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸನೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಹಿಂದಿಯಲ್ಲಿ ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಈಗ ‘ಶಹಜಾದಾ’ ಚಿತ್ರಕ್ಕೆ ಹಿನ್ನಡೆ ಆಗಿದೆ.
‘ಶಹಜಾದಾ’ ರಿಲೀಸ್ಗೂ ಮೊದಲೇ ‘ಅಲ ವೈಕುಂಠಪುರಮುಲೋ’ ಹಿಂದಿಗೆ ಡಬ್ಬಾದ ವರ್ಷನ್ ಯೂಟ್ಯೂಬ್ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಿಂದಿ ಹಕ್ಕನ್ನು ಗೋಲ್ಡ್ಮೈನ್ ಕಂಪನಿಯವರು ತೆಗೆದುಕೊಂಡಿದ್ದರು. ಅವರು ಇದನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಇದು ಕಾರ್ತಿಕ್ ಆರ್ಯನ್ ಚಿತ್ರಕ್ಕೆ ಹಿನ್ನಡೆ ಆಗಿದೆ.
‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ‘ಪುಷ್ಪ 2’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಪುಷ್ಪ’ ಸಿನಿಮಾ ಹಿಂದಿಯಲ್ಲೂ ಒಳ್ಳೆಯ ಕಮಾಯಿ ಮಾಡಿದೆ. ಹೀಗಾಗಿ, ‘ಅಲ ವೈಕುಂಠಪುರಮುಲೋ’ ಸಿನಿಮಾದ ಹಿಂದಿ ವರ್ಷನ್ಗೆ ಹೆಚ್ಚು ವೀಕ್ಷಣೆ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಶಾಹಿದ್ ಕಪೂರ್ ಮನೆಯಲ್ಲಿ ಕಾರ್ತಿಕ್ ಆರ್ಯನ್ ವಾಸ; ತಿಂಗಳಿಗೆ ನೀಡಬೇಕು 7.5 ಲಕ್ಷ ರೂ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಫೆಬ್ರವರಿ 10ರಂದು ‘ಶಹಜಾದಾ’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ‘ಪಠಾಣ್’ ಸಿನಿಮಾ ಅಬ್ಬರಿಸುತ್ತಿರುವುದರಿಂದ ಈ ಚಿತ್ರದ ರಿಲೀಸ್ ದಿನಾಂಕ ಒಂದು ವಾರ ಮುಂದೂಡಲ್ಪಟ್ಟಿತ್ತು. ಹೀಗಿರುವಾಗಲೇ ಈಗ ಈ ಚಿತ್ರಕ್ಕೆ ಮತ್ತೊಂದು ಹಿನ್ನಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ