Swara Bhaskar Marriage: ಫಹಾದ್​ ಅಹ್ಮದ್​ ಜತೆ ಮದುವೆ ಆದ ಬಾಲಿವುಡ್ ನಟಿ ಸ್ವರಾ ಭಾಸ್ಕರ್​; ಅಭಿಮಾನಿಗಳಿಗೆ ಅಚ್ಚರಿ

Swara Bhaskar Wedding | Fahad Ahmad: ಖ್ಯಾತ ನಟಿ ಸ್ವರಾ ಭಾಸ್ಕರ್​ ಅವರು ಫಹಾದ್​ ಅಹ್ಮದ್​ ಜೊತೆ ಮದುವೆ ಆಗಿದ್ದಾರೆ. ಸಮಾಜವಾದಿ ಪಕ್ಷದಲ್ಲಿ ಫಹಾದ್​ ಅಹ್ಮದ್​ ಗುರುತಿಸಿಕೊಂಡಿದ್ದಾರೆ.

Swara Bhaskar Marriage: ಫಹಾದ್​ ಅಹ್ಮದ್​ ಜತೆ ಮದುವೆ ಆದ ಬಾಲಿವುಡ್ ನಟಿ ಸ್ವರಾ ಭಾಸ್ಕರ್​; ಅಭಿಮಾನಿಗಳಿಗೆ ಅಚ್ಚರಿ
ಸ್ವರಾ ಭಾಸ್ಕರ್, ಫಹಾದ್ ಅಹ್ಮದ್
Follow us
ಮದನ್​ ಕುಮಾರ್​
|

Updated on:Feb 16, 2023 | 11:16 PM

ಬಾಲಿವುಡ್​ನಲ್ಲಿ ನಟಿ ಸ್ವರಾ ಭಾಸ್ಕರ್​ (Swara Bhaskar) ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸಿದ್ಧಾಂತದ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುವುದುಂಟು. ಈಗ ಅವರು ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಡನ್​ ಬೆಳೆವಣಿಗೆಯಿಂದ ಅವರ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಫಹಾದ್​ ಅಹ್ಮದ್​ (Fahad Ahmad) ಜೊತೆ ಸ್ವರಾ ಭಾಸ್ಕರ್​ ಮದುವೆ (Swara Bhaskar Wedding) ನೆರವೇರಿದೆ. ಇಬ್ಬರೂ ರಿಜಿಸ್ಟರ್​ ಮ್ಯಾರೇಜ್​ ಮಾಡಿಕೊಂಡಿದ್ದು, ಸೋಶಿಯಲ್​ ಮೀಡಿಯಾ ಮೂಲಕ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಸೆಲೆಬ್ರಿಟಿಗಳು ಮದುವೆ ಎಂದರೆ ಸಹಜವಾಗಿಯೇ ದೊಡ್ಡ ಸುದ್ದಿ ಆಗುತ್ತದೆ. ವಿವಾಹದ ದಿನಾಂಕ ಸಮೀಪಿಸುವುದಕ್ಕೂ ಮುನ್ನವೇ ಹತ್ತಾರು ಬಗೆಯ ವಿವರಗಳು ಹೊರಬೀಳುತ್ತವೆ. ಆದರೆ ಸ್ವರಾ ಭಾಸ್ಕರ್​ ಮತ್ತು ಫಹಾದ್​ ಅಹ್ಮದ್​ ಅವರು ಸೈಲೆಂಟ್​ ಆಗಿ ಮದುವೆ ಆಗಿದ್ದಾರೆ. ಈ ಸೀಕ್ರೆಟ್​ ಕಲ್ಯಾಣದ ಸುದ್ದಿಯಿಂದ ಅನೇಕರಿಗೆ ಅಚ್ಚರಿ ಆಗಿದೆ. ವಿಶೇಷ ಏನೆಂದರೆ ಇಬ್ಬರದ್ದೂ ಲವ್​ ಮ್ಯಾರೇಜ್. ಆದರೆ ಇವರ ಪ್ರೀತಿ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.

ಇದನ್ನೂ ಓದಿ
Image
Swara Bhasker: ‘ದಿ ಕಾಶ್ಮೀರ್​ ಫೈಲ್ಸ್​’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್​
Image
Swara Bhaskar: ಸಲ್ಮಾನ್​ ಖಾನ್​ ಬಳಿಕ ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ; ಸಾವರ್ಕರ್​ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ
Image
‘ಸಲ್ಮಾನ್​ ಖಾನ್​ಗೆ ತಂಗಿ ಆಗಲು ಯಾರಿಗೂ ಇಷ್ಟವಿಲ್ಲ’; ತೆರೆ ಹಿಂದಿನ ಸತ್ಯ ತೆರೆದಿಟ್ಟ ನಟಿ ಸ್ವರಾ ಭಾಸ್ಕರ್​

ಇದನ್ನೂ ಓದಿ: Swara Bhaskar: ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್​ಗೆ ಅವಕಾಶಗಳೇ ಇಲ್ಲ; ಮುಕ್ತವಾಗಿ ಹೇಳಿಕೊಂಡ ಬಾಲಿವುಡ್​ ಬೆಡಗಿ

ಸಮಾಜವಾದಿ ಪಕ್ಷದ ಜೊತೆ ಫಹಾದ್​ ಅಹ್ಮದ್​ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಸಮಾಜವಾದಿ ಯುವಜನ ಸಭಾದ ರಾಜ್ಯಾಧ್ಯಕ್ಷರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಹಲವು ಪ್ರತಿಭಟನೆ ಮತ್ತು ರ‍್ಯಾಲಿಗಳಲ್ಲಿ ಅವರು ಭಾಗವಹಿಸಿದ್ದಾರೆ. ತಮ್ಮ ನಡುವೆ ಹೇಗೆ ಪರಿಚಯ ಬೆಳೆಯಿತು? ನಂತರ ಸ್ನೇಹದಿಂದ ಪ್ರೀತಿ ಚಿಗುರಿದ್ದು ಹೇಗೆ ಎಂಬುದನ್ನು ಒಂದು ವಿಡಿಯೋ ಮೂಲಕ ಸ್ವರಾ ಭಾಸ್ಕರ್​ ಅವರು ವಿವರಿಸಿದ್ದಾರೆ. ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: Bharat Jodo Yatra: ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ನಟಿ ಸ್ವರಾ ಭಾಸ್ಕರ್

‘ಕೆಲವೊಮ್ಮೆ ಪಕ್ಕದಲ್ಲೇ ಇರುವುದನ್ನು ನೀವು ಎಲ್ಲೆಲ್ಲೋ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ನಮಗೆ ಸ್ನೇಹ ಮೊದಲು ಸಿಕ್ಕಿತು. ನಂತರ ನಾವು ಒಬ್ಬರನ್ನೊಬ್ಬರು ಪಡೆದುಕೊಂಡೆವು. ನನ್ನ ಹೃದಯಕ್ಕೆ ನಿಮಗೆ ಸ್ವಾಗತ ಫಹಾದ್​ ಅಹ್ಮದ್. ಈ ಹೃದಯ ತುಂಬ ಅಸ್ತವ್ಯಸ್ತವಾಗಿದೆ. ಆದರೂ ಇದು ನಿಮ್ಮದು’ ಎಂದು ಸ್ವರ ಭಾಸ್ಕರ್​ ಅವರು ಪೋಸ್ಟ್​ ಮಾಡಿದ್ದಾರೆ.

ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡಿದ್ದ ಫಹಾದ್​ ಅಹ್ಮದ್​ ಅವರು ನಂತರ ರಾಜಕೀಯಕ್ಕೆ ಎಂಟ್ರಿ ನೀಡಿದರು. ಸ್ವರಾ ಭಾಸ್ಕರ್​ ಅವರಿಗೆ ಫಹಾದ್​ ಅಹ್ಮದ್​ ಅವರ ಚಿಂತನೆಗಳು ಹೊಂದಿಕೆ ಆಗುವಂತಿವೆ. ಇಬ್ಬರು ಜೊತೆಯಾಗಿರುವ ಫೋಟೋಗಳು ವೈರಲ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:11 pm, Thu, 16 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್