AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಚಿತ್ರದಲ್ಲಿ ಪಠಾಣ್​-ಟೈಗರ್​; ಈ ಸಿನಿಮಾದಲ್ಲಿ ಇರಲಿದೆ ಭರಪೂರ ಆ್ಯಕ್ಷನ್

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ.

ಒಂದೇ ಚಿತ್ರದಲ್ಲಿ ಪಠಾಣ್​-ಟೈಗರ್​; ಈ ಸಿನಿಮಾದಲ್ಲಿ ಇರಲಿದೆ ಭರಪೂರ ಆ್ಯಕ್ಷನ್
ಸಲ್ಮಾನ್-ಶಾರುಖ್
ರಾಜೇಶ್ ದುಗ್ಗುಮನೆ
|

Updated on: Feb 17, 2023 | 10:47 AM

Share

‘ಪಠಾಣ್’ ಸಿನಿಮಾ (Pathaan Movie) ಅಬ್ಬರದ ಕಲೆಕ್ಷನ್ ಮಾಡಿತು. ಈ ಚಿತ್ರವನ್ನು ನೋಡೋಕೆ ಫ್ಯಾನ್ಸ್​ಗೆ ಹಲವು ಕಾರಣಗಳಿದ್ದವು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಯಿತು. ಅವರ ಅತಿಥಿ ಪಾತ್ರದಿಂದ ಸಿನಿಮಾದ ತೂಕ ಹೆಚ್ಚಿತ್ತು. ಈ ಕಾರಣಕ್ಕೆ ಸಲ್ಲು ಫ್ಯಾನ್ಸ್ ಕೂಡ ಸಿನಿಮಾನ ಕಣ್ತುಂಬಿಕೊಂಡರು. ವಿಶೇಷ ಎಂದರೆ ‘ಟೈಗರ್​ 3’ (Tiger 3) ಚಿತ್ರದಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈಗ ಶಾರುಖ್ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಯಶ್ ರಾಜ್ ಫಿಲ್ಮ್ಸ್​ ತನ್ನದೇ ಸ್ಪೈ ಯೂನಿವರ್ಸ್ ಸೃಷ್ಟಿ ಮಾಡಿಕೊಂಡಿದೆ. ಯೂನಿವರ್ಸ್ ಎಂದರೆ ಸಿನಿಮಾಗಳ ಗುಚ್ಚ. ‘ಏಕ್ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’, ‘ಟೈಗರ್​ 3’ ಚಿತ್ರದಲ್ಲಿ ಬರುವ ಟೈಗರ್ ಪಾತ್ರ, ‘ವಾರ್​’ ಚಿತ್ರದ ಕಬೀರ್ ಪಾತ್ರ ಹಾಗೂ ‘ಪಠಾಣ್​’ ಚಿತ್ರದ ಪಠಾಣ್ ಪಾತ್ರಕ್ಕೆ ಲಿಂಕ್ ಕೊಡುವ ಕೆಲಸ ಆಗುತ್ತಿದೆ. ಹೀಗಿರುವಾಗಲೇ ಪಠಾಣ್ ಹಾಗೂ ಟೈಗರ್ ಪಾತ್ರಗಳನ್ನು ಒಂದುಗೂಡಿಸುವ ಆಲೋಚನೆಯಲ್ಲಿ ಯಶ್ ರಾಜ್ ಫಿಲ್ಮ್ಸ್​​ನ ಆದಿತ್ಯ ಚೋಪ್ರಾ ಇದ್ದಾರೆ.

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ಒಂದೊಮ್ಮೆ ಇಬ್ಬರೂ ಒಂದೇ ಸಿನಿಮಾದಲ್ಲಿ ಹೀರೋಗಳಾಗಿ ನಟಿಸಿದರೆ ಆ ಚಿತ್ರ ದಾಖಲೆಗಳ ಮೇಲೆ ದಾಖಲೆ ಬರೆಯಬಹುದು ಎಂಬುದು ಬಾಲಿವುಡ್ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ.

ಇದನ್ನೂ ಓದಿ
Image
‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’; ಡ್ಯಾನ್ಸ್ ಮಾಡಲು ಹೋಗಿ ನಗೆಪಾಟಲಿಗೀಡಾದ ಸಲ್ಮಾನ್ ಖಾನ್
Image
ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು
Image
134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್​’; ಸ್ಟಾರ್​ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್

ಇದನ್ನೂ ಓದಿ: 400 ಕೋಟಿ ರೂ. ಆಸೆ ತೋರಿಸಿದ್ರೂ ಕರಗಲಿಲ್ಲ ನಿರ್ಮಾಪಕನ ಮನಸ್ಸು; ಏನಿದು ಬಗೆಹರಿಯದ ಬಿಗ್​ ಡೀಲ್​?

ಸದ್ಯ ಆದಿತ್ಯ ಚೋಪ್ರಾ ಅವರೇ ಈ ಕಥೆಯನ್ನು ಡೆವಲಪ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಬೀರ್ (ಹೃತಿಕ್ ರೋಷನ್​) ಅತಿಥಿ ಪಾತ್ರ ಮಾಡುವ ಸಾಧ್ಯತೆ ಇದೆ. ಹಾಗಾದಲ್ಲಿ ಸಿನಿಮಾಗೆ ಮತ್ತಷ್ಟು ಹೈಪ್ ಸಿಗಲಿದೆ. ಹಿಂದಿ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ  ‘ಪಠಾಣ್​’ಗೆ ಇದೆ. ಒಂದೊಮ್ಮೆ ಶಾರುಖ್ ಖಾನ್ ಹಾಗೂ ಸಲ್ಲು ಒಂದೇ ಸಿನಿಮಾದಲ್ಲಿ ನಟಿಸಿದರೆ ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗಬಹುದು ಅನ್ನೋದು ಸದ್ಯದ ಕುತೂಹಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್