Rani Mukherjee: ‘ಪಠಾಣ್​’ ಚಿತ್ರವನ್ನೇ ಮೀರಿಸಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿದ ರಾಣಿ ಮುಖರ್ಜಿ ನಟನೆಯ ಹೊಸ ಸಿನಿಮಾ

Mrs Chatterjee Vs Norway: ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ ಸಿನಿಮಾದಿಂದಾಗಿ ರಾಣಿ ಮುಖರ್ಜಿ ಅವರಿಗೆ ಗೆಲುವು ಸಿಕ್ಕಂತಾಗಿದೆ. ನಾರ್ವೇ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Rani Mukherjee: ‘ಪಠಾಣ್​’ ಚಿತ್ರವನ್ನೇ ಮೀರಿಸಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿದ ರಾಣಿ ಮುಖರ್ಜಿ ನಟನೆಯ ಹೊಸ ಸಿನಿಮಾ
ರಾಣಿ ಮುಖರ್ಜಿ, ಶಾರುಖ್ ಖಾನ್
Follow us
ಮದನ್​ ಕುಮಾರ್​
|

Updated on:Mar 22, 2023 | 3:51 PM

ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಮಾಡಿದ ಸಾಧನೆ ದೊಡ್ಡದು. ವಿಶ್ವ ಮಾರುಕಟ್ಟೆಯಲ್ಲಿ ಈ ಸಿನಿಮಾ ಸಾವಿರಾರು ರೂಪಾಯಿ ಗಳಿಸಿದೆ. ಇದರಿಂದ ಶಾರುಖ್​ ಖಾನ್ (Shah Rukh Khan)​ ಅವರು ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಬಾಲಿವುಡ್​ನಲ್ಲಿ ಅವರ ಹವಾ ಹೆಚ್ಚಿದೆ. ಆದರೆ ಈಗೊಂದು ಅಚ್ಚರಿ ಸುದ್ದಿ ಕೇಳಿಬಂದಿದೆ. ‘ಪಠಾಣ್​’ ಸಿನಿಮಾವನ್ನೂ ಮೀರಿಸುವ ರೀತಿಯಲ್ಲಿ ರಾಣಿ ಮುಖರ್ಜಿ (Rani Mukherjee) ಅವರ ಹೊಸ ಸಿನಿಮಾ ಅಬ್ಬರಿಸಿದೆ. ಆದರೆ ಅದು ಭಾರತದಲ್ಲಿ ಅಲ್ಲ. ಬದಲಿಗೆ, ನಾರ್ವೆಯಲ್ಲಿ ಎಂಬುದು ವಿಶೇಷ. ಹೌದು, ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ (Mrs Chatterjee Vs Norway) ಸಿನಿಮಾ ನಾರ್ವೇಯಲ್ಲಿ ತೆರೆಕಂಡು ಸೂಪರ್​ ಹಿಟ್​ ಆಗಿದೆ. ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್​ನಲ್ಲಿ ಅತಿ ಕಲೆಕ್ಷನ್​ ಮಾಡಿದ ಖ್ಯಾತಿ ಈ ಸಿನಿಮಾಗೆ ಸಲ್ಲುತ್ತದೆ. ಈ ಕುರಿತು ಚಿತ್ರತಂಡದವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಕ್ರಿಪ್ಟ್​ ಆಯ್ಕೆಯಲ್ಲಿ ರಾಣಿ ಮುಖರ್ಜಿ ಅವರು ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ತಮ್ಮ ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನಷ್ಟೇ ಅವರು ಮಾಡುತ್ತಿದ್ದಾರೆ. ‘ಮಿಸಸ್ ಚಟರ್ಜಿ ವರ್ಸಸ್​ ನಾರ್ವೇ’ ಸಿನಿಮಾದಲ್ಲಿ ಅವರು ಎರಡು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ. ನಾರ್ವೇಯಲ್ಲಿ ಮಕ್ಕಳನ್ನು ಕಳೆದುಕೊಂಡು ಕಷ್ಟಪಡುವ ಭಾರತೀಯ ಮಹಿಳೆಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: ರಾಣಿ ಮುಖರ್ಜಿ ಅಜ್ಜಿ ಆರತಿ ರಾಯ್ ನಿಧನ; ಸಂತಾಪ ಸೂಚಿಸಿದ ಬೆಂಗಾಲಿ ಚಿತ್ರರಂಗ

ನೈಜ ಘಟನೆಗಳನ್ನು ಆಧರಿಸಿ ‘ಮಿಸಸ್ ಚಟರ್ಜಿ ವರ್ಸಸ್​ ನಾರ್ವೇ’ ಸಿನಿಮಾ ತಯಾರಾಗಿದೆ. ಇದು ನಾರ್ವೇ ಸರ್ಕಾರ ಮತ್ತು ಅಲ್ಲಿನ ಪ್ರಜೆಗಳಿಗೂ ಸಂಬಂಧಿಸಿದ ಕತೆ ಆದ್ದರಿಂದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಪರಿಣಾಮವಾಗಿ ನಾರ್ವೇ ಬಾಕ್ಸ್​ ಆಫೀಸ್​ನಲ್ಲಿ ‘ಪಠಾಣ್​’ ಚಿತ್ರಕ್ಕಿಂತಲೂ ಹೆಚ್ಚಿನ ಗಳಿಕೆಯನ್ನು ಈ ಸಿನಿಮಾ ಮಾಡಿದೆ.

ಇದನ್ನೂ ಓದಿ: ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್​ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ

ನಾರ್ವೆಯ ಚಿತ್ರಮಂದಿರಗಳಲ್ಲಿ ಮೊದಲ ಮೂರು ದಿನ ಉತ್ತಮ ಪ್ರದರ್ಶನ ಕಂಡಿರುವ ಈ ಸಿನಿಮಾ ಅಂದಾಜು 58 ಲಕ್ಷ ರೂಪಾಯಿ ಕಮಾಯಿ ಮಾಡಿದೆ. ಈ ಹಿಂದೆ ‘ಪಠಾಣ್​’, ‘ರಯೀಸ್​’, ‘ಸುಲ್ತಾನ್​’ ಸಿನಿಮಾಗಳು ನಾರ್ವೆಯಲ್ಲಿ ಅಬ್ಬರಿಸಿದ್ದವು. ಆ ಸಿನಿಮಾಗಳನ್ನೂ ಮೀರಿಸಿ ‘ಮಿಸಸ್ ಚಟರ್ಜಿ ವರ್ಸಸ್​ ನಾರ್ವೇ’ ಸಿನಿಮಾ ದಾಖಲೆ ಬರೆದಿದೆ.

ಈ ಸಿನಿಮಾದಿಂದಾಗಿ ರಾಣಿ ಮುಖರ್ಜಿ ಅವರಿಗೆ ಗೆಲುವು ಸಿಕ್ಕಂತಾಗಿದೆ. ಅವರ ಅಭಿಮಾನಿಗಳು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ನಾರ್ವೇ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನಿರ್ಬನ್​ ಭಟ್ಟಾಚಾರ್ಯ, ಜಿಮ್​ ಸರ್ಬ್​ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಶಿಮಾ ಚಿಬ್ಬರ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:43 pm, Wed, 22 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ