ಅವರಿಬ್ಬರೂ ನಿನ್ನೆ ಗುರುವಾರ ಬೆಳ್ಳಂಬೆಳಗ್ಗೆ ಕೆಲಸದ ನಿಮಿತ್ತ ಹೆದ್ದಾರಿಯಲ್ಲಿ ಬೈಕ್ ಏರಿ ಹೊರಟಿದ್ದರು. ಆದ್ರೆ ಅಷ್ಟರಲ್ಲೆ ಬೈಕಿಗೆ ಎದುರಾಗಿ ಬಂದ ಕಿಲ್ಲರ್ ಬಿಎಂಟಿಸಿ (BMTC) ಮತ್ತು ಕೆಎಸ್ಆರ್ಟಿಸಿ (KSRTC) ಬಸ್ಸುಗಳು (Bus) ನೋಡನೋಡ್ತಿದ್ದಂತೆ ಇಬ್ಬರು ಅಮಾಯಕರ ಜೀವವನ್ನ ಬಲಿ ಪಡೆದುಕೊಂಡಿದ್ದು ಬಸ್ಗಳ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ, ಆಸ್ಪತ್ರೆಯ ಮುಂದೆ ನೂರಾರು ಜನ ಜಮಾಯಿಸಿದ್ದಾರೆ, ರಸ್ತೆಯ ಮಧ್ಯೆ ಹೂಗಳ ಜೊತೆಗೆ ನೆತ್ತರು ಚೆಲ್ಲಿರುವುದು… ಇದೇ ಎರಡು ಕಿಲ್ಲರ್ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳು. ಇಬ್ಬರು ಅಮಾಯಕರು ಈ ಬಸ್ ಹಾವಳಿಗೆ ಬಲಿಯಾಗಿದ್ದಾರೆ (Death). ದೇವನಹಳ್ಳಿ ಹೊರವಲಯದಲ್ಲಿ ಇಬ್ಬರ ಜೀವಕ್ಕೆ ಇದೇ ಕಿಲ್ಲರ್ ಬಸ್ಸಗಳು (Bus Accident) ಕೊಳ್ಳಿಯಿಟ್ಟಿವೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿ ಗುರುವಾರ ಬೆಳಗ್ಗೆ ಕಂಡು ಬಂದ ಭೀಕರ ಅಪಘಾತಗಳ ದೃಶ್ಯಗಳು ಬಂದವು. ಅಂದಹಾಗೆ ತಾಲೂಕಿನ ಬೈರದೇನಹಳ್ಳಿ ನಿವಾಸಿ ರಮೇಶ್ ಎಂಬುವವರು ಇಂದು ಬೆಳಗ್ಗೆ ತೋಟದಲ್ಲಿ ಬೆಳೆದಿದ್ದ ಹೂಗಳನ್ನ ಕಿತ್ತುಕೊಂಡು, ತಮ್ಮ ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಾಪುರದ ಮಾರುಕಟ್ಟೆಯತ್ತ ತೆರಳಿದ್ದಾರೆ.
ಈ ವೇಳೆ ಗ್ರಾಮದಿಂದ ಚಪ್ಪರಕಲ್ಲು ಬಳಿ ಬರ್ತಿದ್ದಂತೆ ನೂತನವಾಗಿ ನಿರ್ಮಾಣವಾಗ್ತಿರುವ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದ ಕೆಎಸ್ ಆರ್ಟಿಸಿ ಬಸ್ ನೋಡ ನೋಡ್ತಿದ್ದಂತೆ ರಮೇಶ್ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ರಮೇಶ್ ಬಸ್ಸಿನಡಿಗೆ ಸಿಲುಕಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು ಸ್ಥಳದಲ್ಲಿಯೇ ತೀವ್ರ ರಕ್ತಸಾವ್ರದಿಂದ ಸಾವನ್ನಪಿದ್ದಾರೆ. ಇನ್ನು ಅಪಘಾತದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಹೂಗಳು ರಕ್ತದ ನಡುವೆ ಹೂಗಳು ಸಹ ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದು, ಸ್ಥಳೀಯರು ಕೆಎಸ್ಅರ್ಟಿಸಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ದೇವನಹಳ್ಳಿಯಿಂದ ದಾಬಸ್ ಪೇಟೆವರೆಗೂ ನೂತನ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಯುತ್ತಿರುವ ಕಾರಣ ಒಂದೇ ರಸ್ತೆಯಲ್ಲಿ ಎರಡೂ ಬದಿಯ ವಾಹನಗಳನ್ನ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ಬಿಟ್ಟಿದ್ದಾರೆ. ಹೀಗಾಗಿ ಒಂದೆ ರಸ್ತೆಯಲ್ಲಿ ಎರಡು ಕಡೆಯ ವಾಹನಗಳು ಬಂದ ಕಾರಣ ಅಪಘಾತ ನಡೆದಿದ್ದು ಅಪಘಾತಕ್ಕೆ ಹೆದ್ದಾರಿ ನಿರ್ಮಾಣದ ಗುತ್ತಿಗೆದಾರರ ನಿರ್ಲಕ್ಷ್ಯವೂ ಒಂದು ಕಾರಣ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಇನ್ನು ಮತ್ತೊಂದೆಡೆ, ದೇವನಹಳ್ಳಿ ಹೊರ ವಲಯದ ಸಾದಹಳ್ಳಿ ಬಳಿ ಬಿಎಂಟಿಸಿ ಬಸ್ ಏಕಾಏಕಿ ಬ್ರೇಕ್ ಹಾಕಿದೆ. ಹೀಗಾಗಿ ಬಸ್ ಹಿಂದೆ ಬರ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಸವಾರ ಮುನಿರಾಜು ತಲೆಗೆ ತೀವ್ರ ಗಾಯವಾಗಿದ್ದು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಅಷ್ಟರಲ್ಲಿ ತೀವ್ರ ರಕ್ತಸಾವ್ರದಿಂದ ಬಳಲಿದ ಮುನಿರಾಜು, ಆಸ್ಪತ್ರೆ ಸೇರುವ ಮುನ್ನವೆ ಸಾವನ್ನಪ್ಪಿದ್ದು ಕಿಲ್ಲರ್ ಬಿಎಂಟಿಸಿ ಬಸ್ಸಿಗೆ ಅಮಾಯಕ ಬಲಿಯಾಗಿದ್ದಾರೆ.
ಒಟ್ಟಾರೆ ಹೆದ್ದಾರಿ ಅಂತ ವೇಗವಾಗಿ ಹೋಗುವ ಭರದಲ್ಲಿ ಬಸ್ ಚಾಲಕರು ಅಮಾಯಕರ ಜೀವ ತೆಗೆಯುತ್ತಿರುವುದು ನಿಜಕ್ಕೂ ದುರಂತ. ಇನ್ನು ಈ ಬಗ್ಗೆ ಚಿಕ್ಕಜಾಲ ಮತ್ತು ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ನೊಂದ ಕುಟುಂಬಸ್ಥರಿಗೆ ನ್ಯಾಯ ಕೊಡಿಸಿ, ಜೊತೆಗೆ ಮತ್ತೊಮ್ಮೆ ಇಂತಹ ದುರ್ಘಟ ನಡೆಯದಂತೆ ಎಚ್ಚರವಹಿಸಬೇಕಿದೆ.
ವರದಿ: ನವೀನ್, ಟಿವಿ 9, ದೇವನಹಳ್ಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ