Anekal: ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ದರೆ, ಅಂತ್ಯವಾಗೋದು ಕೆಟ್ಟ ರೀತಿಯಲ್ಲೇ ಅಂತಾರೆ.. ಉದಾಹರಣೆ ಇಲ್ಲಿದೆ!
illicit relation: ಮಾರ್ಚ್ 29 ತಾರೀಕು ಬೆಳಿಗ್ಗೆ ಆ್ಯಕ್ಟೀವಾ ಗಾಡಿಯಲ್ಲಿ ಮಂಜುಳಾರನ್ನು ಕರೆದುಕೊಂಡು ಹೋದ ನಾರಾಯಣ ಬರುವಾಗ, ಕೆಲ ಗಂಟೆಗಳ ಬಳಿಕ ತಾನೊಬ್ಬನೇ ವಾಪಸಾಗಿದ್ದಾನೆ. ಇದರಿಂದ ಅನುಮಾನದ ಮುಳ್ಳು ಆತನ ವಿರುದ್ಧ ತಿರುಗಿದೆ. ಹೆಬ್ಬಗೋಡಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ರೆ (illicit relation), ಅಂತ್ಯವಾಗೋದು ಕೆಟ್ಟ ಘಳಿಗೆಯಲ್ಲೇ ಅಂತಾರೆ.. ಅದೇ ಥರಾ 10 ವರ್ಷಗಳಿಂದ ಮಹಿಳೆ ಜತೆ ಸಂಬಂಧ ಇಟ್ಟುಕೊಂಡಿದ್ದ ಆ ವ್ಯಕ್ತಿ ಇಟ್ಟುಕೊಂಡವಳನ್ನು ಕೊಲೆ ಮಾಡಿ, ಸುಟ್ಟು ಹೋಗಿದ್ದಾನೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಮಹಿಳೆಯ (woman) ಸುಟ್ಟ ದೇಹವೊಂದು ಪತ್ತೆಯಾಗುತ್ತೆ. ಮಹಿಳೆಯೊಬ್ಬಳ ಹುಡುಕಾಟದಲ್ಲಿದ್ದ ಹೆಬ್ಬಗೋಡಿ ಪೊಲೀಸರು ಈ ದೇಹ ಅವಳದ್ದೆನಾ ಅಂತ ಅವಳ ಸಂಬಂಧಿಕರಿಗೆ ಕರೆದುಕೊಂಡು ಬಂದು ತೋರಿಸಿದಾಗ ಪೊಲೀಸರಿಗೆ ಇದ್ದ ಶಂಕೆ ನಿಜವಾಗಿ ಪರಿಣಮಿಸುತ್ತೆ. ಸಿಂಗೇನ ಅಗ್ರಹಾರದ (Singena Agrahara) ನಿರ್ಜನ ಪ್ರದೇಶದಲ್ಲಿ ಸುಟ್ಟು ಬಿದ್ದಿದ್ದ ದೇಹದ ತುಂಡುಗಳು, ತಲೆ ಬುರಡೆ, ಆಸ್ಥಿಪಂಜರ ನಡೆದಿದ್ದ ಘೋರ ಕುಕೃತ್ಯಕ್ಕೆ (murder) ಸಾಕ್ಷ್ಯ ಹೇಳುತ್ತಿತ್ತು. ಕೆಲ ದಿನಗಳ ಹಿಂದೆ ಅಂದ್ರೆ ಮಾರ್ಚ್ 29 ತಾರೀಕಿನಂದು 32 ವರ್ಷದ ಮಂಜುಳಾ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ನಿರ್ಜನ ಪ್ರದೇಶದಲ್ಲಿ ಸಿಕ್ಕಿರುವ ದೇಹವನ್ನು ಗುರುತಿಸುವುದಕ್ಕಾಗಿ ಕಾಣೆಯಾಗಿದ್ದ ಮಂಜುಳಾರ ತಂಗಿ ಲಕ್ಷ್ಮಿ ಅವರನ್ನು ಕರೆದು ತಂದಿದ್ದಾಗ, ಕಿವಿ ಓಲೆ, ಚಪ್ಪಲಿ, ಕೊರಳಲ್ಲಿದ್ದ ಚೈನ್ ನೋಡಿ ಹೌದು ಇದು ಮಂಜುಳದ್ದೇ ಮೃತ ದೇಹ ಅಂತ ಹೇಳುತ್ತಾರೆ. 29 ನೇ ತಾರೀಕು ನಾರಾಯಣ ಎಂಬಾತನ ಜತೆ ಹೋಗಿದ್ದ ಅಕ್ಕ ವಾಪಸ್ ಬಂದಿರಲಿಲ್ಲ, ಹಾಗಾಗಿ ಆತನ ಮೇಲೆಯೇ ಅನುಮಾನವಿದೆ ಅಂತಾ ಪೊಲೀಸರಿಗೆ ಅವರು ತಕ್ಷಣವೇ ದೂರು ನೀಡಿದ್ದಾರೆ (Anekal Crime News).
ಸಂಪಿಗೆನಗರ ನಿವಾಸಿ ನಾರಾಯಣಪ್ಪ ಮತ್ತು ಮಂಜುಳಾ ನಡುವೆ 10 ವರ್ಷಗಳ ಹಿಂದೆ ಸ್ನೇಹ ಬೆಳೆದಿತ್ತು. ಮದುವೆ ಆದರೂ ಗಂಡನನ್ನು ಬಿಟ್ಟಿದ್ದ ಮಂಜುಳಾ ಎಲ್ಲರ ಮುಂದೆಯೇ ನಾರಾಯಣಪ್ಪನ ಜತೆ ಸಲುಗೆ ಬೆಳಸಿದ್ದಳು. ಹಲವು ಬಾರಿ ಇವರಿಬ್ಬರ ಮಧ್ಯೆ ಕಿರಿಕ್ ಆದಾಗ ಠಾಣೆಯಲ್ಲಿ ಅವಳನ್ನು ಮದುವೆ ಆಗಿದ್ದೇನೆ ಅಂತಲೂ ನಾರಾಯಣಪ್ಪ ಹೇಳಿದ್ದನಂತೆ. ಕೆಲ ದಿನಗಳ ಹಿಂದೆ ದುಡ್ಡು ಕೊಡು ಅಂತ ಕಿರಿಕ್ ತೆಗೆದಿದ್ದ ನಾರಾಯಣನು, ಮಂಜುಳಾಗೆ ಕೊಲೆ ಬೆದರಿಕೆ ಹಾಕಿದ್ದನಂತೆ. ಅಲ್ಲದೇ ನಿನ್ನನ್ನು ಸುಟ್ಟು ಹಾಕುತ್ತೇನೆ ಅಂತಾ ಸಂಬಂಧಿಕರ ಎದುರೇ ಹೇಳುತ್ತಿದ್ದನಂತೆ.
ಇದನ್ನೂ ಓದಿ: ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಬರ್ಬರ ಕೊಲೆ; ನಾಲ್ವರಿಂದ ಅತ್ಯಾಚಾರ ಶಂಕೆ
ಇನ್ನು ಮಾರ್ಚ್ 29 ತಾರೀಕು ಬೆಳಿಗ್ಗೆ ಆ್ಯಕ್ಟೀವಾ ಗಾಡಿಯಲ್ಲಿ ಮಂಜುಳಾರನ್ನು ಕರೆದುಕೊಂಡು ಹೋದ ನಾರಾಯಣ ಬರುವಾಗ, ಕೆಲ ಗಂಟೆಗಳ ಬಳಿಕ ತಾನೊಬ್ಬನೇ ವಾಪಸಾಗಿದ್ದಾನೆ. ಇದರಿಂದ ಅನುಮಾನದ ಮುಳ್ಳು ಆತನ ವಿರುದ್ಧ ತಿರುಗಿದೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಹೆಬ್ಬಗೋಡಿ ಪೊಲೀಸರು ಹಲವು ಆಯಾಮದಲ್ಲಿ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ