ದೇವನಹಳ್ಳಿ, ಡಿಸೆಂಬರ್ 28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (Hoskote) ಯಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವು ಮತ್ತು 271 ಜನ ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ ಪ್ರಸಾದ ದುರಂತದ ಹಿಂದಿನ ಸತ್ಯ ಇದೀಗ ಬಯಲಾಗಿದೆ. ಪ್ರಸಾದ ವಿಷವಾಗಲು ನೀರು ಕಾರಣವಾಗಿದೆ ಎಂದು ಪ್ರಸಾದ ದುರಂತದಿಂದ ಅಸ್ವಸ್ಥರಾದವರ ಲ್ಯಾಬ್ ರಿಪೋರ್ಟ್ನಲ್ಲಿ ಈ ಆತಂಕಕಾರಿ ಅಂಶ ಬಯಲಾಗಿದೆ.
ಖಾಸಗಿ ಆಸ್ವತ್ರೆಗಳಿಗೆ ದಾಖಲಾಗಿದ್ದ ಎಲ್ಲರ ಲ್ಯಾಬ್ ರಿಪೋರ್ಟ್ನಲ್ಲಿ ಕಾಲರಾ ಅಂಶ ಪತ್ತೆ ಆಗಿದೆ. ಕಾಲರಾದಿಂದ ನೂರಾರು ಜನರಿಗೆ ವಾಂತಿ ಬೇದಿ ಶುರುವಾಗಿದೆ. ನಗರದಲ್ಲಿ ಸ್ವಚ್ಚತೆಯಿಲ್ಲದ ಕಾರಣ ಕಾಲರಾ ಹರಡಿರುವ ಭೀತಿ ಎದುರಾಗಿದೆ.
ಇದನ್ನೂ ಓದಿ: ದೇವನಹಳ್ಳಿ: ದೇವಸ್ಥಾನದ ಪ್ರಸಾದ ಸೇವಿಸಿ ಮಹಿಳೆ ಸಾವು
ಸದ್ಯ ಲ್ಯಾಬ್ ರಿಪೋರ್ಟ್ ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಡಿಮೆ ಪ್ರಮಾಣದಲ್ಲಿ ಕಾಲರಾ ಇರುವುದು ಸ್ವಲ್ಪ ಸಮಾಧಾನವಾಗಿದೆ. ಕಾಲರಾ ಅಂಶ ತಿಳಿಯಲು ನೀರಿನ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಎಷ್ಟು ಪ್ರಮಾಣದಲ್ಲಿ ಎಲ್ಲೆಲ್ಲಿ ಕಾಲರಾ ಹಬ್ಬಿದ ಅಂತ ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ.
ಹೊಸಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ 136 ಕ್ಕೂ ಅಧಿಕ ಜನ ಇದೇ ರೀತಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದು ನೂರಾರು ಜನರು ಆಸ್ಪತ್ರೆಯತ್ತ ದಾವಿಸಿ ಬಂದಿದ್ದರು. ಹೀಗಾಗಿ ಒಮ್ಮೆಲೆ ನೂರಾರು ಜನ ಬಂದ ಕಾರಣ ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲದೆ ಜನ ಪರದಾಡಿ ಕೆಲವರು ಸಿಕ್ಕ ಸಿಕ್ಕ ಆಸ್ವತ್ರೆ ಸೇರಿದ್ರೆ ಇನ್ನೂ ಕೆಲವರು ಕೋಲಾರ ಬೆಂಗಳೂರಿನ ಆಸ್ವತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದ್ದರು.
ಇದನ್ನೂ ಓದಿ: ರಾಯಚೂರು: ಊಟ ಸೇವಿಸಿದ್ದ ಹಾಸ್ಟೆಲ್ನ 14 ವಿದ್ಯಾರ್ಥಿಯರು ಅಸ್ವಸ್ಥ
ಇನ್ನೂ ಪ್ರಸಾದ ಸೇವಿಸಿ ಮಹಿಳೆ ಮೃತಪಟ್ಟಿದ್ದಾಳೆ ಅನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಿಯ ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಧಿಕಾರಿಗಳ ವಿರುದ್ದ ಗರಂ ಆಗಿದ್ದರು. ಹಬ್ಬ ಹರಿದಿನಗಳಲ್ಲಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕೆಂಡಾಮಂಡಲವಾಗಿದ್ದರು.
ಅಲ್ಲದೆ ಸಭೆ ಮುಗಿಸಿ ಆಸ್ವತ್ರೆಗಳಿಗೆ ಭೇಟಿ ನೀಡಿದ ಶರತ್ ಬಚ್ಚೇಗೌಡ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಜನರು ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದರು. ಇನ್ನೂ ಮೆಲ್ನೂಟಕ್ಕೆ 8 ವಿವಿಧ ದೇವಸ್ಥಾನಗಳಲ್ಲಿ ಪ್ರಸಾದ ಸ್ವೀಕರಿಸಿದವರಲ್ಲಿ ಹೆಚ್ಚಾಗಿ ಮಹಿಳೆಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಸಿ ಖಾಸಗಿ ಆಸ್ವತ್ರೆಯಲ್ಲಿರುವವರ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.