ಲೋಕಾಯುಕ್ತ ದಾಳಿ ವೇಳೆ ಸಿಕ್ತು ಮಹತ್ವದ ದಾಖಲೆ, ದೇವನಹಳ್ಳಿ ತಹಶೀಲ್ದಾರ್​ ಗೆ ಸಂಕಷ್ಟ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಮನೆ ನಿನ್ನೆ(ಆ.17)ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಹಲವಾರು ದಾಖಲೆಗಳ ಜೊತೆಗೆ 50 ಲಕ್ಷಕ್ಕೂ ಆಧಿಕ ಹಣ ಪತ್ತೆಯಾಗಿದೆ. ಈ ಹಿನ್ನಲೆ ಇಂದು ತಹಶೀಲ್ದಾರ್ ಆಪ್ತರನ್ನು ಕರೆಸಿ ತನಿಖೆ ನಡೆಸಲಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಸಿಕ್ತು ಮಹತ್ವದ ದಾಖಲೆ, ದೇವನಹಳ್ಳಿ ತಹಶೀಲ್ದಾರ್​ ಗೆ ಸಂಕಷ್ಟ
ದೇವನಹಳ್ಳಿ ತಹಶೀಲ್ದಾರ್​ ಶಿವರಾಜ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Aug 18, 2023 | 8:59 AM

ಬೆಂಗಳೂರು ಗ್ರಾಮಾಂತರ, ಆ.18: ರಾಜ್ಯಾದ್ಯಂತ ನಿನ್ನೆ(ಆ.17) ಏಕಕಾಲದಲ್ಲಿ 50 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿತ್ತು. ಬೆಳ್ಳಂಬೆಳಗ್ಗೆ ನಿದ್ದೆಯ ಮಂಪರಿನಲ್ಲಿದ್ದ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ(Lokayukta) ಅಧಿಕಾರಿಗಳು ದಾಳಿ ನಡೆಸಿ ಶಾಕ್​ ಕೊಟಿದ್ದರು. ಬೆಂಗಳೂರು, ಮೈಸೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಬೀದರ್, ಧಾರವಾಡ, ರಾಯಚೂರು, ಮಡಿಕೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಹಶೀಲ್ದಾರ್ (Devanahalli Tehsildar)   ಶಿವರಾಜ್ ಮನೆ ಮೇಲೂ ದಾಳಿ ನಡೆಸಿದ್ದು ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.

ದಾಖಲೆಗಳ ಜೊತೆಗೆ ತಹಶಿಲ್ದಾರ್ ಮನೆಯಲ್ಲಿ ಸಿಕ್ಕಿದೆ 50 ಲಕ್ಷಕ್ಕೂ ಅಧಿಕ‌‌ ಹಣ

ಇನ್ನು ಬೆಳ್ಳಂ ಬೆಳಗ್ಗೆ ದೇವನಹಳ್ಳಿ ತಹಶಿಲ್ದಾರ್​ ಶಿವರಾಜ್​ ಮನೆಗೆ ನುಗ್ಗಿದ ಲೋಕಾಯುಕ್ತ ಅಧಿಕಾರಿಗಳಿಗೆ, ದಾಳಿ ವೇಳೆ ಒಂದಷ್ಟು ಜಮೀನು ಸೇರಿದಂತೆ ಹಲವು ಪ್ರಮುಖ ದಾಖಲೆಗಳು ಸಿಕ್ಕಿದೆ. ಜೊತೆಗೆ ಇದರ ಜೊತೆ ತಹಶಿಲ್ದಾರ್ ಮನೆಯಲ್ಲಿ 50 ಲಕ್ಷಕ್ಕೂ ಅಧಿಕ‌‌ ಹಣ ಪತ್ತೆಯಾಗಿದೆ. ಈಗಾಗಲೇ ತಹಶೀಲ್ದಾರ್ ಮನೆಯಲ್ಲಿ ಸಿಕ್ಕ ಹಣ ಮತ್ತು ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಅರಮನೆಯಂಥ ಮನೆ ಕಟ್ಟಿಸಿರುವ ಮಹದೇವಪುರ ವಲಯದ ಆರ್ ಐ ಲೋಕಾಯುಕ್ತ ದಾಳಿ ನಡೆದಿರದಿದ್ದರೆ ವಿಜಯ್ ಮಲ್ಯಗೆ ಸೆಡ್ಡು ಹೊಡೆಯುತ್ತಿದ್ದ!

ಕೆಐಎಡಿಬಿಗೆ ಹೋಗ್ತಿರುವ ಜಮೀನುಗಳಲ್ಲಿ ಹಲವು ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ

ಹೌದು, ದಾಖಲೆಗಳ ಜೊತೆಗೆ ತಹಶೀಲ್ದಾರ್ ಮೊಬೈಲ್ ಸಹ‌ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದೇವನಹಳ್ಳಿ ಬಳಿ ಕೆಐಎಡಿಬಿಗೆ ಭೂಸ್ವಾಧಿನ ನಡೆಯುತ್ತಿರುವ ಹಿನ್ನೆಲೆ ಕೆಐಎಡಿಬಿಗೆ ಹೋಗುತ್ತಿರುವ ಜಮೀನುಗಳಲ್ಲಿ ಹಲವು ಸರ್ಕಾರಿ ಜಮೀನಿಗೆ ನಖಲಿ ದಾಖಲೆ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಆರ್​ಐ, ವಿಐ ವರದಿ ನೀಡಿದ್ರು ಉಲ್ಲಂಘಿಸಿ ದಾಖಲೆ ಮಾಡಿ ಅಕ್ರಮ ಮಾಡಿರುವ ಆರೋಪ ಬೆಳಕಿಗೆ ಬಂದಿದೆ.

ಪೋನ್ ರಿಟ್ರೀವ್ ಮಾಡಿ ಮತ್ತಷ್ಟು ಪುರಾವೆಗಳನ್ನ ಪಡೆಯಲಿರುವ ಅಧಿಕಾರಿಗಳು.

ಲೋಕಾಯುಕ್ತ ಬಲೆಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿರುವ ತಹಶೀಲ್ದಾರ್ ಶಿವರಾಜ್ ಅವರ ಪೋನ್ ರಿಟ್ರೀವ್ ಮಾಡಿ ಮತ್ತಷ್ಟು ಪುರಾವೆಗಳನ್ನು ಅಧಿಕಾರಿಗಳು ಪಡೆಯಲಿದ್ದಾರೆ. ಇಬ್ಬರು ಆಪ್ತರಿಂದ ಹೆಚ್ಚಿನ ಅಕ್ರಮ ಮಾಡಿರುವುದು ಮೊಲ್ನೋಟಕ್ಕೆ ಪತ್ತೆ ಹಿನ್ನೆಲೆ ಇಂದು(ಆ.18) ತಹಶಿಲ್ದಾರ್​​ನ‌ ಇಬ್ಬರು ಆಪ್ತರನ್ನು ಕಛೇರಿಗೆ ಕರೆಸಿ ತನಿಖೆ ನಡೆಸಲಿರುವ ಲೋಕಾಯುಕ್ತ. ಜೊತೆಗೆ ಗ್ರಾಮ ಪಂಚಾಯತಿ ಸದಸ್ಯ ಹಾಗೂ ತಹಶೀಲ್ದಾರ್ ಕಾರು‌ ಚಾಲಕನ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ