ಬೆಂಗಳೂರು ಗ್ರಾಮಾಂತರ, ಮಾ.01: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ(Rajaghatta) ಗ್ರಾಮದಲ್ಲಿ ಕಳೆದೊಂದು ವಾರದಿಂದ ಗ್ರಾಮದಲ್ಲಿ ಮನೆಗಳ್ಳತನ, ದೇವಾಲಯ, ಕುರಿ ಕಳ್ಳತನ ಪ್ರಕರಣಗಳಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಈ ಗ್ರಾಮದ ರಾಜಣ್ಣ ಹಾಗೂ ಅನಿಲ್ ಎಂಬುವವರ ಮನೆಗೆ ಖದೀಮರು ಕನ್ನ ಹಾಕಿದ್ದು, ರಾಜಣ್ಣ ಎಂಬುವವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ಖದ್ದು ಎಸ್ಕೇಪ್ ಆಗಿದ್ದಾರೆ. ಜೊತೆಗೆ ಕಳೆದ ಮೂರು ದಿನಗಳಿಂದೆ ಅನಿಲ್ ಎಂಬುವವರ ಮನೆಯಲ್ಲೂ ಇದೇ ರೀತಿ ಮಕ್ಕಳ ಸಾವಿರಾರು ಬೆಲೆ ಬಾಳುವ ಚಿನ್ನದ ಎರಡು ಸರ ಹಾಗೂ 3 ಸಾವಿರ ನಗದು ದೋಚಿ ಎಸ್ಕೆಪ್ ಆಗಿದ್ದು, ಸರಣಿ ಮನೆಗಳ್ಳತನದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಒಂದ್ಕಡೆ ಮನೆಗೆ ಕನ್ನ ಹಾಕಿರುವ ಖದೀಮರು, ದಿನ ಬಿಟ್ಟಂತೆ ಗ್ರಾಮದ ಮುನೇಶ್ವರ ದೇವಾಲಯಕ್ಕೂ ಲಗ್ಗೆ ಇಟ್ಟಿದ್ದು, ಹುಂಡಿಯಲ್ಲಿದ್ದ ಹಣವನ್ನ ದೋಚಿದ್ದಾರೆ. ಇತ್ತ ದೇವಾಲಯದ ಮುಂದೆ ಇದ್ದ ಹೊಂಡಾ ಬೈಕ್ ಕದ್ದೋಗಲು ಯತ್ನಿಸಿರುವ ಖದೀಮರು, ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ಗ್ರಾಮದ ಹೊರವಲಯದಲ್ಲಿ ಬೈಕ್ ಬಿಟ್ಟು ಎಸ್ಕೆಪ್ ಆಗಿದ್ದಾರೆ. ಅಲ್ಲದೆ ಗ್ರಾಮದ ರಸ್ತೆಯ ಪಕ್ಕದಲ್ಲಿದ್ದ ಎರಡು ಮನೆಗಳಲ್ಲಿ ಎರಡು ಕುರಿಗಳನ್ನ ತುಂಬಿಕೊಂಡು ಮತ್ತೊಂದು ಭಾರಿ ಖದೀಮರು ಎಸ್ಕೆಪ್ ಆಗಿದ್ದಾರೆ.
ಇದನ್ನೂ ಓದಿ: ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ; ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳ ದೋಚಿ ಪರಾರಿ
ಒಂದು ವಾರದಿಂದ ಆದಂತಹ ಕಳ್ಳತನದಿಂದ ಇಡೀ ಗ್ರಾಮದಲ್ಲೆ ರಾತ್ರಿಯಾದ್ರೆ ಮಹಿಳೆಯರು ಮಕ್ಕಳು ಹೊರಗಡೆ ಬರಲು ಹೆದುರುತ್ತಿದ್ದಾರೆ. ಜೊತೆಗೆ ನಿರಂತರ ಕಳ್ಳತನಕ್ಕೆ ಗ್ರಾಮದಲ್ಲಿ ಕೆಲಸಕ್ಕೆ ಹೋಗುವ ಯುವಕರು, ಮೂರು ಪಾಳೆಯಲ್ಲಿ ತಂಡವನ್ನ ರಚಿಸಿಕೊಂಡು ಕೋಲಿಡಿದುಕೊಂಡು ಗ್ರಾಮವನ್ನ ಕಾಯುವ ಪರಿಸ್ಥಿತಿ ಎದುರಾಗಿದೆ. ಈ ಗ್ರಾಮದಲ್ಲಿ ಎಲ್ಲಿಯೂ ಸಿಸಿಟಿವಿಯಿಲ್ಲ, ಜೊತೆಗೆ ಬೀದಿ ದೀಪಗಳು ಸರಿಯಾಗಿ ಕೆಲಸ ಮಾಡದೇ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಜನ ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.
ಒಟ್ಟಾರೇ ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳ್ಳತನದಿಂದ ನೆಮ್ಮದಿಯೇ ಇಲ್ಲದಂತಾಗಿದೆ. ಇನ್ನೂ ಪೊಲೀಸರು ಕೂಡ ರಾತ್ರಿವೇಳೆ ಗಸ್ತು ಹೆಚ್ಚು ಮಾಡುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆದಷ್ಟು ಬೇಗ ಗ್ರಾಮದ ನಿದ್ದೆಗೇಡಿಸಿರೋ ಖದೀಮರಿಗೆ ಎಡೆಮುರಿ ಕಟ್ಟುವ ಕೆಲಸ ಪೊಲೀಸರು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ