ಪೊಲೀಸರ ಕಿರುಕುಳದಿಂದ ನಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿಗೆ ಮಗನಿಂದ ದೂರು

| Updated By: ಸಾಧು ಶ್ರೀನಾಥ್​

Updated on: Jan 08, 2021 | 12:34 PM

ಸಿವಿಲ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ, ಪೊಲೀಸರ ಕಿರುಕುಳದಿಂದ ತಂದೆ ಕೃಷ್ಣಪ್ಪ ನಾಪತ್ತೆಯಾಗಿದ್ದಾರೆ ಎಂದು ಮಗ ಮುನಿಆಂಜಿನಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಎಸ್‌ಪಿಗೆ ದೂರು ನೀಡಿದ್ದಾರೆ.

ಪೊಲೀಸರ ಕಿರುಕುಳದಿಂದ ನಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿಗೆ ಮಗನಿಂದ ದೂರು
ನಾಪತ್ತೆಯಾಗಿರುವ ಕೃಷ್ಣಪ್ಪ- ಹೊಸಕೋಟೆ ಪಿಎಸ್​ಐ ರಾಜು
Follow us on

ದೇವನಹಳ್ಳಿ: ಸಿವಿಲ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ, ಪೊಲೀಸರ ಕಿರುಕುಳದಿಂದ ತಮ್ಮ ತಂದೆ ಕೃಷ್ಣಪ್ಪ ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ಮುನಿಆಂಜಿನಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಎಸ್‌ಪಿಗೆ ದೂರು ನೀಡಿದ್ದು, ಹೊಸಕೋಟೆ ಪಿಎಸ್ಐ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ  ಒತ್ತಾಯಿಸಿದ್ದಾರೆ.

ಹೊಸಕೋಟೆ ತಾಲೂಕಿನ ಅತ್ತಿವಟ್ಟ ಗ್ರಾಮದ ಸರ್ವೆ ನಂಬರ್ 38ರ 1 ಎಕರೆ 35 ಗುಂಟೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ, ಗ್ರಾಮದ ವೆಂಕಟರಮಣಪ್ಪ ದೇವರಾಜು ಮತ್ತು ಕೃಷ್ಣಪ್ಪರ ನಡುವೆ ವ್ಯಾಜ್ಯವಾಗಿತ್ತು. ಈ ವಿಚಾರ ನ್ಯಾಯಾಲಯದವರೆಗೆ ಸಾಗಿತ್ತು.

ಆದರೂ, ರಾಜಕೀಯ ಪ್ರೇರಣೆಯಿಂದಾಗಿ ಕೃಷ್ಣಪ್ಪ ಮತ್ತು ಅವರ ಕುಟುಂಬಸ್ಥರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ. ಇದರಿಂದ ಮನನೊಂದು ಕಳೆದ ಮೂರು ದಿನಗಳಿಂದ ಕೃಷ್ಣಪ್ಪ ಮನೆ ಬಿಟ್ಟು ಹೋಗಿದ್ದಾರೆ. ತಂದೆ ಕಾಣೆಯಾಗಿರುವುದಕ್ಕೆ  ಪೊಲೀಸರ ಕಿರುಕುಳವೇ ಕಾರಣ ಎಂದು ಕೃಷ್ಣಪ್ಪ ಅವರ ಮಗ ಆರೋಪಿಸಿದ್ದಾರೆ.

 

ಉಳುಮೆ ವಿಚಾರಕ್ಕೆ ಅಣ್ಣನ ಎದೆ ಸೀಳಿ ಕೊಲೆ ಮಾಡಿದ ತಮ್ಮ!