ಪಡಿತರ ವಿತರಣ ಮಳಿಗೆಗೆ ಸಚಿವರ ಭೇಟಿ, ಇಬ್ಬರ ವಿರುದ್ಧ FIR

ನೆಲಮಂಗಲ: ನ್ಯಾಯಬೆಲೆ ಅಂಗಡಿ ಮಾಲೀಕ ಮತ್ತು ವಿತರಕನ ವಿರುದ್ಧ FIR ದಾಖಲಿಸಿರುವ ಘಟನೆ ನೆಲಮಂಗಲದ ಇಂದಿರಾನಗರದಲ್ಲಿ ನಡೆದಿದೆ. ನ್ಯಾಯಬೆಲೆ ಅಂಗಡಿ ಸಂಖ್ಯೆ 1ರ ವಿತರಕ ಬೈಲಪ್ಪ ಹಾಗೂ ಅಳತೆಗಾರ ನಾಗರಾಜು ವಿರುದ್ಧ FIR ದಾಖಲಾಗಿದೆ. ಟಿಎಪಿಸಿಎಂಪಿ ಪಡಿತರ ವಿತರಣ ಮಳಿಗೆಗೆ ಸಚಿವ ಗೋಪಾಲಯ್ಯ ಭೇಟಿ ನೀಡಿದ್ರು. ಈ ವೇಳೆ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹೆನ್ನೆಲೆಯಲ್ಲಿ ಸಚಿವ ಗೋಪಾಲಯ್ಯ ಸೂಚನೆ ಮೇರೆಗೆ ತಾಲೂಕು ಆಹಾರ ನಿರೀಕ್ಷಕ ಜಯಕುಮಾರ್‌ರಿಂದ ದೂರು ದಾಖಲಾಗಿದೆ. ಅಗತ್ಯ ಸರಕುಗಳ ಕಾಯ್ದೆ 1955ರಡಿ […]

ಪಡಿತರ ವಿತರಣ ಮಳಿಗೆಗೆ ಸಚಿವರ ಭೇಟಿ, ಇಬ್ಬರ ವಿರುದ್ಧ FIR
ಆಯೇಷಾ ಬಾನು

Updated on: Jun 07, 2020 | 3:42 PM

ನೆಲಮಂಗಲ: ನ್ಯಾಯಬೆಲೆ ಅಂಗಡಿ ಮಾಲೀಕ ಮತ್ತು ವಿತರಕನ ವಿರುದ್ಧ FIR ದಾಖಲಿಸಿರುವ ಘಟನೆ ನೆಲಮಂಗಲದ ಇಂದಿರಾನಗರದಲ್ಲಿ ನಡೆದಿದೆ. ನ್ಯಾಯಬೆಲೆ ಅಂಗಡಿ ಸಂಖ್ಯೆ 1ರ ವಿತರಕ ಬೈಲಪ್ಪ ಹಾಗೂ ಅಳತೆಗಾರ ನಾಗರಾಜು ವಿರುದ್ಧ FIR ದಾಖಲಾಗಿದೆ.

ಟಿಎಪಿಸಿಎಂಪಿ ಪಡಿತರ ವಿತರಣ ಮಳಿಗೆಗೆ ಸಚಿವ ಗೋಪಾಲಯ್ಯ ಭೇಟಿ ನೀಡಿದ್ರು. ಈ ವೇಳೆ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹೆನ್ನೆಲೆಯಲ್ಲಿ ಸಚಿವ ಗೋಪಾಲಯ್ಯ ಸೂಚನೆ ಮೇರೆಗೆ ತಾಲೂಕು ಆಹಾರ ನಿರೀಕ್ಷಕ ಜಯಕುಮಾರ್‌ರಿಂದ ದೂರು ದಾಖಲಾಗಿದೆ. ಅಗತ್ಯ ಸರಕುಗಳ ಕಾಯ್ದೆ 1955ರಡಿ ಮೊಕದ್ದಮೆ ದಾಖಲಾಗಿದ್ದು, ಇಬ್ಬರ ವಿರುದ್ಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Published On - 1:42 pm, Sun, 7 June 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us