ಮಣ್ಣಲ್ಲಿ ಮಣ್ಣಾದ ಕೇಂದ್ರದ ಮಾಜಿ ಸಚಿವ ಆರ್ ಎಲ್ ಜಾಲಪ್ಪ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

| Updated By: sandhya thejappa

Updated on: Dec 18, 2021 | 4:52 PM

ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯದ ಹಿರಿಯ ನಾಯಕರು ನಮ್ಮ ಪಕ್ಷದ ಗಣ್ಯರು. ಸಹಕಾರ ಕ್ಷೇತ್ರಕ್ಕೆ ಒಂದು ಕಾಲದಲ್ಲಿ ಪಿತಾಮಹ. ಅವರ ದಿಟ್ಟ ಹೋರಾಟ ಅವರ ಸಾದನೆ ಇಂದು ಸಾಕ್ಷಿಯಾಗಿದೆ.

ಮಣ್ಣಲ್ಲಿ ಮಣ್ಣಾದ ಕೇಂದ್ರದ ಮಾಜಿ ಸಚಿವ ಆರ್ ಎಲ್ ಜಾಲಪ್ಪ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು
Follow us on

ದೇವನಹಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ (RL Jalappa) ನಿನ್ನೆ ನಿಧರಾಗಿದ್ದಾರೆ. ಇಂದು (ಡಿ.18) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಾಲೇಜು ಆವರಣದಲ್ಲಿ ಈಡಿಗರ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಪೊಲೀಸ್ ಬ್ಯಾಂಡ್ನೊಂದಿಗೆ ರಾಷ್ಟ್ರಗೀತೆ ನುಡಿಸಿ ಗೌರವ ಸಮರ್ಪಣೆ ಮಾಡಲಾಯ್ತು. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಆರೋಗ್ಯ ಇಲಾಖೆ ಸಚಿವ ಕೆ ಸುಧಾಕರ್ ಸೇರಿ ಹಲವರು ಭಾಗಿಯಾಗಿದ್ದರು.

ಜಾಲಪ್ಪ ಹಿರಿಯ ಮಗ ಜೆ ನರಸಿಂಹಸ್ವಾಮಿ ಅಂತಿಮ ವಿಧಿವಿಧಾನ ನೆರವೇರಿಸಿದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಜಾಲಪ್ಪ ಬಡವರು, ದಲಿತರು, ಹಿಂದುಳಿದವರ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದವರು. ದೇವೇಗೌಡ ಸಿಎಂ ಆದ ಮೇಲೆ, ನಾನು ಸಿಎಂ ಆಗಬೇಕೆಂದು ಗಲಾಟೆ ಮಾಡಿದ್ದರು. ನಾನು ಕಾಂಗ್ರೆಸ್ ಸೇರಲು ಜಾಲಪ್ಪ ಕಾರಣ. ಸಿಎಂ ಆಗಲೇಬೇಕು ನೀನು ಎಂದು ಕಾಂಗ್ರೆಸ್ಗೆ ಸೇರಿಸಿದ್ದರು. ನಾನು ಸಿಎಂ ಆಗಿದ್ದಾಗ ಬಡವರ ಬಗ್ಗೆ ಕಾಳಜಿವಹಿಸು ಎಂದು ಹೇಳಿದ್ದರು. ಅಹಿಂದ ಹುಟ್ಟು ಹಾಕಿದ್ದೇ ಆರ್ ಎಲ್ ಜಾಲಪ್ಪ ಅಂತ ಅಭಿಪ್ರಾಯಪಟ್ಟರು.

ಇನ್ನು ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯದ ಹಿರಿಯ ನಾಯಕರು ನಮ್ಮ ಪಕ್ಷದ ಗಣ್ಯರು. ಸಹಕಾರ ಕ್ಷೇತ್ರಕ್ಕೆ ಒಂದು ಕಾಲದಲ್ಲಿ ಪಿತಾಮಹ. ಅವರ ದಿಟ್ಟ ಹೋರಾಟ ಅವರ ಸಾದನೆ ಇಂದು ಸಾಕ್ಷಿಯಾಗಿದೆ. ದೇವರಜ್ ಅರಸು ಅವರ ತತ್ವ ಸಿದ್ಧಾಂತ ರೂಡಿಸಿಕೊಂಡಿದ್ದವರು. ಕಾಂಗ್ರೆಸ್ನಿಂದ ಪಕ್ಷದ ಸಂಸದರಾಗಿ ಹಿರಿಯ ನಾಯಕರಾಗಿ ಎಲ್ಲರಿಗೂ ಮಾರ್ಗದರ್ಶನ ಮಾಡಿದ್ದರು. ಇಂದು ಯಾರು ಬೇಕಾದರು ಮೆಡಿಕಲ್ ಕಾಲೇಜು ಮಾಡುತ್ತಾರೆ. ಆದರೆ ಆಗಿನ ಕಾಲದಲ್ಲಿ ಅವರು ಸಾಧನೆ ಮಾಡಿದ್ದಾರೆ. ನಾನು ಡಿಕೆಶಿಯಾಗಿ ಇಂದು ಇಲ್ಲಿಗೆ ಬಂದಿಲ್ಲ. ಅವರ ಮಕ್ಕಳು ಕುಟುಂಬಸ್ಥರ ಜೊತೆ ಉತ್ತಮ ಒಡನಾಟದಿಂದ ಬಂದಿದ್ದೇನೆ ಅಂತ ಹೇಳಿದರು.

ಇದನ್ನೂ ಓದಿ

Rahul Gandhi: ಭಾರತದ ಹಣದುಬ್ಬರ, ನೋವಿಗೆ ಹಿಂದುತ್ವವಾದಿಗಳೇ ಕಾರಣ; ಅಮೇಥಿಯಲ್ಲಿ ರಾಹುಲ್ ಗಾಂಧಿ ಆಕ್ರೋಶ

 ಖ್ಯಾತ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್​ ಖಾನ್​; ಶಾರುಖ್​ ಮಗನ ಬಗ್ಗೆ ಹೊಸ ಅಪ್​ಡೇಟ್​