ದೇವನಹಳ್ಳಿ: ಮೊಬೈಲ್ ಪಾಸ್​ವರ್ಡ್​ ಚೇಂಜ್ ಮಾಡಿದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Nov 12, 2022 | 12:36 PM

ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಮ್ಮ ಮೊಬೈಲ್ ಪಾಸ್​ವರ್ಡ್​ ಬದಲಿಸಿ ಪಾಸ್​ವರ್ಡ್​ ಹೇಳಲು ಸತಾಯಿಸಿದಕ್ಕೆ ಯುವತಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆ.

ದೇವನಹಳ್ಳಿ: ಮೊಬೈಲ್ ಪಾಸ್​ವರ್ಡ್​ ಚೇಂಜ್ ಮಾಡಿದಕ್ಕೆ ಮನನೊಂದು ಯುವತಿ ಆತ್ಮಹತ್ಯೆ
Follow us on

ದೇವನಹಳ್ಳಿ: ಮೊಬೈಲ್ ಪಾಸ್​ವರ್ಡ್​ ಬದಲಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ. ರುಚಿತಾ(19) ನೇಣಿಗೆ ಶರಣಾದ ಯುವತಿ. ರುಚಿತಾ ಮೊಬೈಲ್​ ಫೋನ್​ಗೆ ಅಡಿಕ್ಟ್ ಆಗಿದ್ದಳು. ಅತಿಯಾಗಿ ಮೊಬೈಲ್ ಬಳಸುತ್ತಿದ್ದರಿಂದ ಮನೆಯವರಿಗೆ ಕಿರಿಕಿರಿಯಾಗಿತ್ತು. ಇದು ಹೀಗೆ ಮುಂದುವರೆದರೆ ಸಮಸ್ಯೆ ಎದುರಾಗಬಹುದೆಂದು ರುಚಿತಾ ತಮ್ಮ ಅಕ್ಕನ ಮೊಬೈಲ್ ಫೋನ್​​ ಪಾಸ್​ವರ್ಡ್​ ಚೇಂಜ್ ಮಾಡಿದ್ದ. ಮೊಬೈಲ್ ಪಾಸ್​ವರ್ಡ್​ ಹೇಳುವಂತೆ ತಮ್ಮನನ್ನು ಎಷ್ಟೇ ಪೀಡಿಸಿದರು ಆತ ಹೇಳದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಲೆ. ದೊಡ್ಡಬಳ್ಳಾಪುರ ಟೌನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್​ಲೈನ್​ನಲ್ಲಿ ಹಣ ಕಳೆದುಕೊಂಡ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ, ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣು

ಬೀದರ್/ಬೆಂಗಳೂರು: ಬೀದರದಲ್ಲಿ ಉಪನ್ಯಾಸಕಿಯೊಬ್ಬರು ಆನ್​ಲೈನ್​ನಲ್ಲಿ ಹಣ ಕಳೆದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನ ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣಾಗಿರುವ ದಾರುಣ ಘಟನೆಗಳು ನಡೆದಿವೆ. ಆನ್​ಲೈನ್​ನಲ್ಲಿ ಹಣ ಕಳೆದುಕೊಂಡ ಉಪನ್ಯಾಸಕಿ ಆರತಿ ಕನಾಟೆ (28) ಬೀದರ್ (bidar) ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಬಾವಿಗೆ ಹಾರಿ ಅಸುನೀಗಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಕನಾಟೆ ಅವರು ಆನ್​ಲೈನ್​ನಲ್ಲಿ ಪರಿಚಯವಾದ ವ್ಯಕ್ತಿಗೆ 2.5 ಲಕ್ಷ ರೂ ಹಣ ನೀಡಿದ್ದರು. ಉಪನ್ಯಾಸಕಿ ಆರತಿ ಹಂತ ಹಂತವಾಗಿ ಒಟ್ಟು 2.5 ಲಕ್ಷ ಹಣ ನೀಡಿದ್ದರು. ಆದರೆ ಮುಂದೆ, ಮೋಸ ಹೋಗಿರುವುದು ಗೊತ್ತಾಗಿ ಬೇಸರದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಕಳೆದ ನಾಲ್ಕು ದಿನಗಳ ಹಿಂದೆ ಡೆತ್​ನೋಟ್ ಬರೆದಿಟ್ಟು ಆರತಿ ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣು

ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣಾಗಿದ್ದಾನೆ. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ಸಾಯಿಕುಮಾರ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಮನೆಯಲ್ಲಿ ಕೆಲಸ ಮಾಡದಿದ್ದಕ್ಕೆ ಪೋಷಕರು ಬೈದಿದ್ದರು. ಸಾಯಿಕುಮಾರ್, ಮನೆಯ ಟೆರಸ್ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಸಂಜೆ 7 ಗಂಟೆಗೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹ ಈಗ ಅಂಬೇಡ್ಕರ್ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತ ಮಾಡಲಾಗುವುದು.

Published On - 12:36 pm, Sat, 12 November 22