ದೇವನಹಳ್ಳಿ, ಅ.15: ಪಾಸ್ತಾ ಮಾಡುವ ಮೆಷಿನ್ ಒಳಗಡೆ ಚಿನ್ನ ಬಚ್ಚಿಟ್ಟು ಇಂಡಿಗೋ (IndiGo) ವಿಮಾನದ ಮೂಲಕ ದುಬೈನಿಂದ ಬೆಂಗಳೂರಿಗೆ (Bengaluru) ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ 35,37,768 ಮೌಲ್ಯದ 598 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪಾಸ್ತಾ ಮಾಡುವ ಮೆಷಿನ್ ಪತ್ತೆಯಾಗಿದೆ. ಸೂಕ್ಷ್ಮವಾಗಿ ಗಮಿಸಿದ ಅಧಿಕಾರಿಗಳಿಗೆ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಶಾರ್ಜಾದಿಂದ ಬಂದ ಎಂಟು ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಾಕ್; ಸಿಗರೇಟ್, ಮದ್ಯದ ಬಾಟಲಿಗಳು ಜಪ್ತಿ
ಚಿನ್ನದಲ್ಲಿ ಬೋಲ್ಟ್ ಮತ್ತು ಸ್ಕ್ರೂ ಮಾಡಿ ಅದಕ್ಕೆ ಸಿಲ್ವರ್ ಕೋಟ್ ಮಾಡಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕೂಡಲೇ ಮೆಷಿನ್ ಒಪನ್ ಮಾಡಿದ ಅಧಿಕಾರಿಗಳು 35 ಲಕ್ಷ 37 ಸಾವಿರದ 768 ರೂಪಾಯಿ ಮೌಲ್ಯದ 598 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ