ಶಾರ್ಜಾದಿಂದ ಬಂದ ಎಂಟು ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಾಕ್; ಸಿಗರೇಟ್, ಮದ್ಯದ ಬಾಟಲಿಗಳು ಜಪ್ತಿ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಚುರುಕಿನ ತಪಾಸಣೆಯಿಂದಾಗಿ ಅಕ್ರಮ ಸಾಗಾಟದ ಎರಡು ಪ್ರಕರಣಗಳು ಪತ್ತೆಯಾಗಿವೆ. ಎಂಟು ಮಂದಿಯನ್ನು ಬಂಧಿಸಿ ಗ್ಯಾಜೆಟ್‌ಗಳು, ಸಿಗರೇಟ್ ಮತ್ತು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಎಂಟು ಪ್ರಯಾಣಿಕರು ಏರ್ ಅರೇಬಿಯಾ ಫ್ಲೈಟ್ ಜಿ9-496 ನಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
ದೇವನಹಳ್ಳಿ, ಅ.3: ಬೆಂಗಳೂರು (Bangalore) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಕಸ್ಟಮ್ಸ್ ಅಧಿಕಾರಿಗಳ ಚುರುಕಿನ ತಪಾಸಣೆಯಿಂದಾಗಿ ಅಕ್ರಮ ಸಾಗಾಟದ ಎರಡು ಪ್ರಕರಣಗಳು ಪತ್ತೆಯಾಗಿವೆ.
ಎಂಟು ಮಂದಿಯನ್ನು ಬಂಧಿಸಿ ಗ್ಯಾಜೆಟ್‌ಗಳು, ಸಿಗರೇಟ್ ಮತ್ತು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಎಂಟು ಪ್ರಯಾಣಿಕರು ಏರ್ ಅರೇಬಿಯಾ ಫ್ಲೈಟ್ ಜಿ9-496 ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ಬೆಂಗಳೂರು ಏರ್ ಕಸ್ಟಮ್ಸ್ ಸುದ್ದಿ ಪ್ರಕಟಣೆಯಲ್ಲಿ ದೃಢಪಡಿಸಿದೆ.
ಇದನ್ನೂ ಓದಿ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, 2 ವರ್ಷದ ಪುಟ್ಟ ಮಗು ಸೇರಿ ಇಬ್ಬರು ಸಾವು
ಮೊದಲಿಗೆ, ಅಧಿಕಾರಿಗಳು ಏಳು ಪ್ರಯಾಣಿಕರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಿಗರೇಟ್, ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಹೀಗಾಗಿ ಏಳು ಮಂದಿಯನ್ನು ಬಂಧಿಸಿ ಅವರ ಬಳಿ ಇದ್ದ ಒಟ್ಟು 75 ಮೊಬೈಲ್, 21 ಲ್ಯಾಪ್‌ಟಾಪ್, 28 ಮದ್ಯದ ಬಾಟಲಿಗಳು ಮತ್ತು 7,000 ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ವಿಮಾನದಲ್ಲಿ ಆಗಮಿಸಿದ ಮಹಿಳಾ ಪ್ರಯಾಣಿಕರೊಬ್ಬರು ಮೂರು ಬ್ಯಾಗ್‌ಗಳಲ್ಲಿ 248 ಔಟರ್‌ಗಳಲ್ಲಿ 49,600 ಐಟಿಸಿ ಬ್ರಾಂಡ್ ಸಿಗರೇಟ್‌ಗಳನ್ನು ಸಾಗಿಸುತ್ತಿರುವುದನ್ನು ಕೂಡ ಪತ್ತೆಹಚ್ಚಲಾಗಿದೆ. ಕಸ್ಟಮ್ಸ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಪ್ತಿ ಮಾಡಲಾದ ಗ್ಯಾಜೆಟ್‌ಗಳು, ಸಿಗರೇಟ್ಗಳು ಮತ್ತು ಮದ್ಯದ ಬಾಟಲಿಗಳ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ