AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂ ಬೆಳೆಗಾರರಿಗೆ ನೆರವಾದ ತೋಟಗಾರಿಕಾ ಇಲಾಖೆ, ಈವರೆಗೆ 80 ರೈತರಿಗೆ ಅನುದಾನ

ನೆಲಮಂಗಲ: ಕೊರೊನಾ ವೈರಸ್​ನಿಂದ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ವ್ಯಾಪಾರಿಗಳು ಉದ್ಯೋಗಿಗಳು ಕೂಲಿ ಕಾರ್ಮಿಕರು ರೈತರು ಎಲ್ಲರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಹೂ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೋಟಗಾರಿಕಾ ಇಲಾಖೆ ಅನುದಾನ ಬಿಡುಗಡೆ ಮಾಡಿದೆ. ಲಾಕ್​ಡೌನ್​ನಿಂದ ದೇವಾಲಯಗಳು, ಗುಡಿ-ಗೋಪುರಗಳು, ಜಾತ್ರೆ-ಬಜಾರ್​ಗಳು, ಮದುವೆ-ಮುಂಜಿಗಳಂತ ಶುಭಕಾರ್ಯಕ್ಕೆ ಬ್ರೇಕ್ ಬಿದ್ದಿದ್ದು, ಶುಭ ಸಮಾರಂಭಗಳ ಮೆರಗನ್ನು ಹೆಚ್ಚಿಸುವ ಬಗೆಬಗೆಯ ಅಲಂಕಾರಿಕ ಪುಷ್ಪಗಳು ಸೇರಿದಂತೆ ಪೂಜೆಗೆ ಬಳಸುವ ಹೂಗಳನ್ನು ಕೊಳ್ಳುವವರಿಲ್ಲದೆ ಗಿಡದಲ್ಲೆ ಒಣಗಿ […]

ಹೂ ಬೆಳೆಗಾರರಿಗೆ ನೆರವಾದ ತೋಟಗಾರಿಕಾ ಇಲಾಖೆ, ಈವರೆಗೆ 80 ರೈತರಿಗೆ ಅನುದಾನ
ಆಯೇಷಾ ಬಾನು
| Edited By: |

Updated on:Jun 20, 2020 | 2:53 PM

Share

ನೆಲಮಂಗಲ: ಕೊರೊನಾ ವೈರಸ್​ನಿಂದ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ವ್ಯಾಪಾರಿಗಳು ಉದ್ಯೋಗಿಗಳು ಕೂಲಿ ಕಾರ್ಮಿಕರು ರೈತರು ಎಲ್ಲರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಹೂ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೋಟಗಾರಿಕಾ ಇಲಾಖೆ ಅನುದಾನ ಬಿಡುಗಡೆ ಮಾಡಿದೆ.

ಲಾಕ್​ಡೌನ್​ನಿಂದ ದೇವಾಲಯಗಳು, ಗುಡಿ-ಗೋಪುರಗಳು, ಜಾತ್ರೆ-ಬಜಾರ್​ಗಳು, ಮದುವೆ-ಮುಂಜಿಗಳಂತ ಶುಭಕಾರ್ಯಕ್ಕೆ ಬ್ರೇಕ್ ಬಿದ್ದಿದ್ದು, ಶುಭ ಸಮಾರಂಭಗಳ ಮೆರಗನ್ನು ಹೆಚ್ಚಿಸುವ ಬಗೆಬಗೆಯ ಅಲಂಕಾರಿಕ ಪುಷ್ಪಗಳು ಸೇರಿದಂತೆ ಪೂಜೆಗೆ ಬಳಸುವ ಹೂಗಳನ್ನು ಕೊಳ್ಳುವವರಿಲ್ಲದೆ ಗಿಡದಲ್ಲೆ ಒಣಗಿ ಉದುರಿಹೋಗುವ ಪರಿಸ್ಥಿತಿ ಉಂಟಾಗಿದೆ.

ಕೊರೊನಾ ಕಾಲದಲ್ಲಿ ಕೈಗೆ ಬಂದಿದ್ದ ಬೆಳೆ ಮಾರಾಟವಾಗದೆ ಬೆಳೆಯನ್ನು ಬೆಳೆಯಲು ಪಡೆದಿದ್ದ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಲು ತೋಟಗಾರಿಕಾ ಇಲಾಖೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ತೋಟಗಾರಿಕಾ ಇಲಾಖೆಗೆ ಆನ್ಲೈನ್ ಮೂಲಕ 170 ಜನ ರೈತರು ಹಾಗೂ ನೇರವಾಗಿ ಕಚೇರಿಯಲ್ಲಿ 359 ರೈತರು ಸೇರಿದಂತೆ ಒಟ್ಟು 529 ಅರ್ಜಿಗಳು ಬಂದಿದ್ದವು. ಸರ್ಕಾರದಿಂದ ತೋಟಗಾರಿಕೆ ಇಲಾಖೆಗೆ 6 ಲಕ್ಷ 20 ಸಾವಿರ ರೂಗಳ ಅನುದಾನ ಬಂದಿದ್ದು, ಅದರಲ್ಲಿ ಇಲ್ಲಿಯವರೆಗೆ 80 ಜನ ಹೂ ಬೆಳೆಗಾರರಿಗೆ 5 ಲಕ್ಷದ 20 ಸಾವಿರ ಪರಿಹಾರ ಮೊತ್ತವನ್ನು ರೈತರ ಖಾತೆಗೆ ವರ್ಗಾಹಿಸಲಾಗಿದೆ.

Published On - 2:50 pm, Sat, 20 June 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ