ನೆಲಮಂಗಲ: ಆಹಾರ ಸಾಮಗ್ರಿಗಳ ವೇರ್ಹೌಸ್ನಲ್ಲಿ ಕಳವು ಆರೋಪ ಕೇಳಿಬಂದಿದ್ದು, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಕೌಂಟೆಂಟ್ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಬಳಿಯ ವೇರ್ಹೌಸ್ನಲ್ಲಿ ಬಿಲ್ ಹಾಕದೆ ಅಸಿಸ್ಟೆಂಟ್ ಮ್ಯಾನೇಜರ್ ಕ್ರಿಸ್ಟೋಫರ್ ಸುನೀಲ್ ಹಾಗೂ ಅಕೌಂಟೆಂಟ್ ಪ್ರಸನ್ನ ಕುಮಾರ್ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 40 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿ ಕಳವು ಮಾಡಿದ್ದಾರೆಂದು ಆರೋಪಿಸಿ ವೇರ್ಹೌಸ್ನ ಮುಖ್ಯಸ್ಥ ಲೋಕೇಶ್ ದೂರು ನೀಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವೇರ್ಹೌಸ್ನಲ್ಲಿ ದಿನಬಳಕೆಯ ವಸ್ತುಗಳನ್ನು ವೆಂಡರ್ಗಳಿಗೆ ಸರಬರಾಜು ಮಾಡುತ್ತಿದ್ದು, ನವೆಂಬರ್ 22ಕ್ಕೆ ಕಂಪನಿಯಿಂದ ಅಕೌಂಟ್ಗಳನ್ನು ಪರಿಶೀಲಿಸಲಾಗಿ 40,40,536 ರೂ. ಮೌಲ್ಯದ ಸರಕುಗಳು ಕಾಣೆಯಾಗಿರುವುದು ತಿಳಿದುಬಂದಿದೆ. ವೇರ್ಹೌಸ್ನಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳನ್ನು ವಿಚಾರಿಸಿದಾಗ, ವೇರ್ಹೌಸ್ನಲ್ಲಿ ಕೆಲಸ ಮಾಡುವ ಅಸಿಸ್ಟೆಂಟ್ ಮ್ಯಾನೇಜರ್ ಕ್ರಿಸ್ಟೋಪರ್ ಸುನಿಲ್ ಕುಮಾರ್ ಹಲವಾರು ತಿಂಗಳುಗಳಿಂದ ಬಿಲ್ಲುಗಳನ್ನು ಮತ್ತು ಇನ್ವಾಟ್ಸ್ಗಳನ್ನು ಮಾಡದೆ ಸರಕುಗಳನ್ನು ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ ಅಂತ ಸಲ್ಲಿಸಿದ ದೂರಲ್ಲಿ ದಾಖಲಾಗಿದೆ.
ಸುನಿಲ್ ಕುಮಾರ್ ಜೊತೆಗೆ ಅಕೌಂಟೆಂಟ್ ಪ್ರಸನ್ನ ಕುಮಾರ್ ಸಹ ಶಾಮೀಲಾಗಿದ್ದಾರೆ ಅಂತ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಕಂಪನಿಗೆ ಮೋಸ ಮಾಡಿದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ವೇರ್ಹೌಸ್ನ ಮುಖ್ಯಸ್ಥ ಲೋಕೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇಬ್ಬರು ಪೆಡ್ಲರ್ಗಳ ಸೆರೆ
ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ಪೆಡ್ಲರ್ಗಳು ಬಂಧನಕ್ಕೊಳಗಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಡ್ರಗ್ಸ್ ಪೆಡ್ಲರ್ಗಳಿಂದ 30 ಲಕ್ಷ ರೂ. ಮೌಲ್ಯದ ಎಮ್ಡಿಎಮ್ಎ, ಚರಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ನೈಜೀರಿಯಾ ಪ್ರಜೆಯಿಂದ ಕಡಿಮೆ ಬೆಲೆಗೆ ಸಿಂಥೆಟಿಕ್ ಡ್ರಗ್ ಖರೀದಿ ಮಾಡುತ್ತಿದ್ದರು. ನಂತರ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ
ಪುನೀತ್ ನಿಧನದ ಬಳಿಕ ಹೊಸ ಬದಲಾವಣೆಯತ್ತ ಶಾಸಕ ರೇಣುಕಾಚಾರ್ಯ; ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು
ಗದಗ: 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿ; ಅಧಿಕಾರಿಗಳ ವಿರುದ್ಧ ರೈತ ಕುಟುಂಬ ಆಕ್ರೋಶ
Published On - 12:47 pm, Mon, 29 November 21