ಪುನೀತ್ ನಿಧನದ ಬಳಿಕ ಹೊಸ ಬದಲಾವಣೆಯತ್ತ ಶಾಸಕ ರೇಣುಕಾಚಾರ್ಯ; ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು
ಈ ಸಂಸ್ಥೆಯಲ್ಲಿ ಹತ್ತು ಜನ ಅಂಧ ಮಕ್ಕಳಿದ್ದು, ಇವರಲ್ಲಿ ನಾಲ್ವರು ಅಂತಿಮ ವರ್ಷದ ಬಿಎ ಪದವಿ ಓದುತ್ತಿದ್ದಾರೆ. ಇವರಿಗೆ ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದ ವಿಚಾರ ಸಂಸ್ಥೆಯರು ಶಾಸಕರಿಗೆ ತಿಳಿಸಿದ್ದು, ಸದ್ಯ ಆ ನಾಲ್ಕು ಮಕ್ಕಳ ಕಾಲೇಜು ಶುಲ್ಕ ತುಂಬಲು ಹಣ ನೀಡಿದ್ದಾರೆ.
ದಾವಣಗೆರೆ: ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಇಡಿ ರಾಜ್ಯವೇ ಮನೆಯ ಮಗ ಸಾವನ್ನಪ್ಪಿದ ರೀತಿಯಲ್ಲಿ ಮರಗುತ್ತಿದೆ. ಪುನೀತ್ ಗೆ ನಮನ ಸಲ್ಲಿಸುತ್ತಿದೆ. ಅದರಲ್ಲೂ ಅಪ್ಪುವಿನ ಸಾವಿನ ನಂತರ ಶಾಸಕ ರೇಣುಕಾಚಾರ್ಯ (Renukacharya) ಅನೇಕ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಮುಂಬಯಿನಲ್ಲಿ ಇದ್ದರು ಕೂಡಾ ನೇರವಾಗಿ ಬಂದು ಪುನೀತ್ (Puneeth rajkumar) ಅಂತಿಮ ದರ್ಶನ ಪಡೆದರು. ನಂತರ ತಮ್ಮ ಸ್ವಕ್ಷೇತ್ರ ಹೊನ್ನಾಳಿಯಲ್ಲಿ ಪುನೀತ್ ನಮನ ಕಾರ್ಯಕ್ರಮ ಮಾಡಿ, ಇಡಿ ತಮ್ಮ ಕುಟುಂಬದ 52 ಜನರು ಸಹ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು. ಇದೇ ರೀತಿ ಹಳ್ಳಿಯಲ್ಲಿ ನೇತ್ರದಾನ ಅಭಿಯಾನ ಶುರುರು ಮಾಡಿದ್ದಾರೆ. ಇದೀಗ ಅಂಧ ಮಕ್ಕಳ ವಿದ್ಯಾಭ್ಯಾಸಕ್ಕೆ ನರೆವು ನೀಡಲು ನಿರ್ಧರಿಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಇರುವ ಸಂತೃಪ್ತ ಅಂಧರ ಸೇವಾ ಸಂಸ್ಥೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಇಂದು (ನವೆಂಬರ್ 29) ಸಂಸ್ಥೆಯ ಪ್ರತಿನಿಧಿಗಳು ಬಂದು ಹೊನ್ನಾಳಿಯ ಸ್ವಗೃಹದಲ್ಲಿ ಶಾಸಕ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿದರು. ಇಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಸಹಾಯ ಮಾಡುವಂತೆ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ರೇಣುಕಾಚಾರ್ಯ ಸದ್ಯಕ್ಕೆ ಹತ್ತು ಸಾವಿರ ರೂಪಾಯಿ ಆರ್ಥಿಕ ಸಹಾಯ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಹತ್ತು ಜನ ಅಂಧ ಮಕ್ಕಳಿದ್ದು, ಇವರಲ್ಲಿ ನಾಲ್ವರು ಅಂತಿಮ ವರ್ಷದ ಬಿಎ ಪದವಿ ಓದುತ್ತಿದ್ದಾರೆ. ಇವರಿಗೆ ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದ ವಿಚಾರ ಸಂಸ್ಥೆಯರು ಶಾಸಕರಿಗೆ ತಿಳಿಸಿದ್ದು, ಸದ್ಯ ಆ ನಾಲ್ಕು ಮಕ್ಕಳ ಕಾಲೇಜು ಶುಲ್ಕ ತುಂಬಲು ಹಣ ನೀಡಿದ್ದಾರೆ.
ಈ ಹಿಂದೆ ಕೂಡಾ ಶಾಸಕ ರೇಣುಕಾಚಾರ್ಯ ಕೊವಿಡ್ ಸಂಕಷ್ಟದ ಕಾಲದಲ್ಲಿ ಈ ಸಂಸ್ಥೆಗೆ ಬೇಕಾದ ಆಹಾರ ಸಾಮಗ್ರಿ ಹಾಗೂ ಆರ್ಥಿಕ ಸಹಾಯ ಮಾಡಿದ್ದಾರೆ. ಈಗ ಮತ್ತೆ ಸಂಕಷ್ಟ ಬಂದ ಹಿನ್ನೆಲೆ ಸಂಸ್ಥೆಯರು ವಿದ್ಯಾರ್ಥಿಗಳ ಸಂಕಷ್ಟ ಹಂಚಿಕೊಂಡಿದ್ದು, ಉಳಿದ ಮಕ್ಕಳಿಗೆ ಬೇಕಾದ ಶಾಲೆ ಹಾಗೂ ಕಾಲೇಜು ಶುಲ್ಕ ನೀಡಲಾಗುವುದು. ಇದರ ಜೊತೆಗೆ ಮಕ್ಕಳಿಗೆ ಬಟ್ಟೆ ಆಹಾರ ಸೇರಿದಂತೆ ಇತರ ಸಹಾಯವನ್ನು ನೀಡುವುದಾಗಿ ರೇಣುಕಾಚಾರ್ಯ ಭರವಸೆ ನೀಡಿದ್ದಾರೆ.
ಒಟ್ಟಾರೆ ಪುನೀತ್ ನಿಧನದ ಬಳಿಕೆ ರೇಣುಕಾಚಾರ್ಯ ಅವರ ಇಂತಹ ಸಾಮಾಜಿಕ ಕಾರ್ಯಗಳು ಹೆಚ್ಚಾಗಿವೆ. ಮೊನ್ನೆ ಕೂಡ ಬೆಂಗಳೂರಿನಲ್ಲಿ ಪುನೀತ್ ಅಭಿಮಾನಿ ಮಹಿಳೆಯೊಬ್ಬಳು ಸಹಕಾರ ಕೇಳಿದಾಗ ಆರ್ಥಿಕ ಸಹಾಯ ಮಾಡಿದ್ದರು. ಮೇಲಾಗಿ ಪ್ರತಿ ತಿಂಗಳು ಬಂದು ಮನೆ ಬಾಡಿಗೆ ಹಣ ಪಡೆದುಕೊಂಡು ಹೋಗುವಂತೆ ಅವರು ಆ ಮಹಿಳೆಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸೂಕ್ತ ಸಮಯಕ್ಕೆ ನೆರವು ಸಿಗದೇ ಹೋಗಿದ್ದರೆ, ತಂದೆ-ಮಗ ತಮ್ಮ ಹುಚ್ಚು ಸಾಹಸಕ್ಕೆ ಭಾರಿ ಬೆಲೆ ತೆರಬೇಕಾಗುತಿತ್ತು!
Published On - 12:21 pm, Mon, 29 November 21