ದೇವನಹಳ್ಳಿಯಲ್ಲಿ ಬಾರ್ ಎದುರು ಪುಂಡರ ರೌಡಿಸಂ; ಯುವಕನ ತಲೆಗೆ ಬಿಯರ್ ಬಾಟಲ್​ನಿಂದ ಹೊಡೆದ ಆರೋಪಿಗಳು

ಯುವಕನ ತಲೆಗೆ ಬಿಯರ್ ಬಾಟಲ್​ನಿಂದ ಹೊಡೆದು ಬೆನ್ನಿಗೆ ಇರಿದಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ.

ದೇವನಹಳ್ಳಿಯಲ್ಲಿ ಬಾರ್ ಎದುರು ಪುಂಡರ ರೌಡಿಸಂ; ಯುವಕನ ತಲೆಗೆ ಬಿಯರ್ ಬಾಟಲ್​ನಿಂದ ಹೊಡೆದ ಆರೋಪಿಗಳು
ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

ಬೆಂಗಳೂರು: ಮದ್ಯದ ಅಮಲಿನಲ್ಲಿ ಬಾರ್ ಎದುರು ಪುಂಡರ ಗ್ಯಾಂಗ್ ರೌಡಿಸಂ ಮಾಡಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕನ ಜೊತೆ ಗಲಾಟೆ ಮಾಡಿದ್ದಾರೆ. ಅಲ್ಲದೇ ಯುವಕನ ತಲೆಗೆ ಬಿಯರ್ ಬಾಟಲ್‌ನಿಂದ ಹೊಡೆದು ಬೆನ್ನಿಗೆ ಇರಿದಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ. ನವೆಂಬರ್ 26ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಗುಡಿಯ ಆನಂದ್‌(23) ಎಂಬ ಯುವಕ ಹಲ್ಲೆಗೊಳಗಾಗಿದ್ದಾನೆ. ರೋಹನ್, ಮಧು, ಚಂದನ್ ಸೇರಿ ಐವರ ವಿರುದ್ಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೈಕ್ ಸವಾರ ಸಾವು ಪಲ್ಟಿಯಾಗಿದ್ದ ಆಟೋಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೊಸ ಅಗ್ರಹಾರದ ಬಳಿ ಅಪಘಾತ ಸಂಭವಿಸಿದೆ. 35 ವರ್ಷದ ಸತೀಶ್ ಎಂಬುವವರು ಮೃತಪಟ್ಟಿದ್ದಾರೆ. ಪತ್ನಿ ಪಾರ್ವತಿ, ಮಗಳು ಖುಷಿ, ಮಗ ಜೀವನ್ಗೆ ಗಾಯಗಳಾಗಿವೆ. ಸದ್ಯ ಈ ಪ್ರಕರಣ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

8 ಜನರ ವಿರುದ್ಧ ಎಫ್​​ಐಆರ್​ ದಾಖಲು ನಂಜನಗೂಡು ಪೊಲೀಸರ ಕಸ್ಟಡಿಯಲ್ಲಿದ್ದ ‌ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿ 8 ಜನರ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಬ್ಯಾಳಾರುಹುಂಡಿ ನಿವಾಸಿ ಸಿದ್ದರಾಜು(31) ಮೃತಪಟ್ಟಿದ್ದ. ಮಹಿಳೆ ವಿಚಾರಕ್ಕೆ ಪಾನಮತ್ತನಾಗಿ ಸಿದ್ದರಾಜು ಗಲಾಟೆ ಮಾಡಿದ್ದ. ಈ ವೇಳೆ ಸಿದ್ದರಾಜು ಮೇಲೆ ಹಲ್ಲೆ ನಡೆಸಲಾಗಿತ್ತು. ಸಿದ್ದರಾಜು ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಮೃತಪಟ್ಟಿದ್ದ.

ಇದನ್ನೂ ಓದಿ

ಪಡಿತರ ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಸೇರಿರುವ ಆರೋಪ, ಕರಡಕಲ್‌ನ ನ್ಯಾಯಬೆಲೆ ಅಂಗಡಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೆಲವು ಶಾಲೆಯಲ್ಲಿ ಕನ್ನಡ ತರಗತಿಯನ್ನು ಇಂಗ್ಲಿಷ್​ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ; ಹೀಗಾದರೆ ಕನ್ನಡ ಕಲಿಕೆ ಹೇಗೆ ಸಾಧ್ಯ?

Published On - 9:42 am, Tue, 30 November 21

Click on your DTH Provider to Add TV9 Kannada