AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಆಹಾರ ಸಾಮಗ್ರಿಗಳ ವೇರ್​ಹಾಸ್​ನಲ್ಲಿ ಕಳವು ಆರೋಪ! ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟೆಂಟ್ ವಿರುದ್ಧ ದೂರು ದಾಖಲು

ವೇರ್​ಹೌಸ್​ನಲ್ಲಿ ದಿನಬಳಕೆಯ ವಸ್ತುಗಳನ್ನು ವೆಂಡರ್​ಗಳಿಗೆ ಸರಬರಾಜು ಮಾಡುತ್ತಿದ್ದು, ನವೆಂಬರ್ 22ಕ್ಕೆ ಕಂಪನಿಯಿಂದ ಅಕೌಂಟ್​ಗಳನ್ನು ಪರಿಶೀಲಿಸಲಾಗಿ 40,40,536 ರೂ. ಮೌಲ್ಯದ ಸರಕುಗಳು ಕಾಣೆಯಾಗಿರುವುದು ತಿಳಿದುಬಂದಿದೆ.

ನೆಲಮಂಗಲ: ಆಹಾರ ಸಾಮಗ್ರಿಗಳ ವೇರ್​ಹಾಸ್​ನಲ್ಲಿ ಕಳವು ಆರೋಪ! ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟೆಂಟ್  ವಿರುದ್ಧ ದೂರು ದಾಖಲು
ಆಹಾರ ಸಾಮಗ್ರಿಗಳ ವೇರ್​ಹೌಸ್
TV9 Web
| Edited By: sandhya thejappa|

Updated on:Nov 29, 2021 | 1:11 PM

Share

ನೆಲಮಂಗಲ: ಆಹಾರ ಸಾಮಗ್ರಿಗಳ ವೇರ್​ಹೌಸ್​ನಲ್ಲಿ ಕಳವು ಆರೋಪ ಕೇಳಿಬಂದಿದ್ದು, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಕೌಂಟೆಂಟ್ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಬಳಿಯ ವೇರ್​ಹೌಸ್​ನಲ್ಲಿ ಬಿಲ್ ಹಾಕದೆ ಅಸಿಸ್ಟೆಂಟ್ ಮ್ಯಾನೇಜರ್ ಕ್ರಿಸ್ಟೋಫರ್ ಸುನೀಲ್ ಹಾಗೂ ಅಕೌಂಟೆಂಟ್ ಪ್ರಸನ್ನ ಕುಮಾರ್ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 40 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿ ಕಳವು ಮಾಡಿದ್ದಾರೆಂದು ಆರೋಪಿಸಿ ವೇರ್​ಹೌಸ್​ನ ಮುಖ್ಯಸ್ಥ ಲೋಕೇಶ್ ದೂರು ನೀಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವೇರ್​ಹೌಸ್​ನಲ್ಲಿ ದಿನಬಳಕೆಯ ವಸ್ತುಗಳನ್ನು ವೆಂಡರ್​ಗಳಿಗೆ ಸರಬರಾಜು ಮಾಡುತ್ತಿದ್ದು, ನವೆಂಬರ್ 22ಕ್ಕೆ ಕಂಪನಿಯಿಂದ ಅಕೌಂಟ್​ಗಳನ್ನು ಪರಿಶೀಲಿಸಲಾಗಿ 40,40,536 ರೂ. ಮೌಲ್ಯದ ಸರಕುಗಳು ಕಾಣೆಯಾಗಿರುವುದು ತಿಳಿದುಬಂದಿದೆ. ವೇರ್​ಹೌಸ್​ನಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳನ್ನು ವಿಚಾರಿಸಿದಾಗ, ವೇರ್​ಹೌಸ್​ನಲ್ಲಿ ಕೆಲಸ ಮಾಡುವ ಅಸಿಸ್ಟೆಂಟ್ ಮ್ಯಾನೇಜರ್‌ ಕ್ರಿಸ್ಟೋಪರ್ ಸುನಿಲ್ ಕುಮಾರ್ ಹಲವಾರು ತಿಂಗಳುಗಳಿಂದ ಬಿಲ್ಲುಗಳನ್ನು ಮತ್ತು ಇನ್​ವಾಟ್ಸ್​ಗಳನ್ನು ಮಾಡದೆ ಸರಕುಗಳನ್ನು ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ ಅಂತ ಸಲ್ಲಿಸಿದ ದೂರಲ್ಲಿ ದಾಖಲಾಗಿದೆ.

ಸುನಿಲ್ ಕುಮಾರ್ ಜೊತೆಗೆ ಅಕೌಂಟೆಂಟ್ ಪ್ರಸನ್ನ ಕುಮಾರ್ ಸಹ ಶಾಮೀಲಾಗಿದ್ದಾರೆ ಅಂತ ಉದ್ಯೋಗಿಯೊಬ್ಬರು  ತಿಳಿಸಿದ್ದಾರೆ. ಕಂಪನಿಗೆ ಮೋಸ ಮಾಡಿದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ವೇರ್​ಹೌಸ್​ನ ಮುಖ್ಯಸ್ಥ ಲೋಕೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇಬ್ಬರು ಪೆಡ್ಲರ್​ಗಳ ಸೆರೆ ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ಪೆಡ್ಲರ್​ಗಳು ಬಂಧನಕ್ಕೊಳಗಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಡ್ರಗ್ಸ್ ಪೆಡ್ಲರ್​ಗಳಿಂದ 30 ಲಕ್ಷ ರೂ. ಮೌಲ್ಯದ ಎಮ್ಡಿಎಮ್ಎ, ಚರಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ನೈಜೀರಿಯಾ ಪ್ರಜೆಯಿಂದ ಕಡಿಮೆ ಬೆಲೆಗೆ ಸಿಂಥೆಟಿಕ್ ಡ್ರಗ್ ಖರೀದಿ ಮಾಡುತ್ತಿದ್ದರು. ನಂತರ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಇದನ್ನೂ ಓದಿ

ಪುನೀತ್ ನಿಧನದ ಬಳಿಕ ಹೊಸ ಬದಲಾವಣೆಯತ್ತ ಶಾಸಕ ರೇಣುಕಾಚಾರ್ಯ; ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು

ಗದಗ: 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿ; ಅಧಿಕಾರಿಗಳ ವಿರುದ್ಧ ರೈತ ಕುಟುಂಬ ಆಕ್ರೋಶ

Published On - 12:47 pm, Mon, 29 November 21

Follow Us
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ