ಪ್ರೀತಿಸಿ ನಂಬಿಸಿ ಗರ್ಭಿಣಿ ಮಾಡಿ ಕೈ ಬಿಟ್ಟ ಯುವಕ; ನ್ಯಾಯಕ್ಕಾಗಿ ಯುವತಿ ಕಣ್ಣೀರು, ಆರೋಪಿಗೆ ಬಲೆ ಬೀಸಿದ ಪೊಲೀಸ್

ಪ್ರೀತಿಸಿ ನಂಬಿಸಿ ಗರ್ಭಿಣಿ ಮಾಡಿ ಕೈ ಬಿಟ್ಟ ಯುವಕ; ನ್ಯಾಯಕ್ಕಾಗಿ ಯುವತಿ ಕಣ್ಣೀರು, ಆರೋಪಿಗೆ ಬಲೆ ಬೀಸಿದ ಪೊಲೀಸ್
ಬಾಗಲಗುಂಟೆ ಠಾಣೆ

ದಾಸರಹಳ್ಳಿಯ ಯುವತಿ ಹಾಗೂ ಆರೋಪಿ ಅರುಣ್ ಇಬ್ಬರು ಕಳೆದ 10 ತಿಂಗಳಿಂದ ಲಿವಿಂಗ್ ಟು ಗೆದರ್ನಲ್ಲಿದ್ದರು. ಇಬ್ಬರಲ್ಲಿ ಅತಿಯಾದ ಪ್ರೀತಿ ಇತ್ತು. ಒಪ್ಪಿಗೆ ಮೂಲಕವೇ ದೈಹಿಕ ಸಂಪರ್ಕ ಬೆಳೆಸಿದ್ದರು. ಅಲ್ಲದೆ ಅರುಣ್ ಮನೆಯಲ್ಲಿ ಸಮಸ್ಯೆಯಿದೆ ಎಂದು ಹೇಳಿ 4 ಲಕ್ಷ ರೂ ಹಣವನ್ನು ಸಹ ಪಡೆದಿದ್ದ. ಆದ್ರೆ ಈಗ ಯುವತಿ ಗರ್ಭಿಣಿಯೆಂದು ತಿಳಿದ ಮೇಲೆ ಇದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ದೂರವಾಗಿದ್ದಾನೆ.

TV9kannada Web Team

| Edited By: Ayesha Banu

Nov 30, 2021 | 11:46 AM

ನೆಲಮಂಗಲ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿ ಹಣವನ್ನೇಲ್ಲ ಪಡೆದು ಗರ್ಭಿಣಿಯೆಂದು ತಿಳಿದ ತಕ್ಷಣವೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಜೀವ ಬೆದರಿಕೆ ಹಾಕಿದ್ದಾಗಿ ಬೆಂಗಳೂರಿನ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಸರಹಳ್ಳಿಯ ಯುವತಿ ಹಾಗೂ ಆರೋಪಿ ಅರುಣ್ ಇಬ್ಬರು ಕಳೆದ 10 ತಿಂಗಳಿಂದ ಲಿವಿಂಗ್ ಟು ಗೆದರ್ನಲ್ಲಿದ್ದರು. ಇಬ್ಬರಲ್ಲಿ ಅತಿಯಾದ ಪ್ರೀತಿ ಇತ್ತು. ಒಪ್ಪಿಗೆ ಮೂಲಕವೇ ದೈಹಿಕ ಸಂಪರ್ಕ ಬೆಳೆಸಿದ್ದರು. ಅಲ್ಲದೆ ಅರುಣ್ ಮನೆಯಲ್ಲಿ ಸಮಸ್ಯೆಯಿದೆ ಎಂದು ಹೇಳಿ 4 ಲಕ್ಷ ರೂ ಹಣವನ್ನು ಸಹ ಪಡೆದಿದ್ದ. ಆದ್ರೆ ಈಗ ಯುವತಿ ಗರ್ಭಿಣಿಯೆಂದು ತಿಳಿದ ಮೇಲೆ ಇದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ದೂರವಾಗಿದ್ದಾನೆ. ಸದ್ಯ ಈ ಸಂಬಂಧ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಅರುಣ್ಗಾಗಿ ಪೊಲೀಸರು ತಲಾಶ್ ಮಾಡ್ತಿದ್ದಾರೆ.

ಯುವತಿ ನೀಡಿದ ದೂರಿನಲ್ಲಿರುವ ಅಂಶಗಳು ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಖಾಸಗಿ ಕೆಲಸ ಮಾಡಿಕೊಂಡಿರುತ್ತೇನೆ, ನನಗೆ ಅರುಣ ಎಂಬ ಹುಡುಗನು ಸುಮಾರು 10 ತಿಂಗಳಿನಿಂದ ಪರಿಚಯವಾಗಿದ್ದು, ಅರುಣ ನನ್ನನ್ನು ಪ್ರೀತಿಸುವುದಾಗಿ 5ತಿಂಗಳ ಹಿಂದೆ ತಿಳಿಸಿದ್ದು ನಾವಿಬ್ಬರು ಪ್ರೀತಿಸುತ್ತಿದ್ದೆವು. ಹೀಗಿರುವಾಗ ನಾನು ಮತ್ತು ಅರುಣನು ಒಂದೇ ಮನೆಯಲ್ಲಿ ವಾಸವಿದ್ದು, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದು ಅದಕ್ಕೆ ನನಗೂ ಒಪ್ಪಿಗೆಯಿರುತ್ತದೆ. ನಾನು ಈಗ ಗರ್ಭಿಣಿಯಾಗಿದ್ದು, ಈ ವಿಷಯವನ್ನು ಆರುಣನಿಗೆ ತಿಳಿಸಿದ್ದು, ಆತನು ಮಗುವನ್ನು ತೆಗೆಸಿಬಿಡು, ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಮದುವೆಯೂ ಆಗುವುದಿಲ್ಲ, ನೀನು ಏನು ಮಾಡುತ್ತೀಯೋ ಮಾಡಿಕೊ ಎಂದು ಹೇಳಿರುತ್ತಾನೆ. ಅಲ್ಲದೆ ನನ್ನ ಬಳಿ ಮನೆಯ ಸಮಸ್ಯೆಯಿದೆಯೆಂದು ಹೇಳಿ 4 ಲಕ್ಷ ರೂ ಹಣವನ್ನು ಸಹ ಪಡೆದುಕೊಂಡು ಈಗ ಆ ಹಣವನ್ನು ಕೇಳಿದರೆ ನೀನು ನನಗೆ ಯಾವುದೇ ಹಣವನ್ನು ನೀಡುವುದಿಲ್ಲವೆಂದು ಸುಳ್ಳು ಹೇಳುತ್ತಿದ್ದಾನೆ. ಅಲ್ಲದೆ ಈ ವಿಚಾರವಾಗಿ ಪೊಲೀಸ್ ಕಂಪ್ಲೆಂಟ್ ಏನಾದರೂ ನೀಡಿದರೆ ನಿನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾನೆ, ಆದ್ದರಿಂದ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಗರ್ಭಿಣಿ ಮಾಡಿ ಹಣವನ್ನು ಪಡೆದು ಹಣ ನೀಡದೇ ಮೋಸ ಮಾಡಿ ಜೀವ ಬೆದರಿಕೆಯನ್ನು ಹಾಕಿರುವಂತ ಅರುಣ ಎಂಬಾತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಯುವತಿ ದೂರು ನೀಡಿದ್ದಾಳೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್​ವಾರ್! ಯುವಕನಿಗೆ ಗಂಭೀರ ಗಾಯ

Follow us on

Related Stories

Most Read Stories

Click on your DTH Provider to Add TV9 Kannada