AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್​ನಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಪೋಸ್ಟ್; ಠಾಣೆಗೆ ಕರೆಸಿ ಯುವಕನಿಗೆ ಬುದ್ದಿವಾದ

ಪೋಸ್ಟ್ ಹಾಕಿದ ಸಚಿನ್ ಎಂಬುವನಿಂದಲೇ ಬಹಿರಂಗವಾಗಿ ಕ್ಷಮೆ ಕೇಳಿಸಿದ್ದಾರೆ. ಬಹಿರಂಗವಾಗಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಂತಹ ಶಾಂತಿ ಸುವ್ಯವಸ್ಥೆ ಕದಡಿಸುವಂತಹ ಪ್ರಚೋದನಕಾರಿ ಪೋಸ್ಟ್​ಗಳನ್ನು ಹಾಕದಂತೆ ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಪೋಸ್ಟ್; ಠಾಣೆಗೆ ಕರೆಸಿ ಯುವಕನಿಗೆ ಬುದ್ದಿವಾದ
ದಲಿತ ಸಂಘಟನೆ ಮುಖಂಡರು ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು
TV9 Web
| Edited By: |

Updated on:Nov 30, 2021 | 12:34 PM

Share

ಬೆಂಗಳೂರು: ಫೇಸ್​ಬುಕ್​ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ಠಾಣೆಗೆ ಕರೆಸಿದ ಪೊಲೀಸರು ಬುದ್ದಿವಾದ ಹೇಳಿ ಬಹಿರಂಗವಾಗಿ‌ ಕ್ಷಮೆಯಾಚಿಸಿ ವಾಪಸ್ ಕಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಡುವಿನಪುರ ನಿವಾಸಿ ಸಚಿನ್ ಎಂಬುವವನು ತನ್ನ ಫೇಸ್​ಬುಕ್ ಖಾತೆಯಲ್ಲಿ ಅಂಬೇಡ್ಕರ್ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಅವಮಾನ ಮಾಡಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳಿ ಅಂತ ಸ್ಥಳಿಯ ಅಂಬೇಡ್ಕರ್ ಅಭಿಮಾನಿಗಳು ಮತ್ತು ದಲಿತ ಮುಖಂಡರು ಪೊಲೀಸ್ ಠಾಣೆಗೆ ದೂರು ನೀಡಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ದೂರಿನ ಸೂಕ್ಷ್ಮತೆ ಅರಿತ ನಂದಗುಡಿ ಪೊಲೀಸರು ಅವಹೇಳನಕಾರಿ ಪೋಸ್ಟ್ ಹಾಕಿದ ಯುವಕನನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದಾರೆ.

ಜತೆಗೆ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಯುವಕನ ಕೈಗೆ ಅಂಬೇಡ್ಕರ್ ಪೋಟೋ ಕೊಟ್ಟು ಅದಕ್ಕೆ ಹೂವಿನ ಹಾರ ಹಾಕಿಸುವ ಮೂಲಕ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಸಚಿನ್ ಎಂಬುವನಿಂದಲೇ ಬಹಿರಂಗವಾಗಿ ಕ್ಷಮೆ ಕೇಳಿಸಿದ್ದಾರೆ. ಬಹಿರಂಗವಾಗಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಂತಹ ಶಾಂತಿ ಸುವ್ಯವಸ್ಥೆ ಕದಡಿಸುವಂತಹ ಪ್ರಚೋದನಕಾರಿ ಪೋಸ್ಟ್​ಗಳನ್ನು ಹಾಕದಂತೆ ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳಿಸಿದ್ದಾರೆ.

ಬೆಳಗಾವಿ: ಅಂಬೇಡ್ಕರ್ ಭಾವಚಿತ್ರವಿದ್ದ ಕಟ್ಟೆ ಧ್ವಂಸ ಮಾಡಿದ ಆರೋಪ ಮಾಲಿಕ ತನ್ನ ಕಟ್ಟಡಕ್ಕೆ ಅಡ್ಡಿಯಾಗುತ್ತದೆ ಎಂದು ರಸ್ತೆ ಪಕ್ಕದಲ್ಲಿದ್ದ ಅಂಬೇಡ್ಕರ್​ ಭಾವಚಿತ್ರದ ಕಟ್ಟೆ ಧ್ವಂಸ ಮಾಡಿದ್ದಾರೆ ಎಂಬ ಆರೋಪ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಕೇಳಿ ಬಂದಿದೆ. ಗ್ರಾಮದ ಶಿವಾನಂದ ಸಿದ್ದಪ್ಪ ಪಾಟೀಲ್ ಅಂಬೇಡ್ಕರ್ ಕಟ್ಟೆ ದ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಾನಂದನನ್ನು ವಶಕ್ಕೆ ಪಡೆದ ಕುಲಗೋಡ ಪೊಲೀಸರು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ದಲಿತ ಸಂಘಟನೆಗಳು ಗ್ರಾಮದಲ್ಲಿ ಟೈಯರ್​ಗೆ​ ಬೆಂಕಿ ಇಟ್ಟು ಪ್ರತಿಭಟನೆ ನಡೆಸುತ್ತಿವೆ.

ಇದನ್ನೂ ಓದಿ: ನೆಲಮಂಗಲ: ಆಹಾರ ಸಾಮಗ್ರಿಗಳ ವೇರ್​ಹಾಸ್​ನಲ್ಲಿ ಕಳವು ಆರೋಪ! ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟೆಂಟ್ ವಿರುದ್ಧ ದೂರು ದಾಖಲು

‘ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಪ್ರಿಯಾಂಕ್ ಅವಹೇಳಕಾರಿಯಾಗಿ ಮಾತಾಡಿದ್ದರು, ಆಗ ಎಲ್ಲಿ ಹೋಗಿದ್ದಿರಿ ಸಾರಂಗಧರ ಸ್ವಾಮಿಗಳೇ?’

Published On - 9:20 am, Tue, 30 November 21

ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ