‘ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಪ್ರಿಯಾಂಕ್ ಅವಹೇಳಕಾರಿಯಾಗಿ ಮಾತಾಡಿದ್ದರು, ಆಗ ಎಲ್ಲಿ ಹೋಗಿದ್ದಿರಿ ಸಾರಂಗಧರ ಸ್ವಾಮಿಗಳೇ?’
‘ನೀವು ಕೆಲ ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮೀಜಿ ಎಂಬ ಖ್ಯಾತಿಯನ್ನು ಪಡೆದಿದ್ದೀರಿ’ ಎಂದು ಸಾರಂಗಧರ ಸ್ವಾಮೀಜಿ ವಿರುದ್ಧ ಕಿಡಿ ಕಾರಿರುವ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಸಾರಂಗಧರ ಸ್ವಾಮೀಜಿ ಕೂಡಲೇ ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನೀವು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (priyank kharge) ಮತ್ತು ಬಿಜೆಪಿ ಸಂಸದ ಪ್ರತಾಪ್ ಸಿಂಹ (pratap simha) ನಡುವಣ ವಾಗ್ವಾದ ವಿಚಾರವಾಗಿ ಕಲಬುರಗಿಯ ಸುಲಫಲ ಮಠದ ಸಾರಂಗಧರ ಸ್ವಾಮೀಜಿ (sulaphala mutt swamiji) ಮತ್ತು ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ (andola mutt swamiji) ನಡುವೆ ಟಾಕ್‌ಫೈಟ್ ಜೋರಾಗಿ ನಡೆದಿದೆ. ‘ಮೈಸೂರಿಗೆ ಹೋಗಿ ಪ್ರತಾಪ್ ಸಿಂಹ ಚಡ್ಡಿ ಬಿಚ್ಚಿ ಹೊಡೀತಿವಿ’ ಎಂದಿದ್ದ ಸುಲಫಲ ಮಠದ ಸಾರಂಗಧರ ಸ್ವಾಮೀಜಿ ಹೇಳಿಕೆಗೆ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ತಾಕತ್ತಿದ್ದರೆ ಪ್ರತಾಪ್ ಸಿಂಹ ಚಡ್ಡಿ ಬಿಚ್ಚಿ ಹೊಡೀರಿ. ಆಗ ಮಾತ್ರ ನೀವು ಸ್ವಾಮೀಜಿಗಳೆಂದು ಜನ ಒಪ್ಪಿಕೊಳ್ಳುತ್ತಾರೆ ಎಂದು ಸವಾಲು ಹಾಕಿದ್ದಾರೆ.
‘ನೀವು ಕೆಲ ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮೀಜಿ ಎಂಬ ಖ್ಯಾತಿಯನ್ನು ಪಡೆದಿದ್ದೀರಿ’ ಎಂದು ಸಾರಂಗಧರ ಸ್ವಾಮೀಜಿ ವಿರುದ್ಧ ಕಿಡಿ ಕಾರಿರುವ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಸಾರಂಗಧರ ಸ್ವಾಮೀಜಿ ಕೂಡಲೇ ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನೀವು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಅವಹೇಳಕಾರಿಯಾಗಿ ಮಾತಾಡಿದ್ದರು, ಆಗ ಎಲ್ಲಿ ಹೋಗಿದ್ದಿರಿ ಸಾರಂಗಧರ ಸ್ವಾಮಿಗಳೇ? ಎಂದೂ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಚೆಕ್ ಮಾಡಬೇಕು, ಆತ ಸಂಸದನಾಗೋದಕ್ಕೆ ಲಾಯಕ್ಕಿಲ್ಲ: ಇಕ್ಬಾಲ್ ಅನ್ಸಾರಿ
Siddaramaiah Vs BJP: ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ! ತಿರುಗೇಟು ಕೊಟ್ಟ ಬಿಜೆಪಿ