ಕಲಬುರಗಿ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಸಮಸ್ಯೆ; ಸಿಗ್ನಲ್ ಸಿಗದ ಹಿನ್ನೆಲೆ ಸ್ಟಾರ್ ಏರ್ ವಿಮಾನ ಹೈದರಾಬಾದ್ನಲ್ಲಿ ಲ್ಯಾಂಡಿಂಗ್
ಸ್ಟಾರ್ ಏರ್ ವಿಮಾನದಲ್ಲಿ 40 ಜನ ಪ್ರಯಾಣಿಕರಿದ್ದರು. ಸದ್ಯ ಹೈದರಾಬಾದ್ ಏರ್ಪೋರ್ಟ್ಗೆ ವಿಮಾನ ತಲುಪಿದ್ದು, ಜನರು ಹೈದರಾಬಾದ್ನಿಂದ ವಾಹನಗಳಲ್ಲಿ ಕಲಬುರಗಿಯತ್ತ ಬರುತ್ತಿದ್ದಾರೆ.
ಕಲಬುರಗಿ: ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹಿನ್ನಲೆ ಕಲಬುರಗಿ ಏರ್ಪೋರ್ಟ್ನಲ್ಲಿ (Airport) ಲ್ಯಾಂಡಿಂಗ್ಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ಕಲಬುರಗಿ ಬದಲು ಹೈದರಾಬಾದ್ನಲ್ಲಿ ವಿಮಾನ ಲ್ಯಾಂಡಿಂಗ್ಗೆ (Flight landing) ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದ ವಿಮಾನ ಬೆಳಗ್ಗೆ 10 ಗಂಟೆಗೆ ಲ್ಯಾಂಡಿಂಗ್ ಕಲಬುರಗಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿಗ್ನಲ್ ಸಿಗಲಿಲ್ಲ. ಹೀಗಾಗಿ ಸ್ಟಾರ್ ಏರ್ ವಿಮಾನ ಲ್ಯಾಂಡಿಗ್ ಅನ್ನು ಬದಲಾವಣೆ ಮಾಡಲಾಗಿದೆ.
ಸ್ಟಾರ್ ಏರ್ ವಿಮಾನದಲ್ಲಿ 40 ಜನ ಪ್ರಯಾಣಿಕರಿದ್ದರು. ಸದ್ಯ ಹೈದರಾಬಾದ್ ಏರ್ಪೋರ್ಟ್ಗೆ ವಿಮಾನ ತಲುಪಿದ್ದು, ಜನರು ಹೈದರಾಬಾದ್ನಿಂದ ವಾಹನಗಳಲ್ಲಿ ಕಲಬುರಗಿಯತ್ತ ಬರುತ್ತಿದ್ದಾರೆ.
ಮಳೆ ನಿಂತರೂ ನಿಲ್ಲದ ಮಳೆ ಅನಾಹುತ ಕೋಲಾರದಲ್ಲಿ ಮಳೆ ನಿಂತರೂ ಅನಾಹುತ ನಿಂತಿಲ್ಲ. ತೋಟಗಳಲ್ಲಿ ಇನ್ನೂ ನೀರು ನಿಂತಿದ್ದು, ಟೊಮ್ಯಾಟೋ, ಕೋಸು, ಕ್ಯಾಪ್ಸಿಕಂ ಕೊಳೆತು ಹೋಗುವ ಭೀತಿ ಶುರುವಾಗಿದೆ. ನಿರಂತರ ಮಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ.
ನೀರಲ್ಲಿ ಕೊಳೆತು ನಿಂತ ಈರುಳ್ಳಿ, ಜೋಳ ಬೆಳೆ ಇನ್ನು ಗದಗದಲ್ಲೂ ಮಳೆರಾಯನ ಅವಾಂತರಕ್ಕೆ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ, ಗೋವಿನ ಜೋಳ ಬೆಳೆ ನೀರಲ್ಲಿ ಕೊಳೆತು ನಿಂತಿವೆ. ಕಟಾವಿಗೆ ಬಂದಿದ್ದ ಈರುಳ್ಳಿ ಈಗ ಕೊಳೆತು ನಾರುತ್ತಿದೆ ಅಂತ ರೈತರೊಬ್ಬರು ಕಣ್ಣೀರು ಹಾಕಿದ್ದಾರೆ. ಗೋವಿನ ಜೋಳ ಕೂಡಾ ಜಮೀನಿನಲ್ಲೇ ಮೊಳಕೆಯೊಡಿಯುತ್ತಿದೆ. ಲಕ್ಷಾಂತರ ರೂಪಾಯಿ ಆದಾಯ ನಿರೀಕ್ಷೆಯಲ್ಲಿದ್ದ ರೈತನಿಗೆ ಭಾರಿ ನಿರಾಸೆಯಾಗಿದೆ.
ಮಳೆ ಹಾನಿ ಪ್ರದೇಶಕ್ಕೆ ದಾವಣಗೆರೆ ಡಿಸಿ ಭೇಟಿ ದಾವಣಗೆರೆ ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ನೀರಿನಲ್ಲೇ ನಡೆದು ಮಹಾಂತೇಶ ಬೀಳಗಿ ಸಮೀಕ್ಷೆ ನಡೆಸಿದ್ದಾರೆ. ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ದಾವಣಗೆರೆಯಲ್ಲಿ ಸುಮಾರು 3,063 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2,894 ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತ, ಮೆಕ್ಕೆಜೋಳ ನೀರು ಪಾಲಾಗಿದೆ. ಮಳೆಯಿಂದ ಮೂವರ ಸಾವನ್ನಪ್ಪಿದ್ದು, 316 ಮನೆಗಳಿಗೆ ಹಾನಿಯಾಗಿವೆ ಅಂತ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮಳೆ ಪರಿಹಾರ ಘೋಷಣೆ- ಸಿಎಂ ಬೊಮ್ಮಾಯಿ
Spice jet: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ವಿಮಾನ ದುರಂತ
Published On - 12:37 pm, Sun, 21 November 21