ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮಳೆ ಪರಿಹಾರ ಘೋಷಣೆ- ಸಿಎಂ ಬೊಮ್ಮಾಯಿ
ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿಕೊಡುತ್ತಿಲ್ಲ ಅಂತಾ ವಿಪಕ್ಷಗಳ ಆರೋಪ ವಿಚಾರಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ನನಗೆ ಬೆಂಗಳೂರು ಬಗ್ಗೆ ವಿಶೇಷ ಕಾಳಜಿ ಇದೆ.
ಬೆಂಗಳೂರು: ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಹೇಳಿಕೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಲೆನಾಡಿನಲ್ಲಿ 3 ದಿನ ಸುರಿದ ಭಾರಿ ಮಳೆಯಿಂದ ಹಾನಿಯಾಗಿದೆ. ಬ್ರಿಡ್ಜ್, ರಸ್ತೆ, ಬೆಳೆ ಹಾನಿ, ಕೆಲವಡೆ ಜನರು ಮೃತಪಟ್ಟಿದ್ದಾರೆ. ಆದಷ್ಟು ಬೇಗ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಸಮೀಕ್ಷೆ ನಡೆಸುತ್ತಿದ್ದೇವೆ. ಈಗಾಗಲೇ ಎಲ್ಲ ಕಡೆ ಪ್ರಾಥಮಿಕ ಸಮೀಕ್ಷೆ ಪ್ರಾರಂಭಿಸಲಾಗಿದೆ. ಬೆಳೆಹಾನಿ, ಮಳೆಹಾನಿ ಬಗ್ಗೆ ವರದಿ ನೀಡಲು ಸೂಚಿಸಿದ್ದೇನೆ. ಸಂಜೆಯೊಳಗೆ ತರಿಸಿಕೊಂಡು ವರದಿಗಳ ಪರಿಶೀಲಿಸುತ್ತೇನೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಘೋಷಣೆ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿಕೊಡುತ್ತಿಲ್ಲ ಅಂತಾ ವಿಪಕ್ಷಗಳ ಆರೋಪ ವಿಚಾರಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ನನಗೆ ಬೆಂಗಳೂರು ಬಗ್ಗೆ ವಿಶೇಷ ಕಾಳಜಿ ಇದೆ. ನಾನು ಈಗಾಗಲೇ ಬೆಂಗಳೂರಿನ ಹಲವು ಕಡೆ ರೌಂಡ್ಸ್ ಮಾಡಿದ್ದೇನೆ. ಹೆಚ್ಎಸ್ಆರ್, ಮಡಿವಾಳ, ಆರ್ಆರ್ ನಗರ ಸೇರಿದಂತೆ ಹಲವಡೆ ರೌಂಡ್ಸ್ ಹಾಕಿದ್ದೀನಿ. ಮಳೆ ನಿಂತು ಕೂಡಲೇ ಎಲ್ಲಾ ಕೆಲಸಗಳು ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರದ ಬಗ್ಗೆ ಮಾತನಾಡಿದ ಬೊಮ್ಮಾಯಿ, ನಾವು ಯಾವುದೇ ರೀತಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ. ಎಸಿಬಿ ಅಧಿಕಾರಿಗಳ ದಾಳಿ ಬಳಿಕ ಅವರು ಕೊಡುವ ವರದಿ, ಶಿಫಾರಸು ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬಿಡಿಎನಲ್ಲಿ ಯಾರನ್ನೂ ರಕ್ಷಿಸುವ ಕೆಲಸ ನಾವು ಮಾಡಲ್ಲ. ಬಿಡಿಎ ಬಗ್ಗೆ ಈಗಾಗಲೇ ನನಗೆ ಹಲವು ದೂರು ಬಂದಿದ್ದವು. ಭ್ರಷ್ಟಾಚಾರ ಬಗ್ಗೆ ವಿಶ್ವನಾಥ್ ನನ್ನ ಗಮನಕ್ಕೆ ತಂದಿದ್ದರು. ಮುಖ್ಯವಾಹಿನಿಗೆ ಬಿಡಿಎ ತರುವ ವ್ಯವಸ್ಥೆ ಮಾಡಬೇಕು. ಬಿಡಿಎ ಮೂಲಕ ನಾಗರಿಕ ಸೇವೆ ಸಮರ್ಪಕವಾಗಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ
IFFI 2021: ಒಳ್ಳೆಯ ಚಲನಚಿತ್ರಗಳು ದೇಶ- ಭಾಷೆ ಗಡಿ ಮೀರಿ ಗುರುತಿಸಿಕೊಳ್ಳುತ್ತವೆ: ಸಚಿವ ಅನುರಾಗ್ ಠಾಕೂರ್