IFFI 2021: ಒಳ್ಳೆಯ ಚಲನಚಿತ್ರಗಳು ದೇಶ- ಭಾಷೆ ಗಡಿ ಮೀರಿ ಗುರುತಿಸಿಕೊಳ್ಳುತ್ತವೆ: ಸಚಿವ ಅನುರಾಗ್ ಠಾಕೂರ್
Anurag Thakur: ಇಂದು ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಉದ್ಘಾಟಿಸಿದ್ದಾರೆ. ಈ ವೇಳೆ ಅವರು ಪ್ರಾದೇಶಿಕ ಚಿತ್ರಗಳ ಗುಣಮಟ್ಟ ಹಾಗೂ ಅದರ ಸಾಧ್ಯತೆಗಳ ಕುರಿತು ಮಾತನಾಡಿದ್ದಾರೆ.
ಒಳ್ಳೆಯ ಚಲನ ಚಿತ್ರಗಳು ದೇಶ- ಭಾಷೆ ಗಡಿ ಮೀರಿ ಗುರುತಿಸಿಕೊಳ್ಳುತ್ತವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ನುಡಿದಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಪ್ರಸ್ತುತ ಚಿತ್ರ ತಯಾರಕರು ಸರಿಯಾದ ಕಂಟೆಂಟ್ಗಳನ್ನು ನೀಡಿದಲ್ಲಿ ಅದು ಕೇವಲ ಪ್ರಾದೇಶಿಕ ಭಾಷೆಗೆ ಸೀಮಿತವಾಗುವುದಿಲ್ಲ. ಕೆಲವು ಸಮಯದಲ್ಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ ಎಂದು ಅವರು ನುಡಿದಿದ್ದಾರೆ. ನಿನ್ನೆ (ಶನಿವಾರ) ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಾರಂಭವಾಗಿದ್ದು, ಇಂದು ಭಾರತೀಯ ಪನೋರಮಾ ವಿಭಾಗದ ಪ್ರದರ್ಶನಗಳು ಆರಂಭಗೊಂಡಿವೆ.
ಉದ್ಘಾಟನಾ ಸಮಾರಂಭದಲ್ಲಿ ಸಚಿವ ಅನುರಾಗ್ ಠಾಕೂರ್ ಮಾತನಾಡುತ್ತಾ, ಭಾರತವನ್ನು ವಿಶ್ವ ಸಿನಿಮಾದ ಕೇಂದ್ರವನ್ನಾಗಿ ಮಾಡಬೇಕು. ಜೊತೆಗೆ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬಹುದೊಡ್ಡ ಶಕ್ತಿಯನ್ನಾಗಿ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದ್ದರು. ಭಾರತೀಯ ಪನೋರಮಾ ವಿಭಾಗದಲ್ಲಿ ಒಟ್ಟು 24 ಚಲನಚಿತ್ರಗಳು ಹಾಗೂ 20 ನಾನ್- ಫೀಚರ್ ಫಿಲ್ಮ್ಸ್ ಪ್ರದರ್ಶನಗೊಳ್ಳಲಿವೆ. ಇಂದು ಮೊದಲ ಚಲನಚಿತ್ರವಾಗಿ ‘ಸೇಮ್ಖೋರ್’ ಪ್ರದರ್ಶನಗೊಳ್ಳಲಿದ್ದು, ಚಿತ್ರದ ಹೊರತಾದ ವಿಭಾಗದಲ್ಲಿ ‘ವೆದ್- ದಿ ವಿಶನರಿ’ ಮೊದಲಿಗೆ ಪ್ರದರ್ಶನಗೊಳ್ಳಲಿದೆ.
Today, if you are creating the right content, then it is not restricted only to the regional language, it becomes national and international soon: I&B Minister @ianuragthakur @MIB_India@IFFIGoa@official_dff#IFFI2021 pic.twitter.com/VoOUOgo9pA
— DD News (@DDNewslive) November 21, 2021
ಚಲನಚಿತ್ರೋತ್ಸವವು ನವೆಂಬರ್ 28ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ದೇಶ- ವಿದೇಶದ ಖ್ಯಾತ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಿನ್ನೆ (ಶನಿವಾರ) ಚಿತ್ರೋತ್ಸವ ಆರಂಭವಾಗಿದ್ದು, ಖ್ಯಾತ ತಾರೆಯರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್ ಮತ್ತು ಶ್ರದ್ಧಾ ಕಪೂರ್ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಲನಚಿತ್ರ ನಿರ್ಮಾಪಕರಾದ ಕರಣ್ ಜೋಹರ್ ಮತ್ತು ಮನೀಶ್ ಪಾಲ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಚಿತ್ರರಂಗದ ಪ್ರಮುಖರಾದ ಪ್ರಸೂನ್ ಜೋಶಿ, ಮಧುರ್ ಭಂಡಾರ್ಕರ್, ಮೌನಿ ರಾಯ್, ರೆಸುಲ್ ಪೂಕುಟ್ಟಿ ಮತ್ತು ಪರಿಣಿತಿ ಚೋಪ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಂದು ಭಾರತೀಯ ಪನೋರಮಾ ಉದ್ಘಾಟಿಸಿ ಭಾಷಣ ಮಾಡಿದ ಅನುರಾಗ್ ಠಾಕೂರ್:
ಇದೇ ಮೊದಲ ಬಾರಿಗೆ ಚಿತ್ರೋತ್ಸವದಲ್ಲಿ ಒಟಿಟಿಗಳಿಗೂ ವೇದಿಕೆ ಕಲ್ಪಸಲಾಗಿದೆ. ಹಾಗೆಯೇ ನಿನ್ನೆಯ ಕಾರ್ಯಕ್ರಮದಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಮೆರಿಕದ ಹಿರಿಯ ನಿರ್ದೇಶಕ ಮಾರ್ಟಿನ್ ಸ್ಕಾಸ್ಸೇಜಿ, ಇಸ್ಟ್ವಾನ್ ಸಬೊ ಪ್ರಶಸ್ತಿಗೆ ಭಾಜನರಾದರು. ನಟಿ ಹೇಮಾಮಾಲಿನಿ ವರ್ಷದ ಅತ್ಯುತ್ತಮ ಚಲನಚಿತ್ರ ಪ್ರತಿಭೆ (Indian Film Personality of the Year 2021) ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ:
IFFI 2021: ಇಬ್ಬರು ಖ್ಯಾತ ನಿರ್ದೇಶಕರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ
ಕಾಂಗ್ರೆಸಿಗರನ್ನು ಆಸ್ಪತ್ರೆಗೆ ಕಳುಹಿಸಲು ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲೂ ಗೊತ್ತಿದೆ: ಅಬೂಬಕ್ಕರ್ ಕುಳಾಯಿ
Published On - 11:33 am, Sun, 21 November 21