AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸಿಗರನ್ನು ಆಸ್ಪತ್ರೆಗೆ ಕಳುಹಿಸಲು ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲೂ ಗೊತ್ತಿದೆ: ಅಬೂಬಕ್ಕರ್ ಕುಳಾಯಿ

ಎಸ್​ಡಿಪಿಐಗೆ ಸೇರುವುದಾದರೆ ಆಸ್ಪತ್ರೆಯಲ್ಲಿ ಮಲಗಲು, ಜೈಲಿಗೆ ಹೋಗಲು, ಖಬರಿಸ್ತಾನ ಸೇರಲು ಸಿದ್ದರಿರಬೇಕು. ಹಾಗಂತ ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ. ನಿಮ್ಮನ್ನು ಆಸ್ಪತ್ರೆಗೆ ಕಳುಹಿಸುವುದು ಗೊತ್ತಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಭಾಷಣದಲ್ಲಿ ಹೇಳಿದ್ದಾರೆ.

ಕಾಂಗ್ರೆಸಿಗರನ್ನು ಆಸ್ಪತ್ರೆಗೆ ಕಳುಹಿಸಲು ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲೂ ಗೊತ್ತಿದೆ: ಅಬೂಬಕ್ಕರ್ ಕುಳಾಯಿ
ಅಬೂಬಕ್ಕರ್ ಕುಳಾಯಿ
TV9 Web
| Updated By: preethi shettigar|

Updated on: Nov 21, 2021 | 11:08 AM

Share

ದಕ್ಷಿಣ ಕನ್ನಡ: ಕಾಂಗ್ರೆಸ್ ಪಕ್ಷದವರು ನಿರಾಶ ಭಾವನೆಗೆ ಹೋಗಿರುವುದನ್ನು ಗಮನಿಸುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್​ಡಿಪಿಐ (Social Democratic Party of India) ಪ್ರತಿನಿಧಿಗಳು ಬೆಳೆಯುತ್ತಿದ್ದಾರೆ. ಇದನ್ನು ಕಂಡು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾರೋ ಕಾಂಜಿಪೀಂಜಿ ಗಾಂಜಾದವರನ್ನು ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕಾಂಗ್ರೆಸಿಗರನ್ನು ಆಸ್ಪತ್ರೆಗೆ ಕಳುಹಿಸಲೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲು ನಮಗೆ ಗೊತ್ತಿದೆ ಎಂದು ಮಂಗಳೂರಿನ ಉಳ್ಳಾಲದಲ್ಲಿ ಎಸ್​ಡಿಪಿಐ (SDPI) ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಬಹಿರಂಗ ಬೆದರಿಕೆ ಒಡ್ಡಿದ್ದಾರೆ.

ಇಷ್ಟರವರೆಗೆ ನಾವು ತಲೆ ತಗ್ಗಿಸಿದ್ದೇವೆ. ಆದರೆ ನಮಗೆ ಎರಡು ಎಂ (M) ಇದೆ. ಇದರಲ್ಲಿ ಒಂದು ಮ್ಯಾನ್ ಪವರ್, ಇನ್ನೊಂದು ಮಸಲ್ ಪವರ್. ಇನ್ನೆಲ್ಲಿಯಾದರೂ ನಮ್ಮ ಪಕ್ಷದ ಕಾರ್ಯಕರ್ತರನ್ನು ಮುಟ್ಟಿದರೆ ಒಂದು ಎಂ ಬಳಕೆ ಮಾಡುತ್ತೇವೆ. ಎಸ್​ಡಿಪಿಐಗೆ ಸೇರುವುದಾದರೆ ಆಸ್ಪತ್ರೆಯಲ್ಲಿ ಮಲಗಲು, ಜೈಲಿಗೆ ಹೋಗಲು, ಖಬರಿಸ್ತಾನ ಸೇರಲು ಸಿದ್ದರಿರಬೇಕು. ಹಾಗಂತ ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ. ನಿಮ್ಮನ್ನು ಆಸ್ಪತ್ರೆಗೆ ಕಳುಹಿಸುವುದು ಗೊತ್ತಿದೆ ಎಂದು ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಭಾಷಣದಲ್ಲಿ ಹೇಳಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಎಸ್​ಡಿಪಿಐ ಮುಖಂಡನ ಭಾಷಣ ವೈರಲ್ ಆಗಿದೆ.

ಇದನ್ನೂ ಓದಿ: ಪುತ್ತೂರು: ರಥದಲ್ಲಿ ಸಾವರ್ಕರ್​ ಬದಲು ಟಿಪ್ಪು ಫೋಟೋ ಹಾಕಲು ಒತ್ತಡ; ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್​ಡಿಪಿಐ ಕಾರ್ಯಕರ್ತರು

ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಮೂವರು ಎಸ್​ಡಿಪಿಐ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ