India vs New Zealand T20I: ಈಡನ್‌ ಗಾರ್ಡನ್ಸ್‌ನಲ್ಲಿ ಗೆಲುವು ನಿರ್ಧಾರ ಮಾಡುತ್ತಾ ಟಾಸ್?: ಪಿಚ್, ಹವಾಮಾನ ವರದಿ ಹೇಗಿದೆ?

Eden Gardens, Weather, Pitch Report, IND vs NZ: ಈಡನ್ ಗಾರ್ಡನ್ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ಕೋಲ್ಕತಾದ ವಾತಾವರಣ 22 ರಿಂದ 30 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.

India vs New Zealand T20I: ಈಡನ್‌ ಗಾರ್ಡನ್ಸ್‌ನಲ್ಲಿ ಗೆಲುವು ನಿರ್ಧಾರ ಮಾಡುತ್ತಾ ಟಾಸ್?: ಪಿಚ್, ಹವಾಮಾನ ವರದಿ ಹೇಗಿದೆ?
Eden Gardens India vs New Zealand
Follow us
TV9 Web
| Updated By: Vinay Bhat

Updated on:Nov 21, 2021 | 11:31 AM

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ (T20I Series) ಸತತ ಎರಡು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ (Team India) ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೋಲ್ಕತ್ತಾದ ಇತಿಹಾಸ ಪ್ರಸಿದ್ಧ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಇಂದು ಇಂಡೋ-ಕಿವೀಸ್ (India vs New Zealand) ಅಂತಿಮ ಕದನ ನಡೆಯಲಿದ್ದು, ರೋಹಿತ್ ಶರ್ಮಾ (Rohit Sharma) ಪಡೆ ಕ್ಲೀನ್ ಸ್ವಿಪ್ ನತ್ತ ಚಿತ್ತ ನೆಟ್ಟಿದೆ. ಉಭಯ ತಂಡಗಳು ಅಂತಿಮ ಪಂದ್ಯಕ್ಕೆ ಕೆಲವೊಂದು ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಟೀಮ್ ಇಂಡಿಯಾದಲ್ಲಿ 19 ವಯೋಮಿತಿ ಹಾಗೂ ಭಾರತ ಎ ತಂಡಗಳಿಗೆ ಮಾರ್ಗದರ್ಶಕರಾಗಿದ್ದ ವೇಳೆಯೂ ದ್ರಾವಿಡ್ (Rahul Dravid) ತಂಡದಲ್ಲಿ ಆವರ್ತನ ಪದ್ಧತಿ ಜಾರಿಗೊಳಿಸಿದ್ದರು. ಇದೀಗ ಸರಣಿ ವಶವಾಗಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆಗಳಿವೆ.

ಜೈಪುರ ಹಾಗೂ ರಾಂಚಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಇದೀಗ ಈಡನ್ ಗಾರ್ಡನ್ ಮೈದಾನದಲ್ಲಿ ಟ್ರೋಫಿ ಎತ್ತಿ ಹಿಡಿಯುವುದು ಪಕ್ಕಾ ಆಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಬೆಂಚು ಕಾಯಿಸಿರುವ ಕೆಲ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಟೀಮ್ ಇಂಡಿಯಾದ ಪ್ರಮುಖ ಬಲವೇ ಓಪನರ್​ಗಳು. ನಾಯಕ ರೋಹಿತ್ ಶರ್ಮಾ ಮತ್ತು ಉಪ ನಾಯಕ ಕೆಎಲ್ ರಾಹುಲ್ ತಂಡಕ್ಕೆ ಬೊಂಬಾಟ್ ಆರಂಭ ಒದಗಿಸಿ ಅರ್ಧ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ.

ಆದರೆ, ಈಗಾಗಲೇ ಟಿ20 ಸರಣಿಯನ್ನ ತನ್ನ ವಶಕ್ಕೆ ತೆಗೆದುಕೊಂಡಿರುವ ಭಾರತವು ತನ್ನ ಬೆಂಚ್ ಸ್ಟ್ರೆಂಥ್ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೆಎಲ್ ರಾಹುಲ್, ರಿಷಭ್ ಪಂತ್, ಆರ್. ಅಶ್ವಿನ್ ಸೇರಿದಂತೆ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯಬಹುದು. ರುತುರಾಜ್ ಗಾಯಕ್ವಾಡ್, ಅವೇಶ್ ಖಾನ್‌ರಂತಹ ಯುವ ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಬಹುದು. ಇತ್ತ ಎರಡನೇ ಪಂದ್ಯಕ್ಕೆ ಮೂರು ಬದಲಾವಣೆ ಮಾಡಿಕೊಂಡಿದ್ದ ಕಿವೀಸ್ ತಂಡ ಕಡೇ ಪಂದ್ಯಕ್ಕೂ ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.

ಪಿಚ್ ಹೇಗಿದೆ?:

ಈಡನ್ ಗಾರ್ಡನ್ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ನವೆಂಬರ್ ತಿಂಗಳಲ್ಲಿ ಇಬ್ಬನಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಟಾಸ್ ನಿರ್ಣಾಯಕವಾಗಲಿದೆ. ಹಿಂದಿನ ಎರಡೂ ಪಂದ್ಯಗಳಲ್ಲೂ ರೋಹಿತ್ ಶರ್ಮ ಟಾಸ್ ಜತೆಗೆ ಪಂದ್ಯ ಜಯಿಸಲು ಯಶಸ್ವಿಯಾಗಿದ್ದರು. ಅಲ್ಲದೆ, ಇಲ್ಲಿನ ವಿಕೆಟ್‌ ಸ್ಪರ್ಧಾತ್ಮಕವಾಗಿ ಕೂಡಿದ್ದು, ಎರಡೂ ತಂಡಗಳಿಂದ ತೀವ್ರ ಪೈಪೋಟಿ ನಡೆಯಬಹುದು. ಅಂದಹಾಗೆ ಇಲ್ಲಿನ ಸರಾಸರಿ ಮೊತ್ತ 142 ರನ್‌ ಆಗಿದೆ. ಕಳೆದ ಪಂದ್ಯಗಳಂತೆ ಈ ಪಂದ್ಯದಲ್ಲಿಯೂ ಟಾಸ್‌ ಗೆದ್ದ ತಂಡ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಮಳೆ ಇದೆಯೇ?:

ಕೋಲ್ಕತಾದ ವಾತಾವರಣ 22 ರಿಂದ 30 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಪಂದ್ಯದ ದಿನದಂದು ಹ್ಯುಮಿಡಿಟಿ ಗರಿಷ್ಠ 63 ಪ್ರತಿಶತದಷ್ಟು ಇರಬಹುದು. ಹೀಗಾಗಿ ಭಾನುವಾರ ಮಳೆಯ ಮುನ್ಸೂಚನೆ ಇಲ್ಲ.

ಪಂದ್ಯದ ವಿವರ:

ಭಾರತ vs ನ್ಯೂಜಿಲೆಂಡ್‌ 3ನೇ ಟಿ20 ಪಂದ್ಯ

ದಿನಾಂಕ: ನವೆಂಬರ್ 21-2021

ಸಮಯ: ರಾತ್ರಿ 07:00 ಗಂಟೆಗೆ

ಸ್ಥಳ: ಈಡನ್‌ ಗಾರ್ಡನ್ಸ್‌ ಸ್ಟೇಡಿಯಂ, ಕೋಲ್ಕತ್ತಾ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ+ ಹಾಟ್​​ಸ್ಟಾರ್

Rohit Sharma: ವಿರಾಟ್ ಕೊಹ್ಲಿಯ ಎರಡು ಮಹತ್ವದ ದಾಖಲೆ ಪುಡಿ ಮಾಡಲು ಸಜ್ಜಾದ ರೋಹಿತ್ ಶರ್ಮಾ: ಏನದು?

IPL 2022: ಐಪಿಎಲ್ 2022ರ ಬಗ್ಗೆ ಮಹತ್ಚದ ಹೇಳಿಕೆ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

(India vs New Zealand 3rd T20 Eden Gardens Weather and Pitch Report Who will win todays Match)

Published On - 11:30 am, Sun, 21 November 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ