IPL 2022: ಐಪಿಎಲ್ 2022ರ ಬಗ್ಗೆ ಮಹತ್ಚದ ಹೇಳಿಕೆ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

Indian Premier League: ಐಪಿಎಲ್ 2022 ಟೂರ್ನಿ ಆಯೋಜನೆಗೆ ಎಲ್ಲಾ ಸಿದ್ಧತೆಗಳು ಆರಂಭಗೊಂಡಿದೆ. ಈ ಬಾರಿ ಅಭಿಮಾನಿಗಳಿಗೆ ಪ್ರವೇಶವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಭಾರತದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.

IPL 2022: ಐಪಿಎಲ್ 2022ರ ಬಗ್ಗೆ ಮಹತ್ಚದ ಹೇಳಿಕೆ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
IPL 2022 BCCI
Follow us
TV9 Web
| Updated By: Vinay Bhat

Updated on: Nov 21, 2021 | 9:34 AM

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 2022 (IPL 2022) ಟೂರ್ನಿಗೆ ಕಾಯುತ್ತಿರುವ ಅಭಿಮಾನಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುಡ್‌ನ್ಯೂಸ್ ಒಂದನ್ನು ನೀಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2022ರ (Indian Premier League 2022) ಆವೃತ್ತಿ ಭಾರತದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಶನಿವಾರದಂದು ಘೋಷಿಸಿದ್ದಾರೆ. ಹೊಸ ತಂಡಗಳ ಸೇರ್ಪಡೆಯಿಂದ ಐಪಿಎಲ್​ನ 15ನೇ ಸೀಸನ್ ‘ಹೆಚ್ಚು ರೋಚಕ’ವಾಗಲಿದೆ ಎಂದು ಅವರು ಹೇಳಿದ್ದಾರೆ. ಐಪಿಎಲ್ 2021ರ (IPL 2021) ಫೈನಲ್ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡಕ್ಕೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಮುಂದಿನ ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗುವುದು ಎಂದಿದ್ದರು. ಇದೀಗ ಜಯ್ ಶಾ ಐಪಿಎಲ್ ಆಯೋಜನೆಯನ್ನು ಖಚಿತಪಡಿಸಿದ್ದಾರೆ.

ಈ ಹಿಂದಿನಂತೆ ಭಾರತದ ನಗರಗಳಲ್ಲಿ ಐಪಿಎಲ್ 2022 ಟೂರ್ನಿ ನಡೆಯಲಿದೆ. ವಿಶೇಷತೆ ಅಂದರೆ 10 ತಂಡಗಳು ಹೋರಾಟ ನಡಸಲಿದೆ. 10 ನಗರಗಳಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ. ಬಿಸಿಸಿಐ ಈಗಾಗಲೇ ಎರಡು ಹೊಸ ತಂಡಗಳ ಬಿಡ್ಡಿಂಗ್ ಮುಗಿಸಿದೆ. ಮುಂದಿನ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ಮೆಘಾ ಹರಾಜು ನಡೆಯಲಿದೆ. ತಂಡದಲ್ಲಿ ಆಟಗಾರರು ಅದಲು ಬದಲಾಗಲಿದ್ದಾರೆ.

2022ನೇ ಸಾಲಿನ ಐಪಿಎಲ್‌ಗೆ ಅಹಮದಾಬಾದ್‌ ಮತ್ತು ಲಖನೌ ಫ್ರಾಂಚೈಸಿಗಳು ಸೇರ್ಪಡೆಯಾಗಿವೆ. ಹರಾಜು ನೀತಿ ಹಾಗೂ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿವರಗಳನ್ನು ಕಳೆದ ತಿಂಗಳಷ್ಟೇ ಬಿಸಿಸಿಐ ಬಹಿರಂಗಪಡಿಸಿತ್ತು. ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಟೂರ್ನಿಯು ಮತ್ತಷ್ಟು ರೋಚಕವಾಗಿರಲಿದೆ. ಮೆಗಾ ಹರಾಜು ನಡೆಯಲಿದ್ದು, ಹೊಸ ತಂಡಗಳು ಹೇಗಿರಲಿವೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಜಯ್ ಶಾ ತಿಳಿಸಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಐಪಿಎಲ್ ಟೂರ್ನಿ ಆಯೋಜನೆಗೆ ಎಲ್ಲಾ ಸಿದ್ಧತೆಗಳು ಆರಂಭಗೊಂಡಿದೆ. ಈ ಬಾರಿ ಅಭಿಮಾನಿಗಳಿಗೆ ಪ್ರವೇಶವಿದೆ. ಕೆಲ ಕಂಡೀಷನ್ ಕೂಡ ಇದೆ. ಆದರೆ ಈ ಹಿಂದಿನಂತೆ ಅಭಿಮಾನಿಗಳ ತಮ್ಮ ನೆಚ್ಚಿನ ತಂಡಕ್ಕೆ ಚಿಯರ್ ಅಪ್ ಮಾಡಲು ಅವಕಾಶವಿದೆ ಎಂದು ಜಯ್ ಶಾ ಹೇಳಿದ್ದಾರೆ.

ಹೊಸ ತಂಡ ಸೇರ್ಪೆಡೆಯಿಂದ ಐಪಿಎಲ್ ಹರಾಜಿನಲ್ಲಿ ಭಾರಿ ಪೈಪೋಟಿ ಏರ್ಪಡಲಿದೆ. ಸದ್ಯ ಕಣದಲ್ಲಿರುವ 8 ತಂಡಗಳಿಗೆ ಕೇವಲ ನಾಲ್ವರನ್ನು ರಿಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಇನ್ನುಳಿದ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಇತ್ತ ಹೊಸ ಎರಡು ತಂಡಕ್ಕೆ ಆರಂಭದಲ್ಲೇ 3 ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಬಲಿಷ್ಠ ಮೂವರು ಆಟಗಾರರನ್ನು ತಂಡ ಖರೀದಿ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಕೋವಿಡ್ ಸಾಂಕ್ರಾಮಿಕದ ಮಧ್ಯೆಯೇ 2021ನೇ ಋತುವಿನ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭಗೊಂಡಿತ್ತು. ಆಟಗಾರರು ಬಯೋಬಬಲ್‌ನಲ್ಲಿ ಇದ್ದು, ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೂ ಕೆಲವು ಆಟಗಾರರು ಕೋವಿಡ್‌ ಸೋಂಕಿಗೆ ಒಳಗಾಗಿದ್ದರಿಂದ ಅರ್ಧದಲ್ಲೇ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು.

India Probable Playing XI: ಮೂರನೇ ಟಿ20 ಪಂದ್ಯಕ್ಕೆ ಭಾರತದಲ್ಲಿ ಬರೋಬ್ಬರಿ 4 ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI

India vs New Zealand: ಇಂದು ಅಂತಿಮ ಮೂರನೇ ಟಿ20 ಕದನ: ಸರಣಿ ಕ್ಲೀನ್ ಸ್ವಿಪ್​ನತ್ತ ಟೀಮ್ ಇಂಡಿಯಾ ಚಿತ್ತ

(IPL 2022 BCCI Secretary Jay Shah confirmed that Indian Premier League 2022 will be played in India)

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ