India Probable Playing XI: ಮೂರನೇ ಟಿ20 ಪಂದ್ಯಕ್ಕೆ ಭಾರತದಲ್ಲಿ ಬರೋಬ್ಬರಿ 4 ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI

India vs New Zealand 3rd T20I Playing XI: 2ನೇ ಟಿ20 ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವ ಸೂಚನೆ ನೀಡಿದ್ದರು. ಅದರಂತೆ ಪ್ರಮುಖವಾಗಿ ನಾಲ್ಕು ಬದಲಾವಣೆ ನಿರೀಕ್ಷಿಸಲಾಗಿದೆ. ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರನ್ನು ಕಣಕ್ಕಿಳಿಸಬಹುದು.

India Probable Playing XI: ಮೂರನೇ ಟಿ20 ಪಂದ್ಯಕ್ಕೆ ಭಾರತದಲ್ಲಿ ಬರೋಬ್ಬರಿ 4 ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI
India Playing XI vs New Zealand 3rdT20I
Follow us
TV9 Web
| Updated By: Vinay Bhat

Updated on: Nov 21, 2021 | 8:43 AM

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ (T20I Series) ಸತತ ಎರಡು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ (Team India) ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೋಲ್ಕತ್ತಾದ ಇತಿಹಾಸ ಪ್ರಸಿದ್ಧ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಇಂದು ಅಂತಿಮ ಕದನ ನಡೆಯಲಿದ್ದು, ರೋಹಿತ್ ಶರ್ಮಾ (Rohit Sharma) ಪಡೆ ಕ್ಲೀನ್ ಸ್ವಿಪ್ ನತ್ತ ಚಿತ್ತ ನೆಟ್ಟಿದೆ. ಟಿ20 ವಿಶ್ವಕಪ್​ನಿಂದ (T20 World Cup) ಹೊರಬಿದ್ದ ಆಘಾತ ಮರೆಮಾಚಲು ಈ ಸರಣಿ ವೈಟ್​ವಾಶ್ ಭಾರತಕ್ಕೆ ಕೊಂಚ ನೆಮ್ಮದಿ ತರಬಹುದು. ಇದರ ನಡುವೆ ಸರಣಿಯ ಅಂತಿಮ ಪಂದ್ಯವನ್ನಾದರೂ ಗೆದ್ದು ಮುಖಭಂಗ ತಪ್ಪಿಸಿಕೊಳ್ಳುವ ಪ್ರಯತ್ನ ನ್ಯೂಜಿಲೆಂಡ್‌ನ‌ದ್ದು. ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಅಧಿಕಾರಯುತವಾಗಿಯೇ ಕಿವೀಸ್ (India vs New Zealand) ಪಡೆಯನ್ನು ಮಣಿಸಿದೆ. ನ್ಯೂಜಿಲೆಂಡ್ ಆರಂಭದಲ್ಲಿ ಅಬ್ಬರಿಸಿದರೂ ಡೆತ್‌ ಓವರ್‌ಗಳಲ್ಲಿ ದಿಢೀರ್ ಕುಸಿತ ಕಂಡು ಹಿನ್ನಡೆ ಅನುಭವಿಸಿದೆ. ಭಾರತ ಈ ತಪ್ಪನ್ನು ಮಾಡದೆ ಅದಾಗಲೇ ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸುತ್ತಿದೆ.

ರೋಹಿತ್ ಪಡೆಗೆ ಇದೊಂದು ಔಪಚಾರಿಕ ಪಂದ್ಯವಾದರೂ ಗೆಲುವು ಮಹತ್ವದ್ದಾಗಿದೆ. ಯಾಕಂದ್ರೆ ಇದು ರೋಹಿತ್ ಶರ್ಮಾ ಅವರಿಗೆ ನಾಯಕನಾಗಿ ಮೊದಲ ಸರಣಿ. ಜೊತೆಗೆ ಕೋಚ್ ರಾಹುಲ್ ದ್ರಾವಿಡ್​ಗೂ ಇದು ಮೊದಲ ಸರಣಿ. ಹೀಗಾಗಿ ಕ್ಲೀನ್ ಸ್ವಿಪ್ ಮಾಡಿದರೆ ವಿಶೇಷ ಸಾಧನೆಯಾಗಲಿದೆ. ಕಳೆದ 2ನೇ ಟಿ20 ಪಂದ್ಯ ಮುಗಿದ ಬಳಿಕ ರೋಹಿತ್ 3ನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವ ಸೂಚನೆ ನೀಡಿದ್ದರು. ಅದರಂತೆ ಪ್ರಮುಖವಾಗಿ ನಾಲ್ಕು ಬದಲಾವಣೆ ನಿರೀಕ್ಷಿಸಲಾಗಿದೆ.

ಹೌದು, ಟೀಮ್ ಇಂಡಿಯಾ ಇಂದಿನ ಪಂದ್ಯದ ಮೂಲಕ ತನ್ನ ಬೆಂಚ್ ಸ್ಟ್ರೆಂಥ್ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆಯು ಇದೆ. ಅನುಭವಿಗಳಿಗೆ ವಿಶ್ರಾಂತಿ ನೀಡಿ ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರನ್ನು ಕಣಕ್ಕಿಳಿಸಬಹುದು. ಪ್ರಮುಖವಾಗಿ ಸತತವಾಗಿ ಕ್ರಿಕೆಟ್ ಆಡುತ್ತಿರುವ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್​ಗೆ ವಿಶ್ರಾಂತಿ ನೀಡುವ ಸಂಭವವಿದೆ. ಹೀಗಾದಲ್ಲಿ ಓಪನರ್​ ಆಗಿ ರೋಹಿತ್ ಶರ್ಮಾ ಜೊತೆ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಹಿಂದಿನಂತೆ ಸೂರ್ಯಕುಮಾರ್ ಯಾದವ್ ಆಡಿದರೆ, 4ನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಬರಲಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ಇಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ನಿರ್ವಹಿಸಬಹುದು. ಅಕ್ಷರ್ ಪಟೇಲ್ ಮತ್ತು ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಆಗಿ ಆಡಲಿದ್ದಾರೆ. ಅಶ್ವಿನ್ ಬದಲು ಯುಜ್ವೇಂದ್ರ ಚಹಾಲ್ ಸ್ಥಾನ ಪಡೆಯಬಹುದು. ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಜೊತೆಗಿದ್ದರೆ, ದುಬಾರಿಯಾಗುತ್ತಿರುವ ದೀಪಕ್ ಚಹಾರ್ ಬದಲು ಆವೇಶ್ ಖಾನ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯಬಹುದು.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟಿ20 ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಮತ್ತು ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಕಾಣಲಿದೆ.

India vs New Zealand: ಇಂದು ಅಂತಿಮ ಮೂರನೇ ಟಿ20 ಕದನ: ಸರಣಿ ಕ್ಲೀನ್ ಸ್ವಿಪ್​ನತ್ತ ಟೀಮ್ ಇಂಡಿಯಾ ಚಿತ್ತ

(India Probable Playing XI for 3rd T20I vs New Zealand Four changes Ruturaj Gaikwad make comeback)