AB de Villiers: ಎಬಿಡಿ ನಿವೃತ್ತಿ ಘೋಷಿಸಲು ಇದುವೇ ಅಸಲಿ ಕಾರಣ
RCB: ಆರ್ಸಿಬಿ ಪರ 156 ಐಪಿಎಲ್ ಪಂದ್ಯಗಳಾಡಿರುವ ಎಬಿ ಡಿವಿಲಿಯರ್ಸ್ ಒಟ್ಟು 4,491 ರನ್‌ಗಳನ್ನು ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ.
Updated on: Nov 20, 2021 | 10:27 PM

ಆರ್ಸಿಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಕಳೆದ ತಿಂಗಳಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ ವಿದಾಯ ಹೇಳಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದ ಎಬಿಡಿ ಆ ಬಳಿಕ ಲೀಗ್ ಕ್ರಿಕೆಟ್ನಲ್ಲಿ ಮುಂದುವರೆದಿದ್ದರು.

ಅದರಲ್ಲೂ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪ್ರಮುಖ ಅಂಗವಾಗಿದ್ದರು. ಆರ್ಸಿಬಿ ಪರ 156 ಐಪಿಎಲ್ ಪಂದ್ಯಗಳಾಡಿದ್ದ ಎಬಿಡಿ ಒಟ್ಟು 4,491 ರನ್‌ಗಳನ್ನು ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ.

ಇನ್ನು ಆರ್ಸಿಬಿ ಪರ ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಇದಾಗ್ಯೂ ದಿಢೀರಣೆ ನಿವೃತ್ತಿ ಘೋಷಿಸಿ ಎಬಿಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಎಬಿಡಿ ಅವರ ಈ ನಿರ್ಧಾರ ಆರ್ಸಿಬಿ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಆದರೀಗ ಎಬಿಡಿ ಮತ್ತೆ ಆರ್ಸಿಬಿಗೆ ಕಂಬ್ಯಾಕ್ ಸಾಧ್ಯತೆಯಿದೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ ಬದಲಾಗಿ ಕೋಚ್ ರೂಪದಲ್ಲಿ ಎಂಬುದು ವಿಶೇಷ.

ಹೌದು, ಎಬಿ ಡಿವಿಲಿಯರ್ಸ್ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರ್ಸಿಬಿ ತಂಡ ಕೋಚ್ ಸಂಜಯ್ ಬಂಗಾರ್, ಪ್ರತಿ ತಂಡಕ್ಕೂ ಬ್ಯಾಟಿಂಗ್ ಕೋಚ್ ಇರಬೇಕಾಗಿರುವುದು ಅನಿವಾರ್ಯ. ಅದರಲ್ಲೂ ಎಬಿಡಿ ಅವರಂತಹ ಆಟಗಾರನಿಗೆ ಬ್ಯಾಟಿಂಗ್ ಕೋಚ್ ಸ್ಥಾನ ನೀಡುವುದು ಅದು ತಂಡಕ್ಕೆ ಮತ್ತು ಆಟಗಾರರಿಗೆ ಒಳ್ಳೆಯದು ಎಂದಿದ್ದಾರೆ.



















