Rohit Sharma: ವಿರಾಟ್ ಕೊಹ್ಲಿಯ ಎರಡು ಮಹತ್ವದ ದಾಖಲೆ ಪುಡಿ ಮಾಡಲು ಸಜ್ಜಾದ ರೋಹಿತ್ ಶರ್ಮಾ: ಏನದು?

Rohit Sharma Record: ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ 3141 ರನ್ ಕಲೆಹಾಕಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇವರು 87 ರನ್ ಕಲೆಹಾಕಿದರೆ ಭಾರತ ಪರ ಟಿ20 ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.

Rohit Sharma: ವಿರಾಟ್ ಕೊಹ್ಲಿಯ ಎರಡು ಮಹತ್ವದ ದಾಖಲೆ ಪುಡಿ ಮಾಡಲು ಸಜ್ಜಾದ ರೋಹಿತ್ ಶರ್ಮಾ: ಏನದು?
Rohit Sharma - Virat Kohli
Follow us
TV9 Web
| Updated By: Vinay Bhat

Updated on: Nov 21, 2021 | 10:34 AM

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿಂದು ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಅಂತಿಮ ಮೂರನೇ ಟಿ20 (3rd T20I) ಪಂದ್ಯ ನಡೆಯಲಿದೆ. ಈಗಾಗಲೇ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿರುವ ಭಾರತ (Team India) ಕ್ಲೀನ್ ಸ್ವಿಪ್​ನತ್ತ ಚಿತ್ತ ನೆಟ್ಟಿದೆ. ನೂತನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹಾಗೂ ನೂತನ ನಾಯಕ ರೋಹಿತ್ ಶರ್ಮ (Rohit Sharma) ಜೋಡಿ ಮೊದಲ ಸರಣಿಯಲ್ಲೇ ಮೋಡಿ ಮಾಡಿದೆ. ಇತ್ತ ಕಡೆ ಎರಡು ವಾರಗಳಲ್ಲಿ 5 ಟಿ20 ಪಂದ್ಯಗಳನ್ನಾಡಿರುವ ಪ್ರವಾಸಿ ನ್ಯೂಜಿಲೆಂಡ್ ಆಟಗಾರರು ಸಾಕಷ್ಟು ಬಳಲಿದ್ದು, ವೈಟ್‌ವಾಷ್ ಭೀತಿಯಿಂದ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ಇದರ ನಡುವೆ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma Record) ಹೊಸ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಅದುಕೂಡ ವಿರಾಟ್ ಕೊಹ್ಲಿ (Virat Kohli) ಅವರ ಅತಿ ದೊಡ್ಡ ದಾಖಲೆಯನ್ನು ಹಿಂದಿಕ್ಕಿ ಎಂಬುದು ವಿಶೇಷ.

ಹೌದು, ರೋಹಿತ್ ಶರ್ಮಾ ಸದ್ಯ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ 48 ರನ್ ಬಾರಿಸಿದ್ದರೆ, ಎರಡನೇ ಪಂದ್ಯದಲ್ಲಿ 55 ರನ್ ಚಚ್ಚಿದ್ದರು. ಒಟ್ಟು 103 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್ ಒಟ್ಟು 3141 ರನ್ ಕಲೆಹಾಕಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ 87 ರನ್ ಕಲೆಹಾಕಿದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದೊಡ್ಡ ದಾಖಲೆ ಬರೆಯಲಿದ್ದಾರೆ.

ಸದ್ಯ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ ಆಗಿದ್ದಾರೆ. ಇವರು 95 ಪಂದ್ಯಗಳಲ್ಲಿ 3227 ರನ್ ಬಾರಿಸಿದ್ದಾರೆ. ಸದ್ಯ ರೋಹಿತ್ 87 ರನ್ ಬಾರಿಸಿದರೆ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ. ಇನ್ನು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ನ್ಯೂಜಿಲೆಂಡ್​ನ ಮಾರ್ಟಿನ್ ಗಪ್ಟಿಲ್ ಆಗಿದ್ದಾರೆ. ಇವರು ಕಳೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಮಾರ್ಟಿನ್ 111 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 3248 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕೊಹ್ಲಿ ಮತ್ತು ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ.

ಇದರ ಜೊತೆಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ 50+ ರನ್ ಬಾರಿಸಿದ ಆಟಗಾರರ ಸಾಲಿನಲ್ಲಿ ವಿರಾಟ್ ಕೊಹ್ಲಿ ಜೊತೆ ರೋಹಿತ್ ಶರ್ಮಾ ಅವರು ಜಂಟಿ ಸ್ಥಾನ ಹಂಚಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಹಿಟ್​ಮ್ಯಾನ್ ಬ್ಯಾಟ್​ನಿಂದ ಅರ್ಧಶತಕ ಸಿಡಿಸಿದರೆ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ. ರೋಹಿತ್ ಬ್ಯಾಟ್​ನಿಂದ 25 ಅರ್ಧಶತಕ ಮತ್ತು 4 ಶತಕಗಳು ಬಂದಿವೆ. ವಿರಾಟ್ ಕೊಹ್ಲಿ 29 ಬಾರಿ 50+ ರನ್ ಬಾರಿಸಿದ್ದಾರೆ.

ಇನ್ನು ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಜೊತೆಗೂಡಿ ಮತ್ತೊಂದು ದಾಖಲೆ ಬರೆಯುವ ಅವಕಾಶವಿದೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇವರಿಬ್ಬರು ಜೊತೆಯಾಗಿ ಈವರೆಗೆ 27 ಇನ್ನಿಂಗ್ಸ್​ಗಳನ್ನು ಆಡಿದ್ದು ಇದರಲ್ಲಿ 5 ಬಾರಿ ಶತಕದ ಜೊತೆಯಾಟ ಆಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಾಬರ್ ಅಜಾಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಜೊತೆ ಜಂಟೆ ಸ್ಥಾನ ಹಂಚಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲೂ ಶತಕದ ಜೊತೆಯಾಟ ಆಡಿದರೆ ನೂತನ ಸಾಧನೆ ಮಾಡಲಿದ್ದಾರೆ.

IPL 2022: ಐಪಿಎಲ್ 2022ರ ಬಗ್ಗೆ ಮಹತ್ಚದ ಹೇಳಿಕೆ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

India Probable Playing XI: ಮೂರನೇ ಟಿ20 ಪಂದ್ಯಕ್ಕೆ ಭಾರತದಲ್ಲಿ ಬರೋಬ್ಬರಿ 4 ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI

(Rohit Sharma will see to surpass Virat Kohlis two Big records in Todays India vs New Zealand 3rd T20I Match)