ನೂತನವಾಗಿ ಆಯ್ಕೆ ಆಗುವ ಶಾಸಕರಿಗೆ ತರಬೇತಿ; ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ: ವಿಶ್ವೇಶ್ವರ ಹೆಗಡೆ ಕಾಗೇರಿ

TV9 Digital Desk

| Edited By: ganapathi bhat

Updated on: Nov 21, 2021 | 2:35 PM

ಶತಮಾನದ ಪಯಣ, ನಡೆಯಬೇಕಾದ ಮಾರ್ಗದ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ನಡೆದ ರೀತಿಯಲ್ಲೇ ಲೋಕಸಭಾ ಸ್ಪೀಕರ್ ಭಾಷಣ ಮಾಡಿದ್ದಾರೆ. ಇಲ್ಲಿ ಮಾಡಿದಂತೆ ಯಾರೂ ಅಲ್ಲಿ ವಿವಾದ ಮಾಡಲಿಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ನೂತನವಾಗಿ ಆಯ್ಕೆ ಆಗುವ ಶಾಸಕರಿಗೆ ತರಬೇತಿ; ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ: ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ (ಸಂಗ್ರಹ ಚಿತ್ರ)

ಬೆಂಗಳೂರು: ನೂತನವಾಗಿ ಆಯ್ಕೆಯಾಗುವ ಶಾಸಕರಿಗೆ ತರಬೇತಿ ನೀಡಬೇಕಿದೆ. ಉತ್ತಮ ವಿಧಾನಸಭೆ, ಪರಿಷತ್ ಪ್ರಶಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರ ಭಾಷಣ, ಪ್ರಶ್ನೋತ್ತರ ವೇಳೆ ಸದನದಲ್ಲಿ ಗದ್ದಲ ಆಗದಂತೆ ನೋಡಿಕೊಳ್ಳಲು ಸಮಾಲೋಚನೆ ಮಾಡಬೇಕಿದೆ. ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು (ನವೆಂಬರ್ 21) ಹೇಳಿಕೆ ನೀಡಿದ್ದಾರೆ.

ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಸ್ಪೀಕರ್​ಗಳ ಸಮ್ಮೇಳನ ನಡೆದಿದೆ. 27 ರಾಜ್ಯಗಳ ಸ್ಪೀಕರ್​ಗಳು, ಸಚಿವಾಲಯದ ಕಾರ್ಯದರ್ಶಿ, ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ಸಮ್ಮೇಳನದ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಶತಮಾನದ ಪಯಣ, ನಡೆಯಬೇಕಾದ ಮಾರ್ಗದ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ನಡೆದ ರೀತಿಯಲ್ಲೇ ಲೋಕಸಭಾ ಸ್ಪೀಕರ್ ಭಾಷಣ ಮಾಡಿದ್ದಾರೆ. ಇಲ್ಲಿ ಮಾಡಿದಂತೆ ಯಾರೂ ಅಲ್ಲಿ ವಿವಾದ ಮಾಡಲಿಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಇದನ್ನೂ ಓದಿ: ಅನುದಾನ ತಾರತಮ್ಯ ವಿರೋಧಿಸಿ ಸದನದಲ್ಲಿ ಜೆಡಿಎಸ್ ಸದಸ್ಯರ ಪ್ರತಿಭಟನೆ; ರೇವಣ್ಣ ವಿರುದ್ಧ ಸ್ಪೀಕರ್ ಕಾಗೇರಿ ಕೆಂಡಾಮಂಡಲ

ಇದನ್ನೂ ಓದಿ: ಟೋಲ್​ ಬೂತ್​ನಲ್ಲಿ ಶಾಸಕರಿಗೆ ಅವಮಾನ; ಸದನದಲ್ಲಿ ಜನರ ಕಷ್ಟಗಳಿಗೆ ಪರಿಹಾರ ಹುಡುಕೋಣ, ನಮ್ಮ ಸಮಸ್ಯೆಗಲ್ಲ ಎಂದ ಸ್ಪೀಕರ್ ಕಾಗೇರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada