AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಚೆಕ್ ಮಾಡಬೇಕು, ಆತ ಸಂಸದನಾಗೋದಕ್ಕೆ ಲಾಯಕ್ಕಿಲ್ಲ: ಇಕ್ಬಾಲ್ ಅನ್ಸಾರಿ

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾತನಾಡಿದ ಇಕ್ಬಾಲ್ ಅನ್ಸಾರಿ ಪ್ರತಾಪ್ ಸಿಂಹ ಸಂಸದನಾಗೋದಕ್ಕೆ ಲಾಯಕ್ಕಿಲ್ಲ. ಯಾವುದೋ ಅಲೆಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆ. ಆತನದು ಝೀರೋ ಟ್ಯಾಲೆಂಟ್ ಎಂದಿದ್ದಾರೆ.

‘ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಚೆಕ್ ಮಾಡಬೇಕು, ಆತ ಸಂಸದನಾಗೋದಕ್ಕೆ ಲಾಯಕ್ಕಿಲ್ಲ: ಇಕ್ಬಾಲ್ ಅನ್ಸಾರಿ
ಪ್ರತಾಪ್​ ಸಿಂಹ (ಸಂಗ್ರಹ ಚಿತ್ರ)
TV9 Web
| Updated By: ಸಾಧು ಶ್ರೀನಾಥ್​|

Updated on:Nov 16, 2021 | 9:25 AM

Share

ಕೊಪ್ಪಳ: ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ಹೆಸರಿನ ಬಗ್ಗೆ ವೈಯಕ್ತಿಕವಾಗಿ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಕಿಡಿಕಾರಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ‘ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಬೇಕು’ ಎಂದು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾತನಾಡಿದ ಇಕ್ಬಾಲ್ ಅನ್ಸಾರಿ ಪ್ರತಾಪ್ ಸಿಂಹ ಸಂಸದನಾಗೋದಕ್ಕೆ ಲಾಯಕ್ಕಿಲ್ಲ. ಯಾವುದೋ ಅಲೆಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆ. ಆತನದು ಝೀರೋ ಟ್ಯಾಲೆಂಟ್ ಎಂದಿದ್ದಾರೆ. ಪ್ರಿಯಾಂಕ್ ವಿರುದ್ಧ ಮಾತಾಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಮೊದಲು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗವುದು. ಸಿಂಹ ಖರ್ಗೆ ವಿರುದ್ಧ ಅಷ್ಟೇ ಅಲ್ಲ, ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡ್ತಾರೆ. ರಾಜ್ಯದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ದೊಡ್ಡ ಬಿಟ್ ಕಾಯಿನ್ ಹಗರಣದಲ್ಲಿ ಇರೋದು ಬಿಜೆಪಿಯವರು. ತನಿಖಾ ಸಂಸ್ಥೆಯಿಂದ ಎಲ್ಲವನ್ನೂ ಮರೆಮಾಚೋ ಕೆಲಸ ಮಾಡ್ತಿದಾರೆ. ಅದನ್ನು ಡೈವರ್ಟ್ ಮಾಡುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದರು.

ಇದನ್ನೂ ಓದಿ:

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೀವು ತಪ್ಪಿಸಬೇಕಾದ ಮತ್ತು ಸೇವಿಸಬೇಕಾದ 6 ಆಹಾರ ಪದಾರ್ಥಗಳಿವು Appu Samadhi|ಪುನೀತ್ ಸಮಾಧಿ ಬಳಿ ನಡೆದ ಅಚ್ಚರಿಯ ಘಟನೆ|TV9 Kannada

(bjp mp pratap simha should apologise says ex minister iqbal ansari in gangavathi)

Published On - 9:05 am, Tue, 16 November 21