ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ವಾರ್! ಯುವಕನಿಗೆ ಗಂಭೀರ ಗಾಯ
2020 ರಲ್ಲಿ ಬರ್ಕೆಯಲ್ಲಿ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಗಾಯಗೊಂಡ ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರನಾಗಿದ್ದ. ಅಂದು ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ಯತ್ನ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ಕಡಲತಡಿ ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ವಾರ್ ನಡೆದಿದೆ. ಇಷ್ಟು ದಿನ ಸೈಲೆಂಟಾಗಿದ್ದ ಮಂಗಳೂರು ಮತ್ತೆ ಬೆಚ್ಚಿಬಿದ್ದಿದೆ. ಎರಡು ಗುಂಪುಗಳ ನಡುವೆ ತಲ್ವಾರ್ ದಾಳಿ ನಡೆದಿದೆ. ಕಳೆದ ವರ್ಷ ನಡೆದ ಕೊಲೆಯೊಂದರ ವೈಷಮ್ಯದ ಹಿನ್ನೆಲೆಯಲ್ಲಿ ಗ್ಯಾಂಗ್ವಾರ್ ನಡೆದಿದೆ. ಲಾಂಗು, ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿದ್ದರಿಂದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಗಳೂರಿನ ಅಳಕೆ ಗ್ಯಾಂಗ್ಗೆ ಸೇರಿದ ಶ್ರವಣ್ ಎಂಬಾತ ಗ್ಯಾಂಗ್ವಾರ್ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
2020 ರಲ್ಲಿ ಬರ್ಕೆಯಲ್ಲಿ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಗಾಯಗೊಂಡ ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರನಾಗಿದ್ದ. ಅಂದು ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ಯತ್ನ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಸುಮಾರು 8 ಮಂದಿಯ ತಂಡವೊಂದು ಈ ದುಷ್ಕೃತ್ಯ ಎಸಗಿದ್ದು, ಗಾಯಾಳು ಪರಿಸ್ಥಿತಿ ಗಂಭೀರವಾಗಿದೆ. ಆತನಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರಂಭದಲ್ಲಿ ಇದೊಂದು ಕೊಲೆ ಯತ್ನ ಎಂದು ಭಾವಿಸಲಾಗಿತ್ತು. ಆದರೆ ಈಗ ಗ್ಯಾಂಗ್ವಾರ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ ಅಂತಾ ನಗರ ಹಿರಿಯ ಪೊಲೀಸ್ ಅಧಿಕಾರಿಗಳು ಟಿವಿ9 ಡಿಜಿಟಲ್ಗೆ ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2020 ರಲ್ಲಿ ನಡೆದಿದ್ದ ಇಂದ್ರಜಿತ್ ಕೊಲೆ ಕೃತ್ಯವನ್ನು ತಲವಾರ್ ಜಗ್ಗ ನೇತೃತ್ವದ ಬೋಳೂರು ಗ್ಯಾಂಗ್ ನಡೆಸಿತ್ತು. ಅದರ ಪ್ರತಿಕಾರಕ್ಕೆ ನಡೆದಿರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಘಟನೆಯ ಹಿಂದೆ ಯಾವುದೇ ಕೋಮು ದ್ವೇಷ ಇರುವುದಿಲ್ಲ. ಬಹುತೇಕ ಎಲ್ಲರೂ ಒಂದೇ ಕೋಮಿನವರು ಅಂತ ತಿಳಿದುಬಂದಿದೆ.
ಇದನ್ನೂ ಓದಿ
ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ
Bank Holidays in December 2021: ಡಿಸೆಂಬರ್ನಲ್ಲಿ ಬ್ಯಾಂಕ್ಗಳಿಗೆ ಒಟ್ಟು ಎಷ್ಟು ದಿನ ರಜಾ ಗೊತ್ತೆ?
Published On - 11:29 am, Tue, 30 November 21