ಕೆಲವು ಶಾಲೆಯಲ್ಲಿ ಕನ್ನಡ ತರಗತಿಯನ್ನು ಇಂಗ್ಲಿಷ್​ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ; ಹೀಗಾದರೆ ಕನ್ನಡ ಕಲಿಕೆ ಹೇಗೆ ಸಾಧ್ಯ?

ಕೆಲವು ಪ್ರತಿಷ್ಠಿತ ಶಾಲೆಯಲ್ಲಿ ಕನ್ನಡ ಪಠ್ಯವನ್ನು, ಕನ್ನಡ ತರಗತಿಯನ್ನು ಇಂಗ್ಲಿಷ್​ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ. ಮಕ್ಕಳು ಕನ್ನಡ ಓದಲು ಹೊರಟರೆ ಅದನ್ಯಾಕೆ ಓದ್ತ್ಯಾ? ಅಂತ ಕೇಳುವುದು ಇದೆ. ಹೀಗಾದರೆ ಕನ್ನಡ ಕಲಿಕೆ ಹೇಗೆ ಸಾಧ್ಯ?

ಕೆಲವು ಶಾಲೆಯಲ್ಲಿ ಕನ್ನಡ ತರಗತಿಯನ್ನು ಇಂಗ್ಲಿಷ್​ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ; ಹೀಗಾದರೆ ಕನ್ನಡ ಕಲಿಕೆ ಹೇಗೆ ಸಾಧ್ಯ?
ಪ್ರಾತಿನಿಧಿಕ ಚಿತ್ರ
Follow us
ganapathi bhat
|

Updated on:Nov 30, 2021 | 6:10 PM

ಕನ್ನಡ ರಾಜ್ಯೋತ್ಸವ ಎಂಬುದು ಕೆಲವೆಡೆ ಒಂದು ದಿನದ ಆಚರಣೆ ಆಗಿಯೂ, ಇನ್ನು ಕೆಲವು ಕಡೆಗಳಲ್ಲಿ ನವೆಂಬರ್ ಪೂರ್ತಿ ತಿಂಗಳ ಕಾರ್ಯಕ್ರಮವಾಗಿಯೂ ಕಾಣಸಿಗುತ್ತದೆ. ಕನ್ನಡದ ಹೆಸರಿನಲ್ಲಿ ಅದ್ಧೂರಿ ಸಮಾರಂಭಗಳು, ಘೋಷಣೆ ಇತ್ಯಾದಿಗಳು ಕೇಳಿಬರುತ್ತವೆ. ಈ ಮಧ್ಯೆ, ಕನ್ನಡದ ವಿಷಯ ಬಂದಾಗ ಯಾರ್ಯಾರು ನೆನಪಾದರೂ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕರನ್ನು ಬಹುತೇಕ ಬಾರಿ ಮರೆತೇ ಬಿಡುತ್ತೇವೋ ಎಂದು ಅನಿಸುತ್ತದೆ. ಕಾಳಜಿಯಿಂದ ಕನ್ನಡ ಕಲಿಸುವವರು ಕನ್ನಡ ಶಿಕ್ಷಕರು. ಅದು ಅಆಇಈದಿಂದ ತೊಡಗಿ ಪದವಿ ತರಗತಿವರೆಗೆ ಅಥವಾ ಅದಕ್ಕಿಂತಲೂ ಮುಂದೆ. ಈ ಹಿನ್ನೆಲೆಯಲ್ಲಿ, ಕನ್ನಡ ಕಲಿಸುವವರ ಅಭಿಪ್ರಾಯವನ್ನು ಪಡೆಯುವುದು ಅಥವಾ ಅವರನ್ನು ಮಾತನಾಡಿಸುವುದು ಮುಖ್ಯ ಎಂದೆನಿಸಿ ಟಿವಿ9 ಕನ್ನಡ ಡಿಜಿಟಲ್ ಕನ್ನಡ ಇಬ್ಬರು ಶಿಕ್ಷಕರನ್ನು ಮಾತನಾಡಿಸಿದೆ.

ನವೆಂಬರ್ ತಿಂಗಳ ವಿಶೇಷವಾಗಿ ಈ ಎರಡು ಸಂದರ್ಶನಗಳು ಇರಲಿವೆ. ಇಂದಿನ ತಲೆಮಾರಿನ ಮಕ್ಕಳನ್ನು ಕಂಡ, ಕನ್ನಡವನ್ನು ಬಹಳ ಪ್ರೀತಿಸುವ ಹೊಸ ತಲೆಮಾರಿನ ಕನ್ನಡ ಉಪನ್ಯಾಸಕ ಪುಟ್ಟಹೊನ್ನಯ್ಯ ಜಿಎಸ್ ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ. ಇಂದಿನ ಮಕ್ಕಳ ಮನಸ್ಥಿತಿ, ಶಾಲೆಯಲ್ಲಿ ಕನ್ನಡ ಕಲಿಸುವ ಸವಾಲು, ಪೋಷಕರು, ಸಹಶಿಕ್ಷಕರ ವಿಚಾರಗಳ ಬಗ್ಗೆ ಶಿಕ್ಷಕರು ಕೆಲವು ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕನ್ನಡ ಕಲಿಸುವ ವಿಚಾರದಲ್ಲಿನ ಸವಾಲುಗಳೇನು? ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಬರವಣಿಗೆಗೆ ಸಂಬಂಧಪಟ್ಟು ಮತ್ತು ಓದುವ ಹವ್ಯಾಸದ ಕೊರತೆಗಳಿವೆ. ಈಗ ಆಂಗ್ಲಮಾಧ್ಯಮ ಶಾಲೆಗಳ ಸಂಖ್ಯೆ ಹಾಗೂ ಅದರ ಮೇಲಿನ ಒಲವು ಹೆಚ್ಚಾಗುತ್ತಿರುವುದರಿಂದ ಕನ್ನಡವನ್ನು ನಗಣ್ಯ ಎಂದು ನೋಡಲಾಗುತ್ತಿದೆ. ಅದರಿಂದಲೂ ಮಕ್ಕಳಲ್ಲಿ ಕನ್ನಡದ ಮೇಲಿನ ಪ್ರೀತಿ ಕಡಿಮೆ ಆಗುತ್ತಿದೆ. ಬರವಣಿಗೆ ಹಾಗೂ ಓದು ಇರುವುದಿಲ್ಲ. ಬೋಧನಾ ಮಾಧ್ಯಮ ಮತ್ತೊಂದು ಸವಾಲು. ಆಡುಭಾಷೆ, ಗ್ರಾಂಥಿಕ ಭಾಷೆಯ ವ್ಯತ್ಯಾಸ. ಗ್ರಾಮೀಣ ಸೊಗಡು ಅನ್ನುವುದನ್ನು ಮಕ್ಕಳು ಕೆಲವರು ಸಿನಿಮೀಯ ಶೈಲಿಯಲ್ಲಿ ನೋಡುತ್ತಾರೆ. ಹೀಗಾಗಿ ಕನ್ನಡವನ್ನು ಗ್ರಾಂಥಿಕವಾಗಿ ಕಲಿಸುವಲ್ಲಿ ಶಿಕ್ಷಕರು ಶ್ರಮಿಸಲೇಬೇಕು. ಆ ರೀತಿಯ ಶಿಕ್ಷಣ ಬೇಕು. ಅದು ಭಾಷಾ ಕಲಿಕೆಗೆ ಪೂರಕವಾಗಿ ಇರುತ್ತದೆ, ಶಿಕ್ಷಕರಿಗೆ ಬೋಧನಾ ವಿಧಾನ ತಿಳುವಳಿಕೆ, ಅರ್ಹತೆ ಕೊರತೆ ಇರುವುದೂ ಇದೆ. ಗ್ರಾಮೀಣ ಭಾಗದಲ್ಲಿ ಇದು ಹೆಚ್ಚು. ಮುಖ್ಯವಾಗಿ ಕನ್ನಡ ಶಿಕ್ಷಕರನ್ನು ಮಾತ್ರ ಹೀಗೆ ಗುಣಮಟ್ಟ ಪರಿಗಣಿಸದೆ ಆಯ್ಕೆ ಮಾಡಿರುತ್ತಾರೆ. ಅದು ಭಾಷಾ ಕಲಿಕೆ ಮೇಲೆ, ಮುಂದಿನ ಪೀಳಿಗೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಕನ್ನಡವನ್ನು ವಿದ್ಯಾರ್ಥಿಗಳು ಕಲಿಯಲು ಬಯಸುತ್ತಾರೆಯೇ? ಅದು ಹೇಗೆ? ಒಂದು ತರಗತಿ ಎಂದು ನೋಡಿದಾಗ ಎಲ್ಲಾ ರೀತಿಯ ಮಕ್ಕಳು ಇರುತ್ತಾರೆ, ಕೇವಲ ಪಾಸ್ ಆದ್ರೆ ಸಾಕು ಎನ್ನುವವರೂ ಇರ್ತಾರೆ. ವಿಜ್ಞಾನ ವಿಭಾಗದ ಮಕ್ಕಳಿಗೆ ಕನ್ನಡ ಪಾಸ್ ಆದ್ರೆ ಸಾಕು ಅಂತ ಇರುತ್ತದೆ. ಬಿಇ ಅಥವಾ ಎಂಬಿಬಿಎಸ್ ಮಾಡಲು ಕನ್ನಡ ಅಗತ್ಯ ಇಲ್ಲ ಎಂಬ ಧೋರಣೆ ಇರುತ್ತದೆ. ಕನ್ನಡವನ್ನು ಇಷ್ಟಪಟ್ಟು ಕಲಿಯುತ್ತೇನೆ ಎನ್ನುವ ಅಭಿಪ್ರಾಯ ಶಿಕ್ಷಕರ ಮೇಲೆ ಕೂಡ ಅವಲಂಬಿಸಿ ಇರುತ್ತದೆ. ಶಿಕ್ಷಕರೇ ಅಸಡ್ಡೆ, ಉದಾಸೀನ ತೋರಿದರೆ ಮಕ್ಕಳು ಮತ್ತಷ್ಟು ಆಲಸ್ಯ ತೋರಿಸುತ್ತಾರೆ. ಜೊತೆಗೆ ಪೋಷಕರ ಪ್ರೋತ್ಸಾಹ ಕೂಡ ಬೇಕು. ಈ ಧೋರಣೆಯಿಂದ ಭಾಷಾ ಕಲಿಕೆ ಸುಲಲಿತ.

ಸಹಶಿಕ್ಷಕರು, ಪೋಷಕರು ಕನ್ನಡ ವಿಷಯವನ್ನು ಅಥವಾ ಶಿಕ್ಷಕರನ್ನು ಹೇಗೆ ಕಾಣುತ್ತಾರೆ? ಸಮಾನ ವೇತನ, ಸಮಾನ ಸೌಲಭ್ಯ, ಸಮಾನ ಗೌರವ ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವುದಿಲ್ಲ. ಕನ್ನಡ ಶಿಕ್ಷಕರನ್ನು ಕೀಳಾಗಿ ಕಾಣುವುದು ಖಂಡಿತಾ ಇರುತ್ತದೆ, ಮೂಲೆಗುಂಪಾಗಿ ಕಾಣುವುದು. ಬೇರೆ ಭಾಷೆ ಬೋಧಕ, ಕನ್ನಡ ಭಾಷೆ ಬೋಧಕ. ಈ ಇಬ್ಬರಿಗೂ ಒಂದೇ ವಿದ್ಯಾಭ್ಯಾಸ ಇತ್ಯಾದಿ ಇರುತ್ತದೆ. ಆದರೂ ಅವರನ್ನು ಕಾಣುವಲ್ಲಿ ವ್ಯತ್ಯಾಸ ಇರುತ್ತದೆ. ಇದೇ ಧೋರಣೆ ಸಹಶಿಕ್ಷಕರಿಗೂ ಪೋಷಕರಿಗೂ ಇರುವುದಿದೆ. ಕನ್ನಡ ಕಲಿಸುವುದು ತುಂಬಾ ಸುಲಭ, ಅದರಲ್ಲೇನಿದೆ ಎಂದು ಯೋಚನೆ ಇರುತ್ತದೆ. ಶಾಲೆಯ ಆವರಣದಲ್ಲಿ ಕನ್ನಡ ಮಾತನಾಡಿದ್ರೆ ದಂಡ ವಿಧಿಸುವ ಮನೋಧೋರಣೆಯೂ ಇದೆ. ಕನ್ನಡ ಕಲಿಯಲು ಕನ್ನಡ ಅವಧಿಯಲ್ಲಿ ಮಾತ್ರ ಅವಕಾಶ ಇರುತ್ತದೆ. ಕೆಲವು ಪ್ರತಿಷ್ಠಿತ ಶಾಲೆಯಲ್ಲಿ ಕನ್ನಡ ಪಠ್ಯವನ್ನು, ಕನ್ನಡ ತರಗತಿಯನ್ನು ಇಂಗ್ಲಿಷ್​ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ. ಹೀಗಾದರೆ ಕಲಿಕೆ ಹೇಗೆ ಸಾಧ್ಯ? ಮಕ್ಕಳು ಕನ್ನಡ ಓದಲು ಹೊರಟರೆ ಅದನ್ಯಾಕೆ ಓದ್ತ್ಯಾ? ಅಂತ ಕೇಳುವುದು ಇದೆ. ಕನ್ನಡದಲ್ಲಿ ಜಾಸ್ತಿ ಅಂಕ ಪಡೆದರೆ ಕನ್ನಡವನ್ನೇ ಓದ್ತಾನೆ ಅಂತ ಹೇಳುವುದೂ ಇದೆ. ಈ ಮಧ್ಯೆ ಕನ್ನಡವನ್ನು ಪ್ರೋತ್ಸಾಹಿಸುವ, ಇಷ್ಟಪಡುವ ಪೋಷಕರೂ ಇದ್ದಾರೆ.

ಕನ್ನಡ ಕಲಿಕೆ ಮುಂದೆ ಈ ಹಂತಕ್ಕೆ ಬರಬಹುದು ಎನ್ನುವುದಾದರೆ.. ಅಂಗೈ ಅಗಲ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಇದ್ದಾರೆ. ಇಲ್ಲಿಯೇ ಕನ್ನಡ ಕಲಿಸದೆ ನಾಶ ಆದರೆ, ಮುಂದೆ ಎಲ್ಲಿ ಉಳಿದೀತು? ಸಂಸ್ಕೃತ ಭಾಷೆ ಕೇವಲ ದೇವಭಾಷೆ ಅಂತ ಸೀಮಿತವಾಗಿದೆ ಹಾಗೆ ಆಗಬಹುದಾ ಎಂಬ ಆತಂಕ ಇದೆ. ಭಾಷೆಯ ದುರಭಿಮಾನ ಅಂತಲ್ಲ. ಕನಿಷ್ಠ ಇಲ್ಲಿಗೆ ಬರುವವರು ವ್ಯವಹಾರಕ್ಕಾದರೂ ಕನ್ನಡ ಕಲಿಯಬೇಕಲ್ಲ? ಕಚೇರಿಗಳಲ್ಲಿ ಕನ್ನಡ ಸೇವೆ ನೀಡುವುದು, ಮಾತನಾಡುವುದು ಬೇಕಲ್ಲ? ಈಗಲೇ ಈ ಬಗ್ಗೆ ನಾವು ಎಚ್ಚೆತ್ತುಕೊಂಡ್ರೆ ಒಳ್ಳೆಯದು.

ಈ ಸಂದರ್ಭದಲ್ಲಿ ಒಂದಷ್ಟು ವಿಚಾರ ಹಂಚಿಕೊಳ್ಳಬೇಕು ಎಂದರೆ.. ಕನ್ನಡ ರಾಜ್ಯೋತ್ಸವ, ಕನ್ನಡದ ಮೇಲಿನ ಪ್ರೀತಿ ನವೆಂಬರ್ 1ರ ಒಂದು ದಿನ ಮಾತ್ರ ಇರುವುದು ಇದೆ. ಐಟಿ ಪಾರ್ಕ್​ಗಳಲ್ಲಿ ಕೂಡ ಕನ್ನಡ ರಾಜ್ಯೋತ್ಸವ ಆಚರಣೆ ಅಂತ ಮಾಡ್ತಾರೆ. ಆದ್ರೆ ಅದು ಹೇಗೆ? ಎಷ್ಟು ದಿನಕ್ಕೆ? ಕೇವಲ ಸಾಮಾಜಿಕ ಜಾಲತಾಣದ ಸ್ಟೇಟಸ್​ಗೆ ಮಾತ್ರ ಸೀಮಿತವೇ? ಪೋಷಕರು ಮಕ್ಕಳ ಜೊತೆ ಮಾತನಾಡುವಾಗ ಅನಗತ್ಯವಾಗಿ ನೀನು ಇಂಗ್ಲಿಷ್​ನಲ್ಲಿ ಮಾತನಾಡು ಎನ್ನುವುದು ತಪ್ಪು. ಹಾಗೆ ಆಗಬಾರದು ಅನಿಸುತ್ತೆ. ಮಾತೃಭಾಷೆಯಲ್ಲೇ ಮಾತು ಒಳ್ಳೆಯದು.

ಭಾಷಾ ಶಿಕ್ಷಕರಿಗೆ ಸಿಗುವ ಪಾಠ ಮಾಡುವ ಕಾಲಾವಧಿ ಬಹಳ ಕಡಿಮೆ ಆಗಿದೆ. ವಾರಕ್ಕೆ ಎರಡು ಗಂಟೆ ಸಿಗುತ್ತಿದೆ. ಮೊದಲು ನಾಲ್ಕರಿಂದ ಐದು ಗಂಟೆ ಸಿಗುತ್ತಿತ್ತು, ಈಗ ಎರಡೇ ಗಂಟೆಯಲ್ಲಿ ಒಂದು ಪಾಠ ಮುಗಿಸಬೇಕಾಗಿದೆ. ಅಲ್ಲಿ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ ಪಾಠ ಆಗುತ್ತೆ. ಆರನೇ ತರಗತಿಯಿಂದಲೇ ಸಿಇಟಿ ಕಲಿಕೆ, ಸ್ಪೆಷಲ್ ಕ್ಲಾಸ್. ಈ ಮಧ್ಯೆ ಎರಡು ಗಂಟೆ ಕನ್ನಡ ಪಾಠ. ಅಂಥಾ ಕಡೆ ಪ್ರಿಂಟ್ ಮೆಟೀರಿಯಲ್ ಕೊಟ್ಟು, ಇದನ್ನು ಓದಿ ಕನ್ನಡ ಪರೀಕ್ಷೆ ಬರೆಯಿರಿ ಎಂದು ಹೇಳಿ ಕೈತೊಳೆದುಕೊಳ್ಳುವ ಪರಿಸ್ಥಿತಿ ಇದೆ. ಇದು ಬಹಳ ಕೆಟ್ಟದ್ದು.

ಮತ್ತೊಂದು ಸಂದರ್ಶನ: ಶಿಕ್ಷಣ ಸಂಸ್ಥೆಯ ಗಮನ ಅಂಕದ ಮೇಲೆ ಮಾತ್ರ ಇರುತ್ತದೆ; ತೀರಾ ಕೆಲವೊಮ್ಮೆ ಮಕ್ಕಳ ಭಾಷೆ ಬಗ್ಗೆ ಕಾಳಜಿ ತೋರುತ್ತಾರೆ

ಇದನ್ನೂ ಓದಿ:  ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಫಲಿತಾಂಶದ ವಿವರಗಳು ಇಲ್ಲಿದೆ

Published On - 8:38 am, Tue, 30 November 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ