ಆನೇಕಲ್: ಇಲಿ ಬಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 06, 2024 | 5:00 PM

ಇತ್ತೀಚೆಗೆ ಆಹಾರ ಸೇವಿಸಿ ಅಸ್ವಸ್ಥರಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅದರಂತೆ ಇಂದು(ಜೂ.06) ಬೆಂಗಳೂರಿನ ಜಿಗಣಿ (Jigani) ಸಮೀಪದ ಎಸ್.ವ್ಯಾಸ ಯೂನಿವರ್ಸಿಟಿ(S-VYASA UNIVERSITY)ಯಲ್ಲಿ ಇಲಿ ಬಿದ್ದಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ವಾಂತಿ ಮಾಡಿದ ಘಟನೆ ನಡೆದಿದೆ. ಇತ್ತ ರಾಯಚೂರಿನಲ್ಲಿಯೂ ಫುಡ್ ಪಾಯಿಸನ್‌ನಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ.

ಆನೇಕಲ್: ಇಲಿ ಬಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ
ಇಲಿ ಬಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳಿಗೆ ವಾಂತಿ
Follow us on

ಆನೇಕಲ್, ಜೂ.06: ಇಲಿ ಬಿದ್ದಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ವಾಂತಿ ಮಾಡಿದ ಘಟನೆ ಜಿಗಣಿ(Jigani) ಸಮೀಪದ ಎಸ್.ವ್ಯಾಸ ಯೂನಿವರ್ಸಿಟಿ(S-VYASA UNIVERSITY)ಯಲ್ಲಿ ನಡೆದಿದೆ. ಹೌದು, ನಿನ್ನೆ(ಜೂ.05) ರಾತ್ರಿ ಕಾಲೇಜು ಹಾಸ್ಟೆಲ್ ನಲ್ಲಿ ಊಟ ತಿಂದ ಕೂಡಲೇ ಕೆಲ ವಿದ್ಯಾ ರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿದೆ. ಬಳಿಕ ಊಟವನ್ನ ಪರಿಶೀಲನೆ ನಡೆಸಿದಾಗ ಇಲಿ ಕಂಡುಬಂದಿದೆ. ಪಲ್ಯದಲ್ಲಿ ಇಲಿ ಬಿದ್ದಿದ್ದನ್ನ ಕಂಡು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದ್ದು, ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಮನವೊಲಿಸಿದ ಕಾಲೇಜು ಆಡಳಿತ ಮಂಡಳಿ

ಇನ್ನು ಕಾಲೇಜು ಅಡಳಿತ ಮಂಡಳಿ ಬೇಜಾವಾಬ್ದಾರಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಹೊರಹಾಕಿದ್ದು, ಇನ್ನು ಮುಂದೆ ಈ ರೀತಿಯ ತಪ್ಪುಗಳ ಆಗದಂತೆ ನೋಡಿಕೊಳ್ಳುವುದಾಗಿ ಕಾಲೇಜು ಆಡಳಿತ ಮಂಡಳಿ ಹೇಳಿ, ವಿದ್ಯಾರ್ಥಿಗಳ ಮನವೊಲಿಸಿದೆ. ಇದಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ತರಗತಿಗೆ ಹಾಜರಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು ವಿವಿ ಹಾಸ್ಟೆಲ್​ನಲ್ಲಿ ಕಳಪೆ ಆಹಾರ ಸೇವಿಸಿ 10 ವಿದ್ಯಾರ್ಥಿಗಳು ಅಸ್ವಸ್ಥ: ರಸ್ತೆ ತಡೆದು ಧರಣಿ

ರಾಯಚೂರಿನಲ್ಲಿ ಫುಡ್ ಪಾಯಿಸನ್‌ನಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

ರಾಯಚೂರು: ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಲೇಡಿಸ್ ಹಾಸ್ಟೆಲ್‌ನಲ್ಲಿ ಫುಡ್ ಪಾಯಿಸನ್‌ನಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ನಡೆದಿದೆ. ಇದೀಗ ಐದು ವಿದ್ಯಾರ್ಥಿನಿಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ(ಜೂ.05) ಸಂಜೆ ತಿಂದ ಪಾನಿ ಪೂರಿ, ರಾತ್ರಿ ಊಟ ಎಗ್ ಕರಿ, ರೈಸ್​ನಿಂದ ಒಟ್ಟು 95 ವಿದ್ಯಾರ್ಥಿನಿಯರಲ್ಲಿ 20 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಶುರುವಾಗಿತ್ತು. ಸದ್ಯ ವಿದ್ಯಾರ್ಥಿನಿಯರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇಂದು(ಜೂ.06) ಬೆಳಿಗ್ಗೆ ಟೊಮ್ಯಾಟೊ ಬಾತ್, ಮಧ್ಯಾಹ್ನದ ಅನ್ನ ಸಾಂಬಾರ್
ಊಟ ಸಹ ಜೀರ್ಣವಾಗಿರಲಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Thu, 6 June 24