ಗೀತಂ ವಿವಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ವಿದ್ಯಾರ್ಥಿಗಳ ನಡುವೆ ನಡೆದ ಐಪಿಎಲ್ ಗಲಾಟೆಯೇ ಸಾವಿಗೆ ಕಾರಣವಾಯ್ತ?

| Updated By: sandhya thejappa

Updated on: Apr 28, 2022 | 11:39 AM

ಆಂಧ್ರ ವಿದ್ಯಾರ್ಥಿಗಳು, ಆರ್​ಸಿಬಿ ಕಪ್ ಗೆಲ್ಲಲ್ಲ ವಿಕೇಟ್​ಗಳು ಹೋಗುತ್ತಿವೆ ಅಂತ ಕಾಮೆಂಟ್ ಮಾಡಿ ಅಪಹಾಸ್ಯ ಮಾಡಿದ್ದರು. ಹೀಗಾಗಿ ಇಬ್ಬರ ನಡುವೆ ಕಿರಿಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಮಾತಿನ ಚಕಮಕಿ ಜೋರಾಗಿತ್ತು.

ಗೀತಂ ವಿವಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ವಿದ್ಯಾರ್ಥಿಗಳ ನಡುವೆ ನಡೆದ ಐಪಿಎಲ್ ಗಲಾಟೆಯೇ ಸಾವಿಗೆ ಕಾರಣವಾಯ್ತ?
ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ದ್ವಂಸ ಮಾಡಿದ್ದಾರೆ
Follow us on

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಬಳಿ ಇರುವ ಗೀತಂ ವಿವಿಯಲ್ಲಿ (Gitam University) ವಿದ್ಯಾರ್ಥಿನಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದು, ಇಡೀ ವಿಶ್ವವಿದ್ಯಾಲಯ ರಣರಂಗವಾಗಿದೆ. ಇನ್ನು ಈ ಘಟನೆಗೆ ಐಪಿಎಲ್ ಮ್ಯಾಚ್​ನಿಂದಾಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯೇ ಕಾರಣವಾಯ್ತ ಎಂಬ ಅನುಮಾನ ಹೆಚ್ಚಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಆರ್​ಸಿಬಿ ನಡುವೆ ನಡೆದಿದ್ದ ಮ್ಯಾಚ್​ನಲ್ಲಿ RCB ಔಟ್ ಆಗಿತ್ತು. SRH ಗೆಲುವು ಸಾಧಿಸಿತ್ತು. ಈ ವೇಳೆ ಮ್ಯಾಚ್ ನಲ್ಲಿ ಆರ್​ಸಿಬಿ ಆಲ್ ಔಟ್ ಆಗಿದ್ದ ಕಾರಣ ವಾಟ್ಸ್ ಆಪ್ ನಲ್ಲಿ ಗಲಾಟೆ ಶುರುವಾಗಿತ್ತು. ಒಂದೇ ಕಾಲೇಜಿನ ಆಂಧ್ರ ವಿದ್ಯಾರ್ಥಿಗಳ ನಡುವೆ ಮ್ಯಾಚ್ ವಿಚಾರವಾಗಿ ಕಿರಿಕ್ ಆಗಿತ್ತು.

ಆಂಧ್ರ ವಿದ್ಯಾರ್ಥಿಗಳು, ಆರ್​ಸಿಬಿ ಕಪ್ ಗೆಲ್ಲಲ್ಲ ವಿಕೇಟ್​ಗಳು ಹೋಗುತ್ತಿವೆ ಅಂತ ಕಾಮೆಂಟ್ ಮಾಡಿ ಅಪಹಾಸ್ಯ ಮಾಡಿದ್ದರು. ಹೀಗಾಗಿ ಇಬ್ಬರ ನಡುವೆ ಕಿರಿಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಮಾತಿನ ಚಕಮಕಿ ಜೋರಾಗಿತ್ತು. ನಂತರ ಅದೇ ವಿಚಾರವಾಗಿ ಕಾಲೇಜು ಬಳಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದರು. ಇದೇ ವಿಚಾರವಾಗಿ ವಿದ್ಯಾರ್ಥಿಗಳು, ಪೋಷಕರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಜೊತೆಗೆ ಆಂಧ್ರ ವಿದ್ಯಾರ್ಥಿಗಳ ಪರವಾಗಿ ಕಾಲೇಜು ಆಡಳಿತ ಮಂಡಳಿಯಿದೆ ಅಂತ ಆಕ್ರೋಶ ಹೊರ ಹಾಕಿದ್ರು.

ಈ ಗಲಾಟೆ ನಡುವೆ ತಡರಾತ್ರಿ ಯುವತಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. 6ನೇ ಮಹಡಿಯಿಂದ ಹಾರಿ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಗಾಂಡ ಮೂಲದ ಹಸೀನಾ(24) ಮೃತ ದುರ್ದೈವಿ. ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಾವನ್ನಪಿದ ಹಿನ್ನೆಲೆ ಎರಡು ಕಡೆಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ದ್ವಂಸ ಮಾಡಿದ್ದಾರೆ.

ಕಾಲೇಜಿಗೆ ರಜೆ ಘೋಷಿಸಿದ ಆಡಳಿತ ಮಂಡಳಿ:
ಘಟನೆ ಹಿನ್ನೆಲೆ ಗೀತಂ ವಿವಿಯ ಕಾಲೇಜಿಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ. ಗೀತಂ ವಿಶ್ವವಿದ್ಯಾಲಯದ ಇಂದಿನ ಎಲ್ಲಾ ಪರೀಕ್ಷೆಗಳು ರದ್ದಾಗಿವೆ. ಸಿಬ್ಬಂದಿ ತರಗತಿಗೆ ಬಂದಿದ್ದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ.

Published On - 11:33 am, Thu, 28 April 22