ಹಾರುತ್ತಿದ್ದ ವಿಮಾನದಲ್ಲಿ ಧೂಮಪಾನ ಮಾಡಿದ ಪ್ರಯಾಣಿಕ: ಕೆಂಪೇಗೌಡ ಏರ್ಪೋಟ್ ಪೊಲೀಸರಿಂದ ಬಂಧನ
ಚಲಿಸುತ್ತಿದ್ದ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ ಪ್ರಯಾಣಿಕ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ: ಚಲಿಸುತ್ತಿದ್ದ ವಿಮಾನದ ಶೌಚಾಲಯದಲ್ಲಿ ಸಿಗರೇಟ್ (smoking) ಸೇದಿ ಆತಂಕ ಸೃಷ್ಟಿಸಿದ್ದ ಪ್ರಯಾಣಿಕನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಕುಮಾರ್ ಬಂಧಿತ ಆರೋಪಿ. ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ. ಆಕಾಶ್ ಏರ್ ವಿಮಾನದಲ್ಲಿ ಆರೋಪಿ ನಿಯಮ ಉಲ್ಲಂಘಿಸಿದ್ದಾನೆ. ಕೆಐಎಬಿಯಲ್ಲಿ ಪ್ರವೀಣ್ ಕುಮಾರ್‌ನನ್ನು ಬಂಧಿಸಿ ಏರ್‌ಪೋರ್ಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕ ಶೇಹರಿ ಚೌದರಿ ಎಂಬಾತ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ. 6E 716 ಇಂಡಿಗೂ ವಿಮಾನದಲ್ಲಿ ಮಧ್ಯರಾತ್ರಿ 01:30 ರ ವೇಳೆ ಈ ಘಟನೆ ನಡೆದಿತ್ತು.
ಸಿಗರೇಟ್ ಸೇದಿದ ಪ್ರಯಾಣಿಕ
ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆ ವಿಮಾನದ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬೆಂಗಳೂರಿಗೆ ಬಂದ ಕೂಡಲೆ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕನನ್ನ ಭದ್ರತಾ ಪಡೆಗೆ ನೀಡಿದ್ದರು. ಪ್ರಯಾಣಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಏರ್ಪೋಟ್ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣದ ವೇಳೆ ಸಿಗರೇಟ್ ಸೇದಿದ ಭೂಪ; ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆಯೇ ಅರೆಸ್ಟ್
ಏರ್ಪೋಟ್ಗಳಲ್ಲಿ ಭದ್ರತಾ ಪಡೆಯ ನಿರ್ಲಕ್ಷ್ಯದಿಂದ ಪದೇ ಪದೇ ಫ್ಲೈಟ್ಗಳಲ್ಲಿ ಧೂಮಫಾನ ಪ್ರಕರಣ ಪತ್ತೆಯಾಗುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಆಕಾಶದಲ್ಲಿ ಹಾರುವ ವೇಳೆ ಧೂಮಪಾನದಿಂದ ಅಗ್ನಿ ಅವಾಂತರವಾದರೆ ಯಾರು ಹೊಣೆ ಎನ್ನುವ ಆತಂಕ ಎದುರಾಗಿದೆ.
ಮಾ. 5ರಂದು ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ ಯುವತಿ
ಮಾ. 5ರಂದು ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕ ಎಂಬ ಯುವತಿ ಇಂಡಿಗೋ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಳು.
ಇದನ್ನೂ ಓದಿ: ರಸ್ತೆ ಅಪಘಾತ ಹೆಚ್ಚಳ: ಜೀವ ರಕ್ಷಣೆಗಾಗಿ ಮಹತ್ವದ ಹೆಜ್ಜೆ ಇಟ್ಟ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ
ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆ ಮುನ್ನ ಸಿಗರೇಟ್ ಸೇದಿದ್ದಳು. ಶೌಚಾಲಯ ಬಾಗಿಲು ತೆಗಿಸಿದಾಗ ಡಸ್ಟ್ ಬಿನ್ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿತ್ತು. ಸಿಗರೇಟ್ ಕಂಡು ತಕ್ಷಣ ಸಿಬ್ಬಂದಿ ಡಸ್ಟ್ ಬಿನ್ಗೆ ನೀರು ಸುರಿದಿದ್ದರು. ಬಳಿಕ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಯುವತಿಯನ್ನು ವಶಕ್ಕೆ ಪಡೆಯಲಾಗಿತ್ತು.
ಈ ವೇಳೆ ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ಆರೋಪದಡಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.